ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯೬ ಶ್ರೀಮದ್ರಾಮಾಯಣವು [ಸರ್ಗ, ೪. ಅದರ ಆಳವನ್ನು ಇಂದು ನಿರ್ಣಯಿಸುವುದಕ್ಕೆ ಸಾಧವಲ ' ಎಲ್ಲಿ ನೋ ಡಿದರೂ ಫೆರಾಕ್ಷಸರು ' ಎಲ್ಲಿ ನೋಡಿದರೂ ಬಿರುಗಾಳಿಯ ಬಡಿತದಿಂ ದುಬ್ಬಿಬರುವ ಮಹಾತರಂಗಗಳು ' ಎಲ್ಲಿ ನೋಡಿದರೂ ಮೊಸಳೆಗಳು ! ಎ ಕ್ಲಿ ನೋಡಿದರೂ ಕೂರಸರ್ಪಗಳು' ಎಲ್ಲಿ ನೋಡಿದರೂ ವಾಯುವೇಗದಲ ದ ಮೇಲಕ್ಕೆ ಹಾರಿಬಿಳುತ್ತಿರುವ ದೊಡ್ಡದೊಡ್ಡ ಅಲೆಗಳು' ಹೀಗೆ ಭಯಂ ಕರವಾದ ಆ ಸಮುದ್ರವನ್ನು ನೋಡಿದೊಡನೆ, ಅಲ್ಲಿದ್ದ ವಾನರರಿಗೆ, ಆ ಸ ಮುದ್ರವನ್ನು ದಾಟುವ ಉಪಾಯವೇನೆಂಬ ಚಿಂತೆಯು ಬಹಳವಾಗಿ ಹು ಟ್ಟಿತು ಮತ್ತು ಆ ಕಾಲದಲ್ಲಿ ರಾತ್ರಿಯಾದುದರಿಂದ ಸಮುದಾಕಾಶಗಳೆರಡ ಏಕಾಕಾರವಾಗಿ ಕಾಣಿಸುವಂತೆ, ಕೆಳಗೆ ಸಮುದ್ರದಲ್ಲಿ ಅಗ್ರಿ ಕಣ ಗಳಂತೆ ಹೊಳೆಯುವ ಜಲಬಿಂದುಗಳು ! ಅದರಂತೆಯೇ ಆಕಾಶದಲ್ಲಿ ನಕ್ಷ ತ್ರಗಳು ' ಸಮುದ್ರದಲ್ಲಿ ಮಹಾಸರ್ಪಗಳು ' ಆಕಾಶದಲ್ಲಿ ನಾಗಜಾತಿಯ ದೇವತೆಗಳು | ಸಮುದ್ರದಲ್ಲಿ ರಾಕ್ಷಸರು' ಆಕಾಶದಲ್ಲಿ ದೈತ್ಯರು ಎ ಡೂ ಪಾತಾಳದಂತೆ ಗಂಭೀರವಾಗಿರುವುವು ' ಎರಡೂ ಭಯಂಕರವಾ ಗಿರುವುವು' ಸಮುದ್ರವು ಆಕಾಶವನ್ನು ಹೋಲುವುದು ! ಆಕಾಶವು ಸಮುದ್ರವನ್ನು ಹೋಲುವುದು) .ಸಮುದ್ರವಾವುದು, ಆಕಾಶವಾವುದೆಂಬ ಭೇದವೇ ಕಾಣುವುದಿಲ್ಲ ಸಮುದ್ರಜಲವು ಆಕಾಶದೊಡನೆ ಸೇರಿಹೋಗಿರು ವುದು ಆಕಾಶವು ಸಮುದ್ರಜಲದೊಡನೆ ಒಂದಾಗಿರುವುದು ಕೆಳಗೆ ಸಮ ದ್ರದೊಳಗಿನ ರತ್ನಗಳೊಡನೆ ಆಕಾಶದ ನಕ್ಷತ್ರಗಳೂ, ಕೆಳಗಿನ ತರಂಗಪ ರಂಪರೆಗಳೊಡನೆ ಆಕಾಶದ ಮೇಘಪರಂಪರೆಗಳೂ,ಏಕಾಕಾರವಾಗಿ ಕಾಣು ತಿದ್ದುದರಿಂದ, ಸಮುದ್ರಾಕಾಶಗಳೆರಡಕ್ಕೂ ಸ್ವಲ್ಪ ಮಾತ್ರವೂ ಭೇದವಿರಲಿ ಲ್ಲ ಅಲೆಗಳ ಬಡಿತದಿಂದುಂಟಾದ ಮಹಾಧ್ವನಿಯು ರಣಭೇರಿಯಂತೆ ಭಯಂ ಕರವಾಗಿ ಮೊಳಗುತಿರುವುದು ಮತು ಆ ಮಹಾಸಾಗರವು ರತ್ನ ರಾಶಿಗ ಳೊಡನೆ ಮೇಲೆದ್ದು ಮೊರೆಯುತ್ತಿರುವ ಅಲೆಗಳಿಂದ ವಾಯುಮಂಡಲದ ಐಕ್ಯ ಹೊಂದಿದಂತೆಯೂ, ಅಲ್ಲಲ್ಲಿ ತಲೆಯೆತ್ತುತ್ತಿರುವ ಜಲಜಂತುಗಳಿಂದ ಕೋಪಗೊಂಡು ಮೇಲೆ ಹಾರುವಂತೆಯೂ ಕಾಣುವುದು ಹೀಗೆ ಬಿರುಗಾ ಳಿಯಿಂದೊದರಲ್ಪಟ್ಟು, ಮೇಲೇಳುವ ಜಲಪ್ರವಾಹದಿಂದ ಆಕಾಶವನ್ನು ಮೆಟ್ಟುವಂತೆ ಉಲ್ಲೋಲಕಲ್ಲೋಲವಾದ ಆ ಸಮುದ್ರವನ್ನು ನೋಡುತಿದ್ದ ಹಾಗೆಲ್ಲಾ ಆ ವಾನರರ ಮನಸ್ಸಿನಲ್ಲಿಯೂ ಮಹೋತ್ಸಾಹವು ಹೆಚ್ಚು ತಿತು .