ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೬ ಶ್ರೀಮದ್ರಾಮಾಯಣವು (ಸರ್ಗ ೧೦. ಮಸ್ಕರಾಕ್ಷಸರೂ, ರಾಕ್ಷಸಸ್ತಿ ಯರೂ, ಅಂತಃಪುರಸ್ತಿಯರ , ಇನ್ನೂ ಈ ಪಟ್ಟಣದಲ್ಲಿರುವ ಸಮಸ್ಯಪ್ರಜೆಗಳೂ ಚೆನಾ ಗಿ ನೋಡಿರುವರು ಯಾರುನೋಡಿದರೇನು?ನಿನ್ನ ಮಂತ್ರಿಗಳೆಲ್ಲರೂ ನಿನ್ನ ಮುಖೋಲ್ಲಾಸವನ್ನ ನುಸರಿಸಿಯೇ ನಡೆಯತಕ್ಕವರಾದುದರಿಂದ,ಇದೊಂದನ್ನೂ ನಿನ್ನ ಕಿವಿಗೆ ಹಾ ಕದೆ ಸುಮ್ಮನೆ ಹೋಗುತ್ತಿರುವರು ನಾನಾದರೋ ನಿನಗೆ ಒಡಹುಟ್ಟಿದ ತಮ್ಮನು ಶ್ರೀ ಕರುಳಿನ ಸಂಬಂಧವು ನನ್ನನ್ನು ಬಾಧಿಸುತ್ತಿರುವುದರಿಂದ ನಾನು ಕಂಡು ಕೇಳಿದುದೆಲ್ಲವನ್ನೂ ಸಿಸಿ ಡನೆ ಯಥಾಸ್ಥಿತವಾಗಿ ಹೇಳದೆ ತೀರದು ಸೀನೂ ನಿನ್ನ ಮನಸ್ಸಿನಲ್ಲಿ ನ್ಯಾಯರೀತಿಯಿಂದ ಪರಾಲೋಚಿಸಿ ನೋಡು ನಿನ್ನ ಮನಸ್ಸಿನಲ್ಲಿಯೂ ಚೆನ್ನಾಗಿ ನಿರ್ದರಿಸಿಕೊಂಡು ಆಲೋಚಿತ ವಾದ ಕಾರವನ್ನು ನಡೆಸು” ಎಂದನು ಹೀಗೆ ಅನೇಕಮಂತ್ರಿಗಳ ಮದ್ಯದಲ್ಲಿ ವಿಭೀಷಣನು ರಾವಣನ ಮುಂವೆಹಿತವಾಗಿಯೂ, ಮಹಾಫಲಪ್ರದವಾಗಿಯೂ ಯುಕ್ತಿಯುಕ್ತವಾಗಿಯೂ, ಭೂತಭವಿಷ್ಯ ಸ್ವರಮಾನಗಳೆಂಬ ಮೂರುಕಾ ಲಗಳಲ್ಲಿಯ ಶ್ರೇಯಸ್ಕರವಾಗಿಯೂ ಇರುವ ಮಾತನ್ನು ಎಷ್ಟೇ ಮೃದು ವಾಗಿ ಹೇಳಿದರೋ,ಆದನ್ನು ಕೇಳಿದೊಡನೆ ರಾವಣನಿಗೆ ಅತ್ಯಾಕೋಶವು ಹು ಟೈತು ಆಗಲೂ ತನ್ನ ಹಟವನ್ನು ಬಿಡದೆ ವಿಭೀಷಣನನ್ನು ಕುರಿತು « ವಿಭೀ ಷಣಾ ' ಸಾಕು ಸುಮ್ಮನಿರು ' ನನಗೆ ಲೆಕ್ಕ ಮಾತ್ರವೂ ಯಾರಿಂದಲೂ ಭ ಯವಿಲ್ಲ. ನನ್ನ ಕೈಗೆ ಸಿಕ್ಕಿ ಬಿದ್ದಿರುವ ಸೀತೆಯನ್ನು ರಾಮನು ಇನ್ನೆಂದಿಗೂ ಬಿಡಿಸಿಕೊಳ್ಳಲಾರನು. ಇಂದ್ರಾದಿದೇವತೆಗಳನೆ ತನಗೆ ಬೆಂಬಲವಾಗಿ ಕರೆ ತಂ: ರೂ ನನ್ನ ಮುಂದೆ ನಿಲ್ಲಲಾರನು ಇನ್ನು ಆತನಿಗೆ ಯುದ್ಧದಾಸೆಯೇಕೆ? ಇನ್ನು ಮೇಲೆ ಅವನಿಗೆ ಸೀತೆಯು ಸಿಕ್ಕುವುದೆಂದರೇನು?” ಎಂದನು. ಅನೇಕ ದೇವಸೈನ್ಯಗಳನ್ನು ಧ್ವಂಸಮಾಡಿದವನಾಗಿಯೂ, ಮಹಾಬಲನಾಗಿಯೂ, ಯುದ್ಧದಲ್ಲಿ ಭಯಂಕರಪರಾಕ್ರಮವಳ್ಳನಾಗಿಯೂ ಇದ್ದ ರಾವಣನು, ತನಗೆ ಹಿತವನ್ನು ಪದೇಶಿಸುವುದಕ್ಕಾಗಿ ಬಂದ ತಮ್ಮನಾದ ವಿಭೀಷಣನಿಗೆಹೀ ಗೆಂದು ಹೇಳಿ, ಆಗಲೇ ಆತನನ್ನು ಹಿಂದಕ್ಕೆ ಕಳುಹಿಸಿಬಿಟ್ಟನು ಇಲ್ಲಿಗೆ ಹ ತನೆಯ ಸರ್ಗವು.