ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೦ ಶ್ರೀಮದ್ರಾಮಾಯಣವು [ಸರ್ಗ, ೧೩. ಸ್ಪಿದರೇನು? ಒಪ್ಪದಿದ್ದರೇನು?*ಕೋಳಿಯಂತೆ ಆಗಾಗ ಮೇಲೆಬಿದ್ದು ಆಕೆ ಯನ್ನು ಬಲಾತ್ಕಾರದಿಂದ, ಹಿಡಿದೆಳೆದು ಇಷ್ಟಬಂದಂತೆ ಅನುಭವಿಸು ' ಪ್ರ ಕೃತದಲ್ಲಿ ನಿನ್ನ ಕಾಮವನ್ನು ನೀನು ತೀರಿಸಿಕೊಂಡು ಬಿಡು ! ಆಮೇಲೆ ಯಾ ವ ಭಯವು ಬಂದರೂ ಬರಲಿ' ಅಥವಾ ಬರುವಹಾಗಿದ್ದರೂ ಇರಲಿ' ಆವೆ ಲ್ಲವೂ ನಿನಗೊಂದು ಲಕ್ಷವಲ್ಲ ! ಹೇಗಾದರೂ ತಪ್ಪಿಸಿಕೊಳ್ಳಬಹುದು ಇದೋ ಇಲ್ಲಿ ನಿನಗೆ ಬೆಂಬಲವಾಗಿರುವ ಈ ಕುಂಭಕರ್ಣನನ್ನು ನೋಡು' ಮ ಹಾಬಲಾಢನಾದ ಈ ಇಂದ್ರಜಿತನ್ನು ನೋಡು' ಇವರಿಬ್ಬರೂ ವಜಧಾರಿ ಯಾದ ಇಂದ್ರನನ್ನಾ ದರೂ ತಡೆಯಬಲ್ಲರು ಯುದ್ಧ ಮಾಡುವುದಕ್ಕೆ ಕೈ ಲಾಗದ ಯಾರೋ ಕೆಲವು ಹೇಡಿಗಳು, ಸಾಮದಾನಭೇದಗಳೆಂಬ ಬೇರೆಬೇರೆ ಉಪಾಯಗಳನ್ನು ಕಲ್ಪಿಸಿಟ್ಟಿರುವರು ! ಅವೆಲ್ಲವೂ ನಿನಗೇಕೆ ? ದಂಡೋ ಪಾಯದಿಂದಲೇ ಕಾರವು ಕೈಗೂಡುವ ರೀತಿಯನ್ನು ನೋಡು ' ಎಲೈ ಬ ಲಾಡ್ಯನೆ ' ನೀನು ನಿನ್ನ ಶತ್ರುಗಳನ್ನು ಕೊಲ್ಲುವುದಕ್ಕಾಗಿ ಈ ಲಂಕೆಯನ್ನು ಬಿಟ್ಟು ಹೊರಗೆ ಹೋಗಬೇಕಾದುದೂ ಇಲ್ಲ ' ಯಾವಶತ್ರುಗಳು ಬಂದರೂ ಇಲ್ಲಿಗೇ ಬರಲಿ' ಅವರು ಈ ಲಂಕೆಯಕಡೆಗೆ ಕಾಲಿಟ್ಯೂಡನೆ ನಾವು, ಇದೊ ಈ ನಮ್ಮ ಶಸ್ಸ ಬಲದಿಂದ ನಿಗ್ರಹಿಸಿ ನಿನಗೆ ವಶಮಾಡುವೆವು ಇದರಲ್ಲಿ ಸಂ ದೇಹವಿಲ್ಲ” ಎಂದನು ಇದನ್ನು ಕೇಳಿ ರಾವಣನು ಅವನ ಮಾತನ್ನೇ ಬಹಳ ವಾಗಿ ಅಭಿನಂದಿಸುತ್ತ, ಅವನನ್ನು ಕುರಿತು ” ಮಹಾಪಾರ್ಶ್ಚಾ' ಭಲೆ ಭಲೆ! ಬಹಳ ಸಂತೋಷವಾಯಿತು' ಚೆನ್ನಾಗಿ ಹೇಳಿದೆ " ಆದರೇನು? ನನ್ನ ವಿಷಯ ವಾಗಿ ಈವಿಚಾರದಲ್ಲಿ ಒಂದುರಹಸ್ಯವುಂಟು ! ಅದನ್ನೂ ತಿಳಿಸುವೆನು ಕೇಳು' ಇದು ಬಹುಕಾಲದಹಿಂದೆ ನಡೆದ ವಿಚಾರವು ಹಿಂದೆ ಒಂದಾನೊಂ

  • ಇಲ್ಲಿ 'ಬಲಾತ್ಕುಕ್ಕುಟವೃತ್ತೇನ ವರ್ತಸ್ವ ಸುಮಹಾಬಲ ! ಆಕ್ರಮಾಕ್ಷಮ್ಯ ಸೀತಾಂವೈ ತಥಾ ಭುಂಕ್ಷಮಸ್ವಚ!ಎಂದು ಮೂಲವು (ಕುಕ್ಕುಟವೃತೇನ ವರ್ತ ಸ್ವ) ಎಂಬಲ್ಲಿ ಕುಕ್ಕುಟವೃತ್ತೇ+ ನ+ ವರ್ತ) ಎಂದು ಪದವಿಭಾಗವನ್ನು ಮಾಡಿ, “ಎಲೈ ಮಹಾಬಲಾಧ್ಯನಾದ ರಾವಣನೆ ! ನೀನು ಕೋಳಿಗಳಂತೆ ಚಪಲಸ್ವಭಾವದಲ್ಲಿರ ಬೇಡ ! ಸೀತೆಯನ್ನು ಬಲಾತ್ಕಾರದಿಂದ ಹಿಡಿದು ಭೋಗಿಸಿ ರಮಿಸುವುದಕ್ಕೂ ಪ್ರಯ ಶ್ನಿಸಬೇಡ! ಎಂದು ಮಹಾಪಾರ್ಶ್ವನು ನೀತಿಯನ್ನೇ ಉಪದೇಶಿಸಿದುದಾಗಿ ವಾಸ್ತವಾರ್ಥ