ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೨ ಶ್ರೀಮದ್ರಾಮಾಯಣವು (ಸರ್ಗ, ೧೪. ನನ್ನ ಮೇಲೆ ದಂಡೆತ್ತಿ ಬರುವಂತಿದೆ. ಆದರೇನು? ಪತಗುಹೆಯಲ್ಲಿ ಮಲಗಿ ದ ಸಿಂಹವನ್ನು ಮೇಲೆಬ್ಬಿಸುವಂತೆಯೂ, ಮೃತ್ಯುವನ್ನು ಎಚ್ಚರಗೊಳಿಸು ವಂತೆಯೂ, ಈಗ ರಾಮನು ನನ್ನನ್ನು ಯುದ್ಧಕ್ಕೆ ಕರೆಯುತ್ತಿರುವನು. ಆ ರಾ ಮನು ಇದುವರೆಗೆ ಯುದ್ಧದಲ್ಲಿ ಮಹಾಸರ್ಪಗಳಂತಿರುವ ನನ್ನ ಬಾಣಗಳನ್ನು ಕಂಡವನಲ್ಲ ಅದರಿಂದಲೇ ನನ್ನ ಮೇಲೆ ಯುದ್ಯೋದ್ಯುಕ್ತನಾಗಿರುವನು. ಮಹಾಪಾರ್ಶ್ವನೆ ? ಹೆಚ್ಚಾಗಿ ಹೇಳಿದುದರಿಂದೇನು ' ಇನ್ನು ಶಿಫದಲ್ಲಿಯೇ ನಾನು, ಕೊಳ್ಳಿಗಳಿಂದ ಆನೆಯನ್ನು ಹೇಗೋ ಹಾಗೆ ವಜ್ರಸಮಾನಗಳಾದ ನನ್ನ ಬಾಣಗಳಿಂದ ರಾಮನನ್ನು ಸುಟ್ಟು, ಓಡಿಸಿಬಿಡುವೆನು ಮತ್ತು ಉಸಿ ಬರುವ ಸೂರನು ನಕ್ಷತ್ರಗಳ ಕಾಂತಿಯೆಲ್ಲವನ್ನೂ ಕಂಪಿಸುವಂತೆ, ನಾನು ಸೇನಾಸಮೇತನಾಗಿ ನಿಂತು ಅವನ ವಾನ ಸೇನೆಯೆಲ್ಲವನ್ನೂ ಧ್ವಂಸ ಮಾ ಡುವೆನು ಸಾವಿರಕಣ್ಣುಳ್ಳ ದೇವೇಂದ್ರನಾಗಲಿ, ಜಲಾಧಿಪತಿಯಾದ ವರುಣ ನಾಗಲಿ ಯುದ್ಧದಲ್ಲಿ ನನ್ನ ನ್ನು ಜಯಿಸಲಾರರು ಮೊದಲು ಈ ನನ್ನ ಬಾ ಹುಬಲದಿಂದಲೇ ನಾನು ಕುಬೇರನನ್ನು ಜಯಿಸಿ, ಅವನು ಪಾಲಿಸುತ್ತಿದ್ದ ಈ ಲಂಕೆಯನ್ನು ಕೈವಶಮಾಡಿಕೊಂಡಿರುವೆನಲ್ಲವೆ ? ಇನ್ನು ಮನುಷ್ಯ ಮಾತ್ರನಾದ ಆ ರಾಮನ ಪಾಡೇನು ?” ಎಂದನ.. ಇಲ್ಲಿಗೆ ಹದಿಮೂರ ನೆಯ ಸರ್ಗವು w+(ತಿರುಗಿ ವಿಭೀಷಣನು ರಾವಣನಿಗೆ ಹಿತವನ್ನು ಹೇಳಿದುದು ww ರಾವಣನು ಹೇಳಿದ ಮಾತುಗಳನ್ನೂ ಕುಂಭಕರ್ಣನ ಆರ್ಭಟಗಳನ್ನೂ ಕೇಳಿ ವಿಭೀಷಣನು, ತಿರುಗಿ ರಾಕ್ಷಸೇಂದ್ರನಾದ ರಾವಣನನ್ನು ಕುರಿತು, ಆ ರ್ಥಯುಕ್ತವಾಗಿಯೂ ಹಿತವಾಗಿಯೂ ಇರುವ ಮಾತಿನಿಂದ (ಎಲೆರಾಜನೆ' ಸೀತೆಯನ್ನು ಬಿಡದಹಾಗೆಯೇ ರಾಮನನ್ನು ಜಯಿಸಬೇಕೆಂದೆಳಸುವೆಯಾ ? ಆ ಸೀತೆಯನ್ನು ಕೇವಲ ಮಾತ್ರಳೆಂದು ತಿಳಿಯಬೇಡ ? ಸೋಕಿದಮಾ ತ್ರದಿಂದಲೇ ಕೊಲ್ಲುವ ಕಾಳಸರ್ಪವೆಂದು ತಿಳಿ! ವಿಸ್ತಾರವಾದ ಎದೆಯೆಂಬ ಡೀರ್ಫುದೇಹದಿಂದಲೂ, ಚಿಂತೆಯೆಂಬ ಮಹಾವಿಷದಿಂದಲೂ, ಮಂದಹಾ ಸವೆಂಬ ಹರಿತವಾದ ಕೋರೆದಾಡೆಗಳಿಂದಲೂ, ಬೆರಳುಗಳೆಂಬ ಐದು ಹೆಡ