ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫.] ಯುದ್ದ ಕಾಂಡವು ೨೦೯೭ ಜಲಪ್ರವಾಹಗಳ ಮೊರೆತದಿಂದ ಮಹಾಧ್ವನಿಯನ್ನು ಬೀರುತ್ತ ಉದ್ಯಾಂತ ವಾದಂತಿರುವ ಆ ಸಮುದ್ರವನ್ನು ನೋಡಿ ಎಲ್ಲರೂ ಆಶ್ಚರದಿಂದ ಬೆರ ಗಾಗಿ ನಿಂತರು ಇಲ್ಲಿಗೆ ನಾಲ್ಕನೆಯ ಸರ್ಗವು ಶ್ರೀರಾಮನು ಸಮುದ್ರವನ್ನು ನೋಡುವಾಗ ) ಸೀತೆಯನ್ನು ಸ್ಮರಿಸಿಕೊಂಡು ದು:ಖಿಸುತ್ತಿರಲು, ( ಲಕ್ಷಸನು ಅವನನ್ನು ಸಮಾಧಾನಪಡಿಸಿದುದು ಆಮೇಲೆ ವಾನರಸೇನಾಪತಿಯಾದ ನೀಲನು, ಆ ಸೇನೆಯೆಲ್ಲವನ್ನೂ ರಾಜನೀತಿಶಾಸ್ತ್ರಕ್ರಮದಿಂದ ಸಮುದ್ರದ ಉತ್ತರತೀರದಲ್ಲಿಳಿಸಿ, ಆ ಸೇವೆಗೆ ಅಲ್ಲಲ್ಲಿ ತಕ್ಕ ರಕ್ಷಕರನ್ನೂ ನಿಯಮಿಸಿದನು ಮೈಂದದ್ವಿವಿದರೆಂಬ ವಾನರೋ ತಮರಿಬ್ಬರೂ ಆ ಸೇನೆಯ ಸುತ ಲೂ ಎಚ್ಚರಿಕೆಯಿಂದ ಕಾವಲಾಗಿ ಸು ತುತಿದ್ದರು ಹೀಗೆ ಸಮಸ್ತ ವಾನರಸೈನ್ಯವೂ ಆ ತೀರದಲ್ಲಿಳಿದಮೇಲೆ, ರಾಮ ನು ತನ್ನ ಸಮೀಪದಲ್ಲಿದ್ದ ಲಕ್ಷ್ಮಣನನ್ನು ನೋಡಿ - ವತ್ನ ಲಕ್ಷಣಾ | ಲೋಕದಲ್ಲಿ ಯಾವ ಮನುಷ್ಯನಿಗಾದರೂ ಕಾಲವು ಕಳೆಯುತ್ತ ಬಂದ ಹಾಗೆಲ್ಲಾ ವ್ಯಸನವೂ ತಗ್ಗಿ ಹೋಗುವುದುಂದು " ನನಗಾದರೋ ನನ್ನ ಪ್ರಿ ಯಪತ್ತಿ ಯನ್ನು ಕಾಣದ ದುಃಖವು ದಿನದಿನಕ್ಕೂ ಮೇಲೆಮೇಲೆ ಹೆಚ್ಚು ತಲೇ ಇರುವುದು ' ಆ ನನ್ನ ಪ್ರಿಯೆಯು ಅಷ್ಟು ದೂರದಲ್ಲಿರುವಳೆಂದೂ ನಾನು ದುಖಿಸುವವನಲ್ಲ | ಅವಳನ್ನು ರಾಕ್ಷಸನು ಕದ್ದುಮ್ಮಿರುವುದಕ್ಕೂ ನನಗೆ ದುಃಖವಿಲ್ಲ ! ಎಷ್ಟು ದೂರದಲ್ಲಿದ್ದರೂ ನಾನು ಅವಳನ್ನು ಕರೆಸಿ ಕೊಳ್ಳುವೆನು ಯಾವ ರಾಕ್ಷಸನನ್ನಾದರೂ ಕೊಲ್ಲಬಲ್ಲೆನು ! ಆದರೆ ಅವಳ ಯೌವನವೆಲ್ಲವೂ ಹೀಗೆಯೇ ವ್ಯರವಾಗಿ ಕಳೆದುಹೋಗುವುದೆಂಬ ಈ ಚಿಂತೆಯೊಂದೇ ನನ್ನನ್ನು ಬಹಳವಾಗಿ ಸಂಕಟಪಡಿಸುತ್ತಿರುವುದು " ಎಂದು ಹೇಳುತ್ಯ, ವಿರಹದುಃಖದಿಂದ ಪರವಶನಾಗಿ ಸಮುದ್ರದ ಗಾಳಿಗಿ ದಿರಾಗಿ ನಿಂತು (ಎಲೆ ಗಾಳಿಯೆ ' ಸೀನಾದರೂ ಈಗ ನನ್ನ ಪ್ರಿಯೆಯಾದ ಸೀತೆಯಿರುವ ಕಡೆ ಯಿಂದ ಬೀಸು ' ಅವಳನ್ನು ಸ್ಪರ್ಶಿಸಿ ನನ್ನ ನೂ ಸ್ಪರ್ಶಿಸು ಬೇರೆ ಏಥದಿಂದ ನನಗೆ ಅವಳ ಸ್ಪರ್ಶವು ದೊರಕದು! ಆಕೆಯು ತನ್ನ ಕಣ್ಣು