ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ළු ಶ್ರೀಮದ್ರಾಮಾಯಣವು (ಸರ್ಗ, ೧೩. ಅವನ ರಕ್ತವನ್ನು ನಾನು ಹೀರಿಬಿಡುವೆನೆಂದು ತಿಳಿ' ಇನ್ನು ನೀನು ಚಿಂತಿಸ ಬೇಡ' ಸಮಾಧಾನದಿಂದಿರು' ಅಣ್ಣಾ! * ಈಗಲೇ ನಾನು ರಾಮನನ್ನು ಕೊಂ ದು ನಿಮಗೆ ಅನಾಯಾಸವಾಗಿ ಜಯವುಂಟಾಗುವಂತೆ ಪ್ರಯತ್ನಿ ಸುವೆನು ಲ ಕಣಸಹಿತನಾದ ರಾಮನನ್ನು ಕೊಂದೊಡನೆ, ಸಮಸ್ತ ವಾನರರನ್ನೂ ಒಂದೇ ತುತ್ತಾಗಿ ಭಕ್ಷಿಸಿಬಿಡುವೆನು. ಇದ ಕ್ಕಾಗಿ ನೀನು ಸ್ವಲ್ಪವೂ ಪ್ರಯ ತ್ನಿ ಸಬೇಕಾದುದಿಲ್ಲ ನೀನು ಇಲ್ಲಿಯೇ ಇದ್ದು ನಿನ್ನ ಮನಸ್ಸಿಗೆ ತೋರಿದಂತೆ ಕ್ರೀಟಸು ನಿನಗೆ ಇಷ್ಟವಾದ ಮದ್ಯವನ್ನು ಕುಡಿ ' ನಿಶ್ಚಿಂತನಾಗಿ ನಿನಗೆ ಬೇಕಾದ ಕೌಲ್ಯಗಳನ್ನು ನಡೆಸುತ್ತಿರು ' + ಅತ್ತಲಾಗಿ ನಾನು ರಾಮನನ್ನು ಕೊಂದೊಡನೆ,ಇತಲಾಗಿ ಸೀತೆಯು ಬಹುಕಾಲದವರೆಗೆ ನಿನಗೆ ಕೈವಶವಾ ಗಿರುವಳು ” ಎಂದನು ಇಲ್ಲಿಗೆ ಹನ್ನೆರಡನೆಯ ಸರ್ಗವು ಸಿರುಬಿಡುವೆಯೆಂದೂ, ಕುಂಭಕರ್ಣನು ರಾವಣನಿಗೆ ಸೂಚಿಸಿದುವಾಗಿ ಅಶ್ಲೀಲಾರ್ಥ ವು ಧ್ವನಿತವಾಗುವುದು (ಗೋವಿಂದರಾಜರು ) 'ರಾಮನು ತನ್ನನ್ನು ಎರಡನೆಯ ಬಾಣದಿಂದಲೇ ಕೊಲ್ಲುವುದಾಗಿದ್ದರೂ, ಅದಕ್ಕೆ ಮೊದಲೇ ತಾನು ಕೆಲವುವಾನರರ ರ ಕ್ರವನ್ನು ಕುಡಿದು ಸಾಯುವುದರಿಂದ, ಅದನ್ನು ನೋಡಿಯಾದರೂ ನೀನು ಸ್ವಲ್ಪ ಸ ಮಾ ಧಾನವನ್ನು ಹೊಂದಬಹುದೆಂದು ಹೇಳಿದುದಾಗಿ ವಾಸ್ತವಾರವು (ಮಹೇಶ್ವರ ತೀರರು ) |

  • ಇಲ್ಲಿ 'ವಧನವೈ ದಾಶರಥೇಸುಖಾವಹಂ ಜಯಂ ತವಾಹರ್ತುಮಹಂ ಯಶಿಷ್ಟೆ | ಹತ್ಯಾಚ ರಾಮಂ ಸಹಲಕ್ಷಣೇನ ಖಾದಾಮಿ ಸರ್ರಾ ಹರಿಯೂಥಮು ರ್ಖ್ಯಾ” ಎಂದ ) ಮೂಲವ 'ನಾನು ರಾಮನ ಕೈಗೆ ಸಿಕ್ಕಿ ಸಾಯುವುದರಿಂದ ರಾಮನಿ ಗೆ ನಿನ್ನ ಮೇಲಿನಜಯವು ಸುಖಸಾಧ್ಯವಾಗುವಂತೆ ಮಾಡುವೆ” ನೆಂದು ಇಲ್ಲಿ ಅಶ್ಲೀಲಾ ರ್ಥವು ಧ್ವನಿತವಾಗುವುದು

+ ಇಲ್ಲಿ ಮಯಾತುರಾಮೇ ಗಮಿತೇ ಯಮಕ್ಷಯಂ ಚಿಗಾಯ ಸೀತಾವಶಗಾ ವಿಷ್ತಿ” ಎಂದುಮೂಲವು ಇಲ್ಲಿನ (ಗಮಿತೇಯಮಕ್ಷಯಂ) ಎಂಬಲ್ಲಿ (ಗಮಿತಾ + ಇಯಂ + ಅಕ್ಷಯ೦) ಎಂದು ಪದವಿಭಾಗವನ್ನು ಮಾಡಿ, “ಈ ಸೀತೆಯು ರಾಮನಲ್ಲಿ ಅಕ್ಷಯವಾಗಿ ಸೇರಿಸಲ್ಪಟ್ಟವಳಾಗಿ ಬಹುಕಾಲದವರೆಗೆ ಆತನ ವಶವರ್ತಿನಿಯಾಗಿರುವ ಇು” ಎಂದು ವಾಸ್ತವಾರವನ್ನು ಗ್ರಹಿಸಬೇಕು.