ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೮ ಶ್ರೀಮದ್ರಾಮಾಯಣವು [ಸರ್ಗ ೮' ಯುಳ್ಳವನೇ ಶತ್ರುಗಳನ್ನು ಜಯಿಸುವನು ಆದುದರಿಂದ ನಮ್ಮಲ್ಲಿ ಕಾಮ ರೂಪಿಗಳಾಗಿಯೂ, ಶೂರರಾಗಿಯೂ, ಕೋರಸ್ವಭಾವವುಳ್ಳವರಾಗಿಯೂ, ಭಯಂಕರಾಕಾರವುಳ್ಳವರಾಗಿಯೂ ಇರುವ ಕೆಲವು ರಾಕ್ಷಸರು ಒಂದಾಗಿ ಸೇರಿ, ಮನುಷ್ಯರೂಪವನ್ನು ಧರಿಸಿ ರಾಮನಬಳಿಗೆ ಹೋಗಲಿ ಅಲ್ಲಿ ಅವ ರಲ್ಲರೂ ಅವನ ಮುಂದೆ ನಿಂತು ಅವನನ್ನು ನೋಡಿ ನಿನ್ನ ತಮ್ಮನಾದ ಭ ರತನು ನಮ್ಮ ನ್ನು ಕಳುಹಿಸಿರುವನು' ನಿನ್ನನ್ನು ಕರೆಸಿಕೊಳ್ಳುವುದಕ್ಕಾಗಿ ಬೇ ಕಾದ ಪ್ರ ತತ್ವಗಳನ್ನೂ ನಡೆಸಿರುವನು.” ಎಂದು ಹೇಳಲಿ ಇದನ್ನು ಕೇಳಿ ರಾಮನು ತನ್ನ ಸೇನೆಯನ್ನು ಅಲ್ಲಿಯೇ ನಿಲ್ಲಿಸಿ ಶೀಘ್ರದಲ್ಲಿಯೂ ಹೊರಟು ಹೋಗುವನು ಇಷ್ಟರಲ್ಲಿ ನಾವು ಇಲ್ಲಿಂದ ಶೂಲಗಳನ್ನೂ, ಶಕ್ತಿಗಳನ್ನೂ, ಗದಗಳನ್ನೂ , ಬಿಲ್ಲುಬಾಣಗಳನ್ನೂ , ಕತ್ತಿಗಳನ್ನೂ ಹಿಡಿದು ಬೇಗನ ಅಲ್ಲಿಗೆ ಹೋಗುವೆವು ಅಲ್ಲಿ ಗುಂಪುಗುಂಪಾಗಿ ಆಕಾಶದಿಂದ ಕಲ್ಲುಗಳನ್ನೂ , ಆ ಯುಧಗಳನ್ನೂ ವರ್ಷಿಸಿ, ಸಮಸ್ತವಾನರಸೈನ್ಯಗಳನ್ನೂ ಕೊಂದು ಯಮ ಪುರಿಗೆ ಕಳುಹಿಸುವೆವು ಹೀಗಾದರೆ ಆ ರಾಮಲಕ್ಷ್ಮಣರಿಬ್ಬರೂ ನಮ್ಮನ್ನು ನಂಬಿ ಮೋಸಹೋಗುವರಲ್ಲದೆ, ತಮಗೆ ತಕ್ಕ ಸಹಾಯವಿಲ್ಲದುದಕ್ಕಾಗಿ ಕೋ ನೆಗೆ ತಾವೇ ಪ್ರಾಣವನ್ನೂ ಬಿಡುವರು”ಎಂದು, ಆಮೇಲೆ ಕುಂಭಕರ್ಣನ ಮಗನದ ಸಿಕುಂಭನೆಂಬ ಸೇನಾಪತಿಯು ಕೋಪಬಂದೆದ್ದು, ರಾವಣನ ಮುಂದೆ ನಿಂತು, ಅಲ್ಲಿದ್ದ ಸಮಸ್ತರಾಕ್ಷಸರನ್ನೂ ನೋಡಿ ( ಎಲ ರಾಕ್ಷಸರೆ! ನೀವೆಲ್ಲರೂ ನಮ್ಮ ಮಹಾರಾಜರೊಡನೆ ಇಲ್ಲಿ ಯೇ ಸುಮ್ಮನಿರಿ ' ನಾನೂ ೭ನೇ ಹೋಗಿ, ಲಕ್ಷಣಸಹಿತನಾದ ರಾಮನನ್ನೂ , ಸುಗ್ರೀವನನ್ನೂ, ಹ ನುಮಂತನನ್ನೂ, ಸಮಸ್ತ ವಾನರರನ್ನೂ ಕೊಂದು ಬರುವೆನು” ಎಂದನು. ಆಮೇಲೆ ಪಕ್ಷತಾಕಾರವುಳ್ಳ ವಜಹನುವೆಂಬರಾಕ್ಷಸನು ಕೋಪದಿಂದೆದ್ದು, ನಾಲಗೆಯಿಂದ ತುಟಿಯನ್ನು ಸವರುತ್ತ (ಎಲೆ ರಾಕ್ಷಸರೆ' ನೀವೆಲ್ಲರೂ ಇಲ್ಲಿ ನಿಮಗಿಷ್ಟ ಬಂದಂತೆ ನಿಮ್ಮ ನಿಮ್ಮ ಕಾಠ್ಯಗಳನ್ನು ನೋಡುತ್ತಿರಿ'ಹೆದರಬೇಡಿರಿ ನಾನೊಬ್ಬನೇ ಆ ವಾನರರೆಲ್ಲರನ್ನೂ ತಿಂದು ತೀರಿಸುವೆನು, ನೀವು ನಿಶ್ಚಿಂತ