ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, & | ಯುದ್ಧಕಾಂಡವು. ೨೧೦೧ ಬಹಳವಾದ ಕಳವಳವು ಹುಟ್ಟಿತು ಆ ಕಾವ್ಯಗಳನ್ನು ನೆನೆಸಿಕೊಂಡು ತನಗೆ ತನೇ ಲಜ್ಜೆಯಿಂದ ತಲೆಯನ್ನು ತಗ್ಗಿಸಿ, ತನ್ನ ಮುಂದಿದ್ದ ರಾಕ್ಷಸಮಂತ್ರಿ ಗಳನ್ನು ಕುರಿತು (ಎಲೆ ಅಮಾತ್ಯರೆ ? ಆಹಾ ! ಏನಾಶ್ರವು " ಯಾವು ದೋ ಒಂದು ಸಾಮಾನ್ಯವಾದ ಕಡುಕಪಿಯಂತಿದ್ದ ಹನುಮಂತನು ದು ರ್ಗಮವಾದ ಈ ನಮ್ಮ ಲಂಕಗೆ ಪ್ರವೇಶಿಸಿದನಲ್ಲವೆ ? ಅದೂ ಹಾಗಿರಲಿ !' ಈ ನಮ್ಮ ಪಟ್ಟಣವೆಲ್ಲವನ್ನೂ ಕಲಿಸಿ, ನಾವು ಎಷ್ಟೊ ರಹಸ್ಯವಾಗಿ ಒಚ್ಚಿಟ್ಟಿದ್ದ ಸೀತೆಯನ್ನೂ ಕಂಡುಹೋದನಲ್ಲಾ' ಅಷ್ಟೆ ಅಲ್ಲ ' ನಮ್ಮ ಚೈತ್ಯಪ್ರಾಸಾದವನ್ನೂ ಮುರಿದು ಕಡಹಿದನು' ಎಷ್ಟೋ ಮಂದಿ ವೀರೆರಾ ಕ್ಷಸರನ್ನೂ ಕೊಂದನ.! ಒಂದು ಕಾಡುಕಪಿಯೇ ಹೀಗೆ ಈ ನಮ್ಮ ಲಂಕಗೆ ಇಷ್ಟು ದುರವಸ್ಥೆಯನ್ನು ತಂದಿಟ್ಟಿತಲ್ಲಾ' ಇನ್ನು ನಾವು ಮುಂದೆ ನಡೆಸ ಬೇಕಾದುದೇನು ? ನಮ್ಮೆಲ್ಲರಿಗೂ ಯಾವುದು ಮುಂದೆ ಹಿತವೋ, ಯಾವು ದು ನಮ್ಮಿಂದ ಸಾಧ್ಯವೋ, ಮುಂದಿನ ಕಾಠ್ಯಕ್ಕೆ ಯಾವುದು ಅನುಕೂಲ ವೋ ಅದನ್ನು ನೀವೆಲ್ಲರೂ ಯೋಚಿಸಿ ಹೇಳಿರಿನಿಮಗೆ ಶುಭವಾಗಲಿ' ಒಂದು ವೇಳೆ ನೀವು ಎಣೆಯಿಲ್ಲದ ವಿಠ್ಯವುಳ್ಳ ನಮ್ಮಂತಹ ರಾಕ್ಷಸರಿಗೆ ಈ ಮಂತ್ರಾ ಲೋಚನೆಗಳಕೆಂದು ಶಂಕಿಸಬಹುದು ಮಂತ್ರಾಲೋಚನಯೇ ಜಯಕ್ಕೆ ಮೂಲವೆಂದು ದೊಡ್ಡವರು ಹೇಳಿರುವರು ಆ ದುದರಿಂದಲೇ ನಾನು ಈಗ ನಿಮ್ಮೊಡನೆ ರಾಮನ ವಿಷಯವಾಗಿ ಮಂತ್ರಾಲೋಚನೆಯನ್ನು ಮಾಡುತ್ತಿ 'ಕುವೆನು ಲೋಕದಲ್ಲಿ ಪುರುಷರು ಉತ್ತಮರೆಂದೂ, ಮಧ್ಯಮರೆಂದೂ, ಅಧಮರೆಂದೂ ಮೂರು ಬಗೆಯಾಗಿರುವರು ಇವರೆಲ್ಲರೂ ಒಟ್ಟಾಗಿಯೇ ಕೇಳತಿರುವುದರಿಂದ, ಅವರವರ ಸ್ವರೂಪವನ್ನು ಪ್ರತ್ಯೇಕವಾಗಿ ತಿಳಿಯುವು ದು ಸುಲಭವಲ್ಲ ಆದುದರಿಂದ ಈಗ ನಾನು ನಿಮಗೆ ಅವರ ಗುಣದೋಷಗ ಛನ್ನು ತಿಳಿಸಬೇಕಾಗಿರುವುದು ಯಾವನು, ಮಂತ್ರಾಲೋಚನೆಗಳನ್ನು ನಿರ್ಣ ಯಿಸುವುದರಲ್ಲಿ ನಿಪುಣರಾಗಿಯೂ, ತನಗೆ ಹಿತೈಷಿಗಳಾಗಿಯೂ, ಇರುವ ಮಂತ್ರಿಗಳೊಡನೆಯಾಗಲಿ, ತನ್ನ ಸುಖದುಃಖಗಳನ್ನೇ ತಮ್ಮ ಸುಖದುಃಖ ಛಂದ, ಭಾವಿಸುವ ಸ್ನೇಹಿತರೊಡನೆಯಾಗಲಿ, ಯಾವಾಗಲೂ ತನಗೆ ಹಿತ ವನ್ನು ಕೋರುವ ಬಂಧುಗಳೊಡನೆಯಾಗಲಿ ಸೇರಿ, ಚೆನಾ ಗಿ ಆಲೋಚಿಸಿ