ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೨.] ಯುದ್ಧಕಾಂಡವ. ೨೧೨೭ ಕೂಡ,ತಮಗಾಗಿ ಷಣ್ಮುಖನು ಮಾಡಿಟ್ಟ ರಂಧ್ರದಿಂದ ದಾಟಿಹೋಗುವಂ ತೆ, ಶತ್ರುಗಳು, ತಮಗಿಂತಲ ೧ ತಮ್ಮ ಶತ್ರುವು ಅಧಿಕಬಲವುಳ್ಳವನೆಂದು ತಿಳಿದರೆ, ಮತ್ತು ಅವನು ಕರಾಲೋಚನೆಯಿಲ್ಲದ ಚಪಲನೆಂದೂ ತಿಳಿದರೆ, ಅಂತವನಲ್ಲಿ ಇತರರಿಂದುಂಟಾದ ಛಿದ್ರವನ್ನು ತಿಳಿದು, ಆ ಸಂದರ್ಭದಲ್ಲಿ ಅವನ ಮೇಲೆ ಬಿದ್ದು ಜಯವನ್ನು ಸಾಧಿಸುವರು ಮುಖ್ಯವಾಗಿ ನೀನು ಮುಂದಾಲೋಚನೆಯಿಲ್ಲದೆ ಸೀತೆ ಯನ್ನು ಕದ್ದು ತಂದುದೇ ದೊಡ್ಡ ತಪ್ಪು? ಇದು ನಿನಗೆ ದೂರಾಲೋಚನೆ ಝಲ್ಲದ ದೋಷವು ಹೀಗಿದ್ದರೂ ಅನ್ನ ದಲ್ಲಿ ವಿಷಮಿಶ್ರವಾದುದನ್ನು ತಿಳಿ ಮದಂತೆ, ರಾಮನು ನಿನ್ನ ಆಕೃತ್ಯವನ್ನ ಇದುವ ರಗೂ ತಿಳಿಯದೆ ಸುಮ್ಮನಿರುವನು ಇದೂಕೂಡ ನಿನ್ನ ಅದೃಷ್ಟವೇ ಹೊ ರತು ಬೇರೆಯಲ್ಲ ಆದುದೇನೋ' ಆಯಿತು' ಈಗಲೂ ಚಿಂತೆಯಿಲ್ಲ ನೀವಂತೂ ಹೀಗೆ ಆಯುಕ್ತ ಕಾರಕ್ಕೆ ಪ್ರ ಮತ್ತಿ ಸಿದೆ ಈಗಲೂ ಅದನ್ನು ಸರಿಪಡಿಸು ವುದಕ್ಕೆ ನನ್ನಿಂದ ಹೊರತು ಬೇರೆಯವರಿಂದ ಸಾಧ್ಯವಲ್ಲ ' ಈಗ ನಾನು ನಿನ್ನ ಶತ್ರಗಳನ್ನು ಜಯಿಸಿ ಕ್ರಮಪಡಿಸುವೆನು ಇದಕ್ಕಾಗಿ ನೀವು ವ್ಯಸನ ಪಡಬೇಡ' ಒಂದುವೇಳ ಇಂದ್ರನೂರರಾಗಲಿ, ಆಗ್ನಿ ವಾಯುಗಳಾಗಲಿ, ಕು ಬೇವುಣರಾಗಲಿ ನನಗಿಬರಾಗಿ ಬಂದರೂ, ಅವರನ್ನ ನಾನು ಇದಿರಿಸಿ ಜಯಿಸಬಲ್ಲೆನು ಅಣ' ಬೆಟ್ಟದಂತಿರುವ ನನ್ನ ಈ ದೇಶವನ್ನು ನೋ ಡು ' ನನಗೆ ಯುದ್ಧ ಸಾಧನವಾಗಿರುವ ಈ ಮಹಾಪರಿಭುವನ್ನು ನೋಡು' ನನ್ನ ಭಯಂಕರವಾದ ಸಿಂಹನಾದವನ್ನು ನೋಡು ! ನನ್ನ ತೀಕ್ಷವಾದ ಕೋರ ಬಾ ಡೆಗಳನ್ನು ನೋಡು ! ಇವುಗಳನ್ನು ನೋಡಿದ ಮಾತ್ರಕ್ಕೆ ದೇ ವೇಂದ್ರನಾದರೂ ಭಯಪಟ್ಟು ಪಲಾಯನ ಮಾಡುವನು ಬೇರೆಯವರ ನ ಕೇಳಬೇಕೆ ' ಆರಾಮನು ನನ್ನ ಮೇಲೆ ಮೊದಲು ಒಂದು ಬಾಣವನ್ನು ಪ್ರಯೋಗಿಸಿದರೂ, 'ಎರಡನೆಯ ಬಾಣವನ್ನು ತೆಗೆಯುವುದರೊಳಗಾಗಿಯೇ

  • ಇಲ್ಲಿ ಪುನರಾಂ ಸಿ ದ್ವಿತೀಯೇನ ಶಣ್ಣ ನಿಹಸಿಷ್ಠತಿ | ತತೋಹಂ ತ ಸಪಾಸ್ಕಾಮಿ ರುಧಿರಂ ರಾಮಮಾಶ್ವಸ”ಎಂದುಮೂಲವು ಇದರಿಂದ ರಾಮನು ತನ್ನ ಎರಡನೆಯ ಬಾಸದಿಂದಲೇ ನನ್ನನ್ನು ಅವಶ್ಯವಾಗಿ ಕೊಂದುಬಿಡುವನೆಂದೂ, ಆ ವಧ ದಿಂದ ನನ್ನ ರಕ್ತವನ್ನೇ ನಾನು ಕುಡಿಯುವುದನ್ನು ನೋಡಿ ನೀನು ದುಃಖದಿಂದ ನಿಟ್ಟು,