ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୨୦୧୪ ಶ್ರೀಮದ್ರಾಮಾಯಣವು (ಸರ್ಗ ೫. ಗಳಿಂದ ನೋಡುತ್ತಿರುವ ಚಂದ್ರನನ್ನು ಈಗ ನಾನೂ ನನ್ನ ಕಣ್ಣುಗಳಿಂದ ನೋಡುತ್ತಿರುವೆನಲ್ಲವೆ ' ಈ ಮೂಲಕವಾಗಿ ನಮ್ಮಿಬ್ಬರಿಗೂ ದೃಷ್ಟಿಸಂ ಬಂಧವಾಗುತ್ತಿರುವುದು ಅದರಂತೆಯೇ ಅವಳನ್ನು ಸ್ಪರ್ಶಿಸಿ ಬಂದ ನೀನು ನನ್ನ ನ್ನು ಸ್ಪರ್ಶಿಸಿದರೆ, ನಮ್ಮಿಬ್ಬರಿಗೂ ನಿನ್ನ ಮೂಲಕವಾಗಿ ಗಾತ್ರಸ್ಪರ್ಶ ವೂ ಉಂಟಾಗುವುದು ಸಮಸ್ತಭೋಗಗಳನ್ನೂ ತೊರೆದು ನನ್ನೊಡನೆ ಕಾಡಿಗೆ ಹೊರಟುಬಂದ ಆ ನನ್ನ ಪ್ರಿಯೆಯು, ರಾವಣನು ತನ್ನನ್ನು ಕದ್ದು ಯ್ಯುವಾಗ, ತನ್ನ ಪಾತಿವ್ರತ್ಯಾಗ್ನಿ ಯಿಂದಲೇ ಅವನನ್ನು ಗ್ರಹಿಸಬಲ್ಲವಳಾಗಿ ದ್ದರೂ, ನನ್ನಲ್ಲಿ ಭಕ್ತಿಯಿಂದ, ನನ್ನ ಸ್ನೇ ಗತಿಯನ್ನಾಗಿ ನಂಬಿ «(ಹಾ ನಾ ಥಾ” ಎಂದು ಮೊರೆಯಿಟ್ಟಳಲ್ಲವೆ' ಆ ಹೀನಧ್ವನಿಯೇ ಈಗಲೂ ನನ್ನ ಹೃ ದಯದಲ್ಲಿ ನಾಟಿ, ವಿಷವನ್ನು ಕುಡಿದಂತೆ ನನ್ನ ಸಾವಯವಗಳನ್ನೂ ದಹಿಸುತ್ತಿರುವುದು ಆಕೆಯ ವಿರಹವೆಂಬ ಕಟ್ಟಿಗೆಯಿಂದಲೂ, ಆಕೆಯ ಚಿಂತೆಯೆಂಬ ಜ್ವಾಲೆಯಿಂದಲೂ ಕೂಡಿದ ಕಾಮಾಗ್ನಿ ಯು ಹಗಲು ರಾತ್ರಿಯೂ ನನ್ನ ದೇಹವನ್ನು ಬಹಳವಾಗಿ ದಹಿಸುತ್ತಿರುವುದು, ವತ್ ಲಕ್ಷಣಾ ' ಈ ನನ್ನ ತಾಪವನ್ನು ತಗ್ಗಿಸುವುದಕ್ಕೆ ಬೇರೆ ಉಪಾಯವೇಇಲ್ಲ' ನಿನ್ನನ್ನು ನೋಡುತಿದ್ದಹಾಗೆಲ್ಲಾ ನನಗೆ ಆ ಸೀತೆಯ ಸ್ಮರಣವುಂಟಾಗು ವುದು ಆದುದರಿಂದ ಈಗ ನಾನು ನಿನ್ನ ನ್ಯೂ ಬಿಟ್ಟು, ಈ ಸಮುದ್ರಜಲದಲ್ಲಿ ಮುಳುಗಿ ಮಲಗಿಬಿಡುವೆನು ಹೀಗೆ ಎಡೆಬಿಡದೆ ನನ್ನ ನ್ನು ದಹಿಸುತ್ತಿರುವ ಕಾಮಾಗ್ನಿ ಯು ನೀರಿನಲ್ಲಿ ಮಲಗುವುದರಿಂದಾದರೂ ಸ್ವಲ್ಪವಾಗಿ ಶಾಂತ ವಾಗಬಹುದು ! ಹೇಗಾದರೂ ಆಗಲಿ ' ಮುಖ್ಯವಾಗಿ ಸೀತೆಯು ಇನ್ನೂ ಬದುಕಿರುವ ಸಂಗತಿಯನ್ನು ಕೇಳಿದೆನು ಈಗ ನಾನೂ, ಆಕೆಯೂ, ಒಂದೇ ಭೂಮಿಯನ್ನಾಶ್ರಯಿಸಿದಂತಾಯಿತಲ್ಲವೆ ? ಹೀಗೆ ಬಹಳ ದುಖಾಕಾಂತ - - - ---- ** *

  • ಇಲ್ಲಿ ರಾಮನು, ತಾನು ಲಕ್ಷಣವನ್ನು ಬಿಟ್ಟು ಸಮುದ್ರದಲ್ಲಿ ಮಲಗುವು ದನ್ನು ವಿಪರೀತಪ್ರಕ್ರಿಯೆಯನ್ನಾಗಿ ಹೇಳಿರುವನು ಇದರಿಂದ ಸಮುದ್ರದಲ್ಲಿಯೂ ತಾನು ಲಕ್ಷ್ಮಣನೊಡನೆ ಸೇರಿ ಮಲಗುವುದೇ ಸಹಜಪ್ರಕ್ರಿಯೆಯಾಗಿ ಧ್ವನಿಸುವುದು, ವಿಷ್ಣುವು ಸಮುದ್ರದಲ್ಲಿ ಶೇಷಶಾಯಿಯಾದುದರಿಂದ ಲಕ್ಷಣನು ಶೇಷಾವತಾರ ವೆಂದು ಇದರಿಂಹ ಸೂಚಿತವಾಗುವುದು.