ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨ ] ಯುದ್ಧಕಾಂಡವು. ೨೧೨೫ ಶತ್ರುಗಳಿಂದ ನಮಗೆ ಅಪಾಯವಿಲ್ಲದಂತೆ ನೋಡಿಕೊಳ್ಳಬೇಕಾದುದು ಈಗಿನ ಮುಖ್ಯ ಕಾಠ್ಯವು ಈ ಸಮುದ್ರವೋ ಯಾರಿಗೂ ಆಕ್ಷೇಭ್ಯವಾಗಿ ಅನೇಕಕ್ಕೂರಜಂತುಗಳಿಗೆ ನಿವಾಸವಾಗಿರುವುದು, ಕಪಿಗಳಾಗಲಿ, ರಾಮ ಲಕ್ಷ್ಮಣರಾಗಲಿ ಇದನ್ನು ಹೇಗೆ ದಾಟಿ ಬರುವರೆಂದು ನೀವು ಧೈಯ್ಯಹಿಂದಿರ ಬಹುದು. ಆದರೆ ಅದನ್ನೂ ನಂಬುವುದಕ್ಕಿಲ್ಲ' ಹಿಂದೆ ಒಂದು ಕಪಿಯೇ ಇ ಲ್ಲಿಗೆ ಬಂದು ನಮ್ಮೊಡನೆ ದೊಡ್ಡ ಯುದ್ಧವನ್ನು ಮಾಡಿಹೋಯಿತು ಕಾ ರಗತಿಯನ್ನು ಹೀಗೆಂದು ತಿಳಿಯುವುದು ಯಾರಿಗೂ ಸಾಧ್ಯವಲ್ಲ ಆದುದರಿಂ ದ ಈ ವಿಚಾರವಾಗಿ ನಿಮಗೆ ತೋರಬಹುದಾದ ಆಲೋಚನೆಯೇನು ? ಅದನ್ನು ನನಗೆ ತಿಳಿಸಬೇಕು, ನಾನಾದರೋ ಕೆವಲಮನುಷ್ಯಮಾತ್ರ ನಾದ ರಾಮನಿಗಾಗಿ ಸ್ವಲ್ಪವೂ ಹೆದರುವವನಲ್ಲ ಆದರೂ ಈ ವಿಷಯದ ಕ್ಲಿ ನೀವು ಚೆನ್ನಾಗಿ ಆಲೋಚಿಸಿ ತಿಳಿಸಬೇಕು, ಹಿಂದೆ ನಿಮ್ಮ ಸಹಾಯದಿಂದ ಲೇ ನಾನು ದೇವಾಸುರ ಯುದ್ಧದಲ್ಲಿಯೂ ಜಯವನ್ನು ಪಡೆದಿರುವೆನು ಈಗ ಲೂ ಅಂತಹ ಶೂರರಾದ ನೀವೇ ನನ್ನ ಸಹಾಯಕ್ಕಿರುವಿರಿ ಆತ್ತಲಾಗಿ ಸ ಮುದ್ರದ ಆಚೆಯ ದಡದಲ್ಲಿ ರಾಮಲಕ್ಷ್ಮಣರೆಂಬ ರಾಜಕುಮಾರರಿಬ್ಬರೂ ಸೀತೆಯಿರುವ ಸ್ಥಳವನ್ನು ತಿಳಿದುಕೊಂಡು,ಸುಗ್ರೀವನೇ ಮೊದಲಾದ ಕೆಲವು ವಾನರರನ್ನು ಮುಂದಿಟ್ಟುಕೊಂಡು ಸಿದ್ಧರಾಗಿ ಬಂದಿರುವರು ಆದು ದರಿಂದ ಈಗ ನಾವು ಸೀತೆಯನ್ನು ರಾಮನಿಗೆ ಹಿಂತಿರುಗಿ ಕೊಡಬರುವುದಕ್ಕೂ * ಆರಾಮಲಕ್ಷ್ಮಣರನ್ನು ಕೊಲ್ಲುವುದಕ್ಕೂ ಉಪಾಯವೇನೆಂಬುದನ್ನು ಮೊದ ಲು ಯೋಚಿಸಬೇಕು ಈ ವಿಷಯವನ್ನು ನೀವು ಚೆನ್ನಾಗಿ ಪಾಲೋಚಿಸಿ ನಿಮ್ಮ ನಿಶ್ಚಯವನ್ನು ನನಗೆ ತಿಳಿಸಿರಿ.+ಲೋಕದಲ್ಲಿ ಬೇರೆಯಾವನಿಗೂ ಕಪಿಗ ಳೊಡನೆ ಈ ಸಮುದ್ರವನ್ನು ದಾಟಿಬರುವಷ್ಟು ಶಕ್ತಿಯುಂಟೆಂದು ನನಗೆ

  • ಇಲ್ಲಿ “ಅದೇಯಾಚ ಯಥಾ ಸೀತಾ ವಧಾ ದಶರಥಾತ್ಮಜಾ” ಎಂದು ಮೂಲವು. ಇದಕ್ಕೆ ವಾಸ್ತವಾರ್ಥದಲ್ಲಿ “ಅವಧಿ” ಎಂದು ಪದಚ್ಛೇದವು

↑ ಇಲ್ಲಿ ನಹಿಶಕ್ತಿ೦ಪ್ರಪಶ್ಯಾಮಿ ಜಗತನ್ಯಸ್ಯ ಕಸ್ಯಚಿತ್ | ಸಾಗರಂ ವಾ ನರೈಸ್ತೀಶ್ವಾನಿಶ್ಚಯೇನ ಜಯೋಮಮ” ಎಂದು ಮೂಲವು, ವಾನರರೊಡನೆ ಸೇರಿ ಸಮುದ್ರವನ್ನು ದಾಟಿ ಬರುವುದಕ್ಕೆ ರಾಮನುಹೊರತು ಬೇರೊಬ್ಬನಿಗೆ ಶಕ್ತಿಯಿಲ್ಲ