ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೧ | ಯುದ್ಧಕಾಂಡವು ೨೧೧೭ ರಾವಣನು ವಿಭೀಷಣನ ಮಾತಿನಿಂದ ಕದಲಿದ ಮನಸ್ಸುಳ್ಳವನಾಗಿ, ತಿರುಗಿ ಮಂತ್ರಿಗಳೊಡನೆ ಆ ಲೋಚಿಸುವುದಕ್ಕಾಗಿ ಮಂತ್ರ ಸಭೆಯನ್ನು ಪ್ರವೇಶಿಸಿದುದು | ಪಾಪಿಯಾದ ರಾವಣನಿಗಾದರೋ ಅತ್ತಲಾಗಿ, ಸೀತೆಯವಿಷಯವಾ ದ ಕಾಮವೊಂದು' ಇತ್ತಲಾಗಿ ತನಗೆ ಹಿತರಾದ ವಿಭೀಷಣಾದಿಗಳು ತನ್ನ ದಾರಿಗೆ ಬಾರದೆ ತನ್ನಲ್ಲಿ ಅನಾದರವನ್ನು ತೋರಿಸುವುದೊಂದು ! ತಾನು ಸೀತೆಯನ್ನು ಕದ್ದು ತಂದ ಪಾಪಭಯವೊಂದು ಇವುಗಳಿಂದ ಬಹಳವಾದ ಚಿಂತೆಯು ಹುಟ್ಟಿತು ಕಾಲವು ಮಿಂಚಿದಷ್ಟೂ, ಯುದ್ಧವು ಸಮೀಪಿಸುತ್ತಿ ರುವುದರಿಂದ ಮಂತ್ರಿಗಳೊಡನೆಯೂ, ಸ್ನೇಹಿತರೊಡನೆಯ ಕಲೆತು, ಮಂ ತ್ರಾಲೋಚನೆಯನ್ನು ನಡೆಸುವುದಕ್ಕೆ ಅದೇ ಉಚಿತಕಾಲವೆಂದೂ ಆತನ ಮನಸ್ಸಿಗೆ ತೋರಿತು ಆಗಲೇ ಮಹಾರಥನಾದ ಆ ರಾವಣನು, ಸುತ್ತಲೂ ಬಂಗಾರದ ಕಿಟಿಕಿಗಳಿಂದ ಕೂಡಿ, ಮುತ್ತುಗಳಿಂದಲೂ, ಹವಳಗಳಿಂದಲೂ ಆಲಂಕೃತವಾಗಿ, ಸುಶಿಕ್ಷಿತವಾದ ಕುದುರೆಗಳಲ್ಲಿ ಹೂಡಿದ ತನ್ನ ಮಹಾರಥ ದಬಳಿಗೆ ಬಂದು, ಅದಕ್ಕೆ ಪ್ರದಕ್ಷಿಣನಮಸ್ಕಾರಗಳನ್ನು ಮಾಡಿ, ಅದನ್ನೇರಿ ಕುಳಿತನು ರಾಕ್ಷಸೋತ್ತಮನಾದ ರಾವಣನು ಆ ಉತ್ತಮರಥವನ್ನೇರಿ,

  • ಇಲ್ಲಿ " ಮೈಥಿಲೀಕಾಮಮೋಹಿತ ” ಎಂದು ಮೂಲವು ಸೀತಾವಿಷಯವಾದ ಕಾಮವೆಂದರೆ, ಆಕೆಗೆ ತಾನು ನೃತ್ಯನಾಗಬೇಕೆಂಬ ಆಶೆಯೆಂದು ವಾಸ್ತವಾರ್ಥವು, ಹೀ ಗೆಯೇ ಅಲ್ಲಲ್ಲಿ ಸಾಮಾನ್ಯವಾಗಿ ತೋರುವ ಅರ್ಥಗಳಿಗೆಲ್ಲಾ ಭಕ್ತಿ ವಿಷಯಕವಾಗಿ

ವಾಸವಾರ್ಥವನ್ನು ಗ್ರಹಿಸಬೇಕು (ಮಹೇಶ್ವರತೀರ್ಥರು | + ಇಲ್ಲಿ ಅತೀತಸಮಯೇ ಕಾಲೇ ತರ್ನ್ನಿ ವೈ ಯುಧಿ ರಾವಣ (ಅಮಾತ್ಯೆ ಶಸು ಹೃದೃಶ್ಯ ಮಂತ್ರಕಾಲಮಮನ್ಯತ”ಎಂದು ಮೂಲವು. ಇದಕ್ಕೆ ಕಾಲೇ ಅತೀತ ಸಮಯ) ರಾವಣನು, ತನಗೆ ಆಯುಸಿಕಾಲವು ಮಿಂಚಿಹೋಗುತ್ತಿರಲು (ಯುಧಿ) ಯುದ್ಧದಲ್ಲಿ (ಅಮಾತ್ಮಶ ಸುಹೃಶ್ಸಹ ಆತ್ಮಾನಂ)ಅಮಾತ್ಯಮಂತ್ರಿಯೊಡಗೂಡಿದ ತನ್ನನ್ನು (ಪ್ರಾಪ್ತ ಕಾಲಂ) ಸನ್ನಿ ಹಿತಮೃತ್ಯುವುಳ್ಳವನನ್ನಾಗಿ ತಿಳಿದನು ಎಂದರೆ ರಾವಣನುತ ನಗೆ ಆಯುಷ್ಮಾಲವು ತೀರಿದುದರಿಂದ, ತನಗೂ ತನ್ನ ಅಮಾತ್ಯಾದಿಗಳಿಗೂ ಮೃತ್ಯುವು ಸನ್ನಿ ಹಿತವಾದಂತೆಯೇ ತಿಳಿದುದಾಗಿ ವಾಲ್ಮೀಕಿಯ ಹೃದಯವು (ಗೋವಿಂದರಾಜರು. - --- -