ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೪ ಶ್ರೀಮದ್ರಾಮಾಯಣವು (ಸರ್ಗ, ೧೪, ವಂತನು' ತನ್ನ ಪ್ರಭುವಾದ ರಾವಣನಿಗೆ ಯಾವಾಗಲೂ ಹಿತವನ್ನೇ ಕೋ ರತಕ್ಕವನು' ಧಾರ್ಥಕಾಮಗಳಲ್ಲಿ ನಿಶ್ಚಿತವಾದ ಬುದ್ಧಿಯುಳ್ಳವನು ! ಇಂ ತಹ ಮಹಾತ್ಮನಾದ ವಿಭೀಷಣನು, ಪ್ರಹಸನು ಹೇಳಿದ ಈ ದುರ್ವಾಕ್ಯ ವನ್ನು ಕೇಳಿ ತಿರುಗಿ ಅವನನ್ನು ಕುರಿತು” ಪ್ರಹಸಾ! ಈಗ ನೀನೂ, ನಮ್ಮ ರಾಜನೂ, ಈ ಮಹೋದರನೂ, ಈ ಕುಂಭಕರ್ಣನ ೧,ರಾಮನ ವಿಷಯವಾ ಗಿ ಯಾವಯಾವ ಕಾವ್ಯಗಳನ್ನು , ಯಾವಯಾವ ಕ್ರಮದಲ್ಲಿ ನಡೆಸಬೇಕೆಂ ದು ಹೇಳಿದಿರೋ ಅವೆಲ್ಲವೂ ಕೇವಲನಿರರ್ಥಕಗಳು' ಅಧರತೀಲಸಿಗೆ ಸ್ವರ್ಗ ವು ಹೇಗೋ ಹಾಗೆ ರಾಮನ ವಿಷಯದಲ್ಲಿ ನಿಮ್ಮ ಈ ಪ್ರಯತ್ನ ವೊಂದೂ ಸಾಗದು ! ಪ್ರಹಸ್ತಾ ' ದೋಣಿಯಾದರೂ ಇಲ್ಲದೆ ಸಮುದ್ರವನ್ನು ದಾ ಟಬೇಕೆಂದರೆ ಸಾಧ್ಯವ ? ಕಾಠ್ಯದಕ್ಷನಾನ ರಾಮನನ್ನು ಕೊಲ್ಲುವುದಕ್ಕೆ ನ ೩೦ ಬಾಗಲಿ, ಸಿಂದಾಗಲಿ,ಇಲ್ಲಿನ ಸಮಸ್ತರಾಕ್ಷಸರಿಂದಾಗಲಿ ಸಾಧ್ಯವಲ್ಲ. ಆ ರಾಮನೋ ಧಮ್ಮವೊಂದರಲ್ಲಿಯೇ ನಿರತನಾದವನು ಮಹಾರಧನು'ಲೋ ಕೈಕವೀರರೆನಿಸಿಕೊಂಡ ಇಕ್ಷಕರಾಜರ ಕುಲದಲ್ಲಿ ಹುಟ್ಟಿದವನು ಸಮ ಸ್ವಪ್ರಜೆಗಳನ್ನೂ ತನ್ನ ಗುಣಗಳಂದ ರಂಜಿಸುವವನು ಅಂತಹ ಖರದೂಷ ಣಾದಿಗಳನ್ನೂ ಕೊಂದ ಮಹಾಪ್ರಸಿದ್ಧಿಯುಳ್ಳವನು ' ಕಾ ರಸನ್ನನು | ಅವನ ರಣಕಾರಿಗಳನ್ನು ತಿಳಿದುಕೊಳ್ಳುವುದಕ್ಕಾಗಲಿ ದೇವತೆಗಳಿಗಾದರೂ ಶಕ್ತಿಯಿಲ್ಲ' ಪ್ರಹಸಾ' ಆ ರಾಮನ ಬಾಣಗಳನ್ನು ನೀನೇನೆಂದು ಬಲ್ಲೆ | ಬಹಳ ತೀಕ್ಷ್ಯಗಳಾದ ಮೊನೆಗಳಿಂದಲೂ, ಬಗ್ಗಿದ ಗಿಣಗಳಿಂದಲೂ, ಮೇ ಲಾದ ಪಕ್ಕದ ಗುಗಳಿಂದಲ,ಕೊಡಿದ ಆ ರಾಮಬಾಣಗಳನ್ನು ತಡೆಯುವು ದಕೆ ಯಾರಿಗೂ ಸಾಧ್ಯವಲ್ಲ ಅ೦ತಹ ಬಾಣಗಳು ಇದುವರೆಗೆ ನಿನ್ನ ದೇಹಕ್ಕೆ ನಾಟದಿದ್ದುದರಿಂದಲೇ ಹೀಗೆ ನೀನು ಆತ್ಮಸ್ತುತಿಯನ್ನೂ ಮಾ ಡುತ್ತಿರುವೆ ? ಇಂದ್ರಸಮಾನನಾದ ಆ ದಶರಥಪುತ್ರನಮುಂದ ಯುದ್ಧ ಕ್ಕೆ ನಿಲ್ಲಬೇಕಂದರ, ಈ ರಾವಣನಾಗಲಿ, ಬಲಾಡ್ಯನೆನಿಸಿದ ಈ ತ್ರಿಶೀರ್ಷ ನಾಗಲಿ, ಈ ಕುಂಭಕರ್ಣನಾಗಲಿ, ಇವನ ಮಗನಾದ ನಿಕುಂಭನಾಗಲಿ, ಇಂದ್ರಜಿತ್ತಾಗಲಿ, ನೀನಾಗಲಿ ಶಕ್ತರಲ್ಲ' ಮತ್ತು ಈ ದೇವಾಂತಕನರಾಂತ ರಾಗಲಿ, ಇತಿರಥನೆನಿಸಿಕೊಂಡ ಮಹಾದೇಹವುಳ್ಳ ಈ ಅತಿಕಾಯನಾಗಲಿ,