ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೨ ಶ್ರೀಮದ್ರಾಮಾಯಣವು (ಸರ್ಗ ೯. ಬಹಳ ಪರಾಕ್ರಮಶಾಲಿಯ ಧರನಿರತನು, ಆಂತವನೊಡನೆ ನಿಷ್ಕಾರಣ ವಂಗಿ ವೈರವನ್ನಿಟ್ಟುಕೊಳ್ಳುವುದೇ ಎಂದಿಗೂ ನಮಗೆ ಯುಕ್ತವಲ್ಲ ಆತ ನಿಗೆ ಸೀತೆಯನ್ನೊಪ್ಪಿಸಿಬಿಡಿರಿ ' ರಾಮನು ಇಲ್ಲಿಗೆ ದಂಡೆತ್ತಿ ಬಂದು, ಅನೆ ಕುದುರೆಗಳಿಂದಲೂ, ರತ್ನ ಸಮೂಹಗಳಿಂದಲೂ ತುಂಬಿದ ನಮ್ಮ ಲಂಕೆ ಯನ್ನು ತನ್ನ ಬಾಣಗಳಿಂದ ಭ೦ದಿಸುವದಕ್ಕೆ ಮೊದಲೇ ಅವನಿಗೆ ಸೀತೆಯ ನ್ಯೂ ಪ್ಪಿಸಿಬಿಡಿರಿ ” ಅತಿಭಯಂಕರವಾಗಿಯೂ, ಇತರರಿಗೆ ದುರ್ಜಯವಾ ಗಿಯೂ ಇರುವ ಆ ದೊಡ್ಡ ವಾನರಸೈನ್ಯವು ಬಂದು ನಮ್ಮ ಲಂಕೆಯನ್ನು ಮುತ್ತುವುದರೊಳಗಾಗಿಯೇ ಸೀತೆಯನ್ನು ಕೊಟ್ಟುಬಿಡಿರಿ ? ಈಗ ನಾವೇ ಹೋಗಿ ರಾಮನಿಗೆ ಆತನ ಪ್ರಿಯಪತ್ನಿ ಯನ್ನೊಪ್ಪಿಸದಿದ್ದ ಪಕ್ಷದಲ್ಲಿ ಈ ನಮ್ಮ ಲಂಕೆಯೆಲ್ಲವೂ ನಾಶಹೊಂದುವುದು ಇಲ್ಲಿನ ವಾದ ಸಮಸ್ಯ ರಾಕ್ಷಸರ ನಾಶಹೊಂದುವರು LAಣ' ಒಂಧುತ್ತಾಭಿಮ ನಂದ ನಾನು ಈಗ ಹೇಳುವ ಮಾತು ಹಿತವೆಂದೂ ಪಢನೆಂದೂ ತಿಳಿ? ರಾಮಸಿಗೆ ಸೀತೆಯನ್ನೊಪ್ಪಿಸಿ ಓಡು ಮುಂದೆ ರಾಜಕುಮಾರನಾದ ಆ ರಾಮನು ಶರ ತ್ಕಾಲದ ಸೂರಕಿರಣದಂತೆ ಅತಿಕವಾಗಿಯೂ, ಹೊಸದಾದ ಅಲಗುಳ್ಳು ದಾಗಿಯೂ, ಬಹಳ ದೃಢವಾಗಿಯೂ, ಅಮೋಘವಾಗಿಯೂ ಇರುವ ತನ್ನ ಬಾಣಸಮೂಹವನ್ನು ನಿನ್ನ ವಧಕ್ಕಾಗಿ ಪ್ರಯೋಗಿಸುವುದಕ್ಕೆ ಮೊದಲೇ ರಾಮನಿಗೆ ಸೀತೆಯನೊ ಪ್ಪಿಸಿಬಿಡು ಸುಖವನ್ನೂ , ಧವನ ಕೆಡಿಸತಕ್ಕ ನಿನ್ನ ಈ ಕೋಪವನ್ನು ಬಿಟ್ಟುಬಿಡು ಸಂತೋಷವನ್ನೂ, ಕೀರ್ತಿಯನ್ನೂ ಹೆಚ್ಚಿಸತಕ್ಕ ದರವನ್ನೇ ಅವಲಂಬಿಸು ನನ್ನಲ್ಲಿ ಪ್ರಸನ್ನನಾಗಿ ನನ್ನ ಮಾ ತನ್ನು ನಡೆಸಿಕೊಡು ! ಹಾಗೆ ನಡೆಸಿದರೆ ಮಾತ್ರವೇ ನಾವೆಲ್ಲರೂ ನಮ್ಮ ಮನೆಮಂದಿಮಕ್ಕಳೊಡನೆ ಇನ್ನೂ ಕೆಲವು ಕಾಲದವರೆಗೆ ಸುಖವಾಗಿ ಬದು ಕಿರಬಹುದು ರಾಮನಿಗೆ ಸೀತೆಯನ್ನೊಪ್ಪಿಸಿಬಿಡು ' ನನ್ನ ಮಾತನ್ನು ಕೇಳು” ಎಂದನು ರಾಕ್ಷಸೇಶ್ವರನಾದ ರಾವಣನು ವಿಭೀಷಣನು ಹೇಳಿದ ಈ ಮಾ ತನ್ನು ಕೇಳಿದಮೇಲೆ ಕದಲಿದ ಮನಸ್ಸುಳ್ಳವನಾಗಿ, ಆ ಸಭಿಕರೆಲ್ಲರನ್ನೂ ಕಳುಹಿಸಿ, ತಾನೂ ತನ್ನ ಅಂತಃಪುರಕ್ಕೆ ಹೋದನು. ಇಲ್ಲಿಗೆ ಒಂಬತ್ತನೆಯ ಸರ್ಗವು.