ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೩. | ಯುದ್ಧಕಾಂಡವು. ೨೧೨೯ (ಸೀತೆಯನ್ನು ಬಲಾತ್ಕಾರದಿಂದೆಳೆದುಭೋಗಿಸೆಂದು ) ಮಹಾಪಾರ್ಶ್ವನು ರಾವಣನಿಗೆ ಹೇಳಿದುದು ರಾವ ಸನು ಬ್ರಹ್ಮ ಶಾಪದಿಂದ ತಾನು ಪರಸ್ತಿಯರನ್ನು ಬಲಾತ್ಕರಿಸಕೂಡದೆಂದು ಹೇಳಿದುದು ಕುಂಭ ಕರ್ಣನ ನೀತಿವಾಕ್ಯವನ್ನು ಕೇಳಿ ರಾವಣನಿಗೆ ಅತ್ಯಾಕ್ರೋಶವು ಹುಟ್ಟಿತು ಈ ರಾವಣನ ಮನೋಭಿಪ್ರಾಯವನ್ನು ತಿಳಿದೊಡನೆ, ಬಲಾಢ ನಾದ ಮಹಾಪಾರ್ಶ್ವನು ಸ್ವಲ್ಪ ಹೊತ್ತಿನವರೆಗೆ ತನ್ನಲ್ಲಿ ತಾನು ಚಿಂತಿಸಿ, ಆಮೇಲೆ ರಾವಣನಮುಂದೆ ಕೈಮುಗಿದು ನಿಂತು ( ಮಹಾರಾಜನೆ ! ಲೋಕದಲ್ಲಿ ಯಾವನು ಮಧುವನ್ನು ಕುಡಿಯಬೇಕೆಂಬ ಆಸೆಯಿಂದ, ಕೂರಮೃಗಗಳಿಂದಲೂ ವಿಷಸರ್ಪಗಳಿಂದಲೂ ತುಂಬಿದ ಕಾಡಿಗೆ ಹೋ ಗಿ, ಅಲ್ಲಿ ಪ್ರಯತ್ನ ಪಟ್ಟು, ಮಧುವನ್ನೂ ಸಂಪಾದಿಸಿ, ಕೊನೆಗೆ ಕೈಗೆ ಸಿಕ್ಕಿದ ಆ ಮಧುವನ್ನು ಕುಡಿಯದೆ ಬರುವನೋ, ಅವನು ಬಹಳ ಮೂಢ ನೆಸಿಸುವನಲ್ಲವೆ ? ಹಾಗೆಯೇ ನೀನೊ ಇಷ್ಟು ಪ್ರಯತ್ನ ಪಟ್ಟು ಸೀತೆ ಯನ್ನು ತಂದಿರುವಾಗಲೂ ಅವಳನ್ನ ನುಭವಿಸದೆ ಸುಮ್ಮನಿರಬಾರದು. ಎಲೈ ಶತ್ರುಸೂದನನೆ ' * ಸಮಸ್ತಲೋಕಗಳನ್ನೂ ರಕ್ಷಿಸಬಲ್ಲವನಾದ ನಿನಗೆ ಬೇರ ಶಿಕ್ಷಕರಾರುಂಟು ? ಯಾರಿಗೂ ನೀನು ಹೆದರಬೇಕಾದುತ್ತಿಲ್ಲ ! ಧರಾಧರಗಳಿಗೂ ನೀನು ಆಂಜಬೇಡ ಶತ್ರುಗಳ ತಲೆಯನ್ನು ಮೆಟ್ಟಿ ದಂತ ಸೀತೆಯೊಡನೆ ರಮಿಸು | ಈ ಭಯಕ್ಕಾಗಿ ನೀನು ಸೀತೆಯನ್ನೂ ಪ್ಪಿಸ ಬೇಕಾದ ಅವಶ್ಯಕವೂ ಇಲ್ಲ ' ನಿನ್ನ ಶಕ್ತಿಗೆ ತಡೆ ಯಾವುದು ? ಸೀತೆಯು ಒ - - - - -.

  • ಇಲ್ಲಿ ಈಶ್ವರಕ್ಕೇಶ್ವರಃ ಕೋಸ್ತಿ ತವ ಶತ್ರುನಿಬರ್ಹಕ | ರಮಸ್ವ ಸಹ ವೈ ದೇಹ್ಯಾ ಶತನಾಕ್ರಮ್ಯ ಮಧ್ಯಸು” ಎಂದು ಮೂಲವು ಇಲ್ಲಿ ಸಲ್ವೇಶ್ವರನಾದ ರಾಮನಿಗೆ ಬೇರೊಬ್ಬರೂ ನಿಯಾಮಕರಿಲ್ಲವೆಂದೂ, ಆದುದರಿಂದ (ವೈದೇಹಾಸಹ ತವ ಶರ್ತಮೂರ್ಧಸು ಆಕ್ರಮ್ಯ) ಸೀತೆಯೊಡಗೂಡಿದ ಆ ನಿನ್ನ ಶತ್ರುಗಳನ್ನೇ ಎಂದರೆ ರಾಮನನ್ನೇ ನಿನ್ನ ಹತ್ತು ತಲೆಗಳಿಂದಲೂ ನಮಸ್ಕರಿಸಿ ಕ್ಷೇಮದಿಂದಿರೆಂದೂ ವಾಸ್ತವಾ Pವು ಇಲ್ಲಿ (ಶರ್ತ) ಎಂಬ ಬಹುವಚನವು ಪೂಜಾರಕವೆಂದು ಗ್ರಾಹ್ಯವು |