ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೦ ಶ್ರೀಮದ್ರಾಮಾಯಣವು (ಸರ್ಗ, ೬ ಗದ ಆ ಘೋರರಾಕ್ಷಸಿಯರನ್ನೂ ಥೈಲ್ಯದಿಂದೊದರಿಕೊಂಡು ಯಾ ವಾಗ ನನ್ನ ಮುಂದೆ ಗೋಚರಿಸುವಳೊ ! ಆ ಸೀತೆಯೋ ಸಹಜವಾಗಿ ಯೇ ಕೃಶವಾದ ಮೈಯುಳ್ಳವಳು ! ಇದರಮೇಲೆ ಕಾಲದೇಶಸ್ಥಿತಿಯು ಹೀಗೆ ವಿಪರೀತವಾಗಿ ಬಂದು, ದುಃಖದಿಂದಲೂ, ಉಪವಾಸದಿಂದಲೂ ಇನ್ನೂ ಬಹಳವಾಗಿ ಕೃತಿಸಿರುವಳು ' ಇದರಲ್ಲಿ ಸಂದೇಹವಿಲ್ಲ. ನಾನು ಆ ರಾವಣನ ಎದೆಗೆ ಬಾಣಗಳನ್ನು ನಾಟಿ, ತಿರುಗಿ ಸೀತೆಯನ್ನು ಪಡೆದು, ನನ್ನ ಮನೋವ್ಯಾಧಿಯನ್ನು ಯಾವಾಗ ನೀಗಿಸಿಕೊಳ್ಳುವೆನೋ ? ದೇವಕ ವೈಯಂತಿರುವ ಆ ಸಾಥ್ವಿಯ ಪ್ರೀತಿಯಿಂದ ಬಂದು, ನನ್ನಿಂದಾಲಿಂಗಿತ ಳಾಗಿ ಯಾವಾಗ ಆನಂದಬಾಷ್ಪವನ್ನು ಬಿಡುವಳೊ ಕೊಳೆಬಟ್ಟೆಯನ್ನು ತೆಗೆದು ಬಿಸುಡುವಂತೆ ಯಾವಾಗ ನಾನು ಭಯಂಕರವಾದ ಈ ಸೀತಾವಿ ಯೋಗದುಃಖವನ್ನು ನೀಗಿಬಿಡುವೆನೋ !” ಎಂದು ನಾನಾವಿಧವಾಗಿ ವಿಲಪಿ ಸುತಿದ್ದನು ಇಷ್ಟರಲ್ಲಿ ಹಗಲು ಕಳೆದು,ಸೂರಿನ ಕಾಂತಿಯು ಕಂದಿ,ಅಸ್ತಮ ಯವಾಯಿತು ಆಗ ಲಕ್ಷಣನು ರಾಮನಿಗೆ ನಾನಾವಿಧದಿಂದ ಸಾಮಾಧಾ ನವಾಕ್ಯವನ್ನು ಹೇಳಿ, ಅವನಿಗೆ ದುಃಖಶಾಂತಿಯನ್ನು ಮಾಡಿದನು ಆದರೂ ರಾಮನು ಸೀತೆಯ ಚಿಂತೆಯನ್ನು ಬಿಡದೆ, ದುಃಖಿತನಾಗಿಯೇ ಆಗಿನ ಸಂ ಧ್ಯಾಕಾಠ್ಯವನ್ನು ನಡೆಸಿದನು ಇಲ್ಲಿಗೆ ಐದನೆಯ ಸರ್ಗವು ಆತ್ತಲಾಗಿಇಂಕೆಯಲ್ಲಿ ರಾವಣನು,ಹನುಮಂತನು ( ನಡೆಸಿಹೋದ ಕಾರಗಳಿಗಾಗಿ ಚಿಂತಿಸುತ್ತ, ಮುಂ 3 ದೆ ಶತ್ರುಗಳು ದಂಡೆತ್ತಿ ಬರುವುದಕ್ಕೆ ಮೊದಲುತಾನು > ( ಮಾಡಿಡಬೇಕಾದ ಸನ್ನಾ ಹಗಳನ್ನು ಕುರಿತು ತನ್ನ ) ಮಂತ್ರಿಗಳೊಡನೆ ಆಲೋಚಿಸಿದುದು ಇಂದ್ರಪರಾಕ್ರಮವುಳ್ಳ ಮಹಾತ್ಮನಾದ ಹನುಮಂತನು, ಲಂಕೆಯ ಔ ನಡೆಸಿಹೋದ ಭಯಂಕರಕಾರಗಳನ್ನು ಕುರಿತು ರಾವಣನ ಮನಸ್ಸಿನಲ್ಲಿ

  • ಇದುವರೆಗೆ ಇತ್ತಲಾಗಿ ರಾಮನ ವೃತ್ತಾಂತವನ್ನು ತಿಳಿಸಿ, ಇಲ್ಲಿಂದ ಮುಂದೆ ಅತ್ತಲಾಗಿ ಹನುಮಂತನು ಲಂಕೆಯನ್ನು ಬಿಟ್ಟು ಹೋದಮೇಲೆ ನಡೆದ ರಾವಣನ ವೃ ತಾಂತವನ್ನಾರಂಭಿಸುವುದಾಗಿ ತಿಳಿಯಬೇಕು