ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೫ ಸರ್ಗ, ೧೪ ]. ಯುದ್ಧಕಾಂಡವು. ಪರೈತಸಮಾನಬಲವುಳ್ಳ ಈ ಅಕಂಪನನಾಗಲಿ, ರಾಮನ ಮುಂದೆ ಯುದ್ಧ ಕ್ಕೆ ನಿಲ್ಲಲಾರರು. ನಮ್ಮ ಪ್ರಭುವಾದ ಈ ರಾವಣನಾದರೆ ಸಹಜವಾ ಗಿಯೇ ತೀಕ್ಷ ಸ್ವಭಾವವುಳ್ಳವನು ಹಿಂದುಮುಂದಾಲೋಚನೆಯಿಲ್ಲದೆ ಕೆಲ ಸಗಳನ್ನು ನಡೆಸತಕ್ಕವನು ಮೊದಲೇ ಕಾಮತಾಪದಿಂದ ಪೀಡಿತನಾದವ ವೆ ಇಂತಹ ಸ್ಥಿತಿಯಲ್ಲಿಯೂ ನೀವು ಆತಸಿಗೆ ಹಿತವನ್ನು ಹೇಳದೆ, ಹೆಸರಿಗೆ ಮಾತ್ರ ಮಿತ್ರರೆನಿಸಿಕೊಂಡು, ಕೇವಲಶತ್ರು ಪ್ರಾಯರಾಗಿ, ಅವನು ಹೋದ ದಾರಿಯಲ್ಲಿಯೇ ಹೋಗುತ್ತಿರುವಿರಲ್ಲಾ' ಇದು ಸಮಸ್ತರಾಕ್ಷಸರ ವಿನಾ ಶಕ್ಕೆ ಹೊರತು ಬೇರೆಯಲ್ಲ ಎಲೈ ಅಮಾತ್ಯರ ' ಈಗ ನಮ್ಮ ಪ್ರಭುವಾದ ರಾವಣನಿಗೆ, ಕೊನೆಮೊದಲಿಲ್ಲದ ಭೋಗವಾಸೆಯೆಂಬ ದೊಡ್ಡದೇಹದಿಂದ ಊ, ಅಕೃತ್ಯಗಳೆಂಬ ಸಹಸ್ರಫಣೆಗಳಿಂದಲೂಕೂಡಿ, ಭಯಂಕರವಾಗಿಯೂ, ಮಹಾಬಲಾಢವಾಗಿಯೂ ಇರುವ ರಾಮಷವೆಂಬ ದೊಡ್ಡ ಸರ್ಪವು ಬಲವಾಗಿ ಕೊರಳಿಗೆ ಸುತ್ತಿಕೊಂಡಿರುವುದು ನೀವು ಮೊದಲು ಆ ಸರ್ಪವ ನ್ನು ಬಿಡಿಸಿ ಇವನು +ಪಾಯದಿಂದ ತಪ್ಪಿಸುವ ಪ್ರಯತ್ನವನ್ನು ಮಾಡಿ 8' ಎಲೆ ಮಂತ್ರಿಗಳ ' ನೀವೆಲ್ಲರೂ ರಾಜನಿಗೆ ಮಿತ್ರರಪಿಸಿಕೊಂಡಿರುವಿರಿ ? ಅವನಿ೦ದ ಬೆ೦ಕುಬೇ ಕಾದ ಕೋರಿಕೆಗಳನ್ನೂ ಪಡೆದಿರುವಿರಿ ' ಆ ಕೃತಜ್ಞತೆ ಯನ್ಮಾ ರರೂ ಭಾವಿಸಿ ಸೀವೆಲ್ಲರೂ ಐಕಮತ್ಯ ಬಂದ ಈತಸಿಗೆ ಹಿತವನ್ನು ಬೋಧಿಸಬೇಡವೆ ? ಭೂತಗ್ರಸ್ತರಾದವರ ತಲೆಕೂದಲನ್ನು ತಿಳಿಸಿ ಪಿಶಾಚ ಗಳನ್ನು ಬಿಡಿಸುವಂತೆ, ಸೀವೆಲ್ಲರೂ ಸರಿ ಬಲಾತ್ಕಾರದಿಂದ ಈತನ ತಲೆ ಕೂದಲನ್ನು ಹಿಡಿದೆಳೆದಾದರೂ ಆತನನ್ನ ಅಕೃತ್ಯಗಳಿಂದ ತಪ್ಪಿಸಬೇಕು ಎಕ್ಸ್ ರಾಕ್ಷಸರೆ ಇದೊ' ಈಗ ನಿಮ್ಮ ಪ್ರಭುವಾದ ರಾವಣನು ಲಕ್ಷಣ ನೆಂಬ ಮಹಾಸಾಗರದಲ್ಲಿ ಕಣ್ಣಿಗೆ ಕಾಣದೆ ಮುಳುಗಿಹೋಗುತ್ತಿರುವನು | ರಾಮನೆಂಬ ಬಾಡಬಾಗ್ನಿ ಯ ಬಾಯಿಗೆ ತುತ್ತಾಗುತ್ತಿರುವನು ಆದುದರಿಂದ ನೀವೆಲ್ಲರೂ ಈ ಸಮಯದಲ್ಲಿ ಒಂದಾಗಿ ಸೇರಿ, ಆತನಿಗೆ ಕೈಕೊಟ್ಟ ಮೇಲ ಕೃತಿ ಉದ್ಧರಿಸಬೇಕು, ಎಲೆ ರಾಕ್ಷಸರೆ ನನ್ನ ಮುಖ್ಯವಾದ ಅಭಿಪ್ರಾಯ ವನ್ನು ಹೇಳುವೆನು ಕೇಳಿರಿ " ಇದರಿಂದ ಈ ನಮ್ಮ ಲಂಕೆಗೂ ಮುಂದೆ ಕ್ಷೇಮವುಂಟು, ಇಲ್ಲಿನ ರಾಕ್ಷಸರಿಗೂ ಸೌಖ್ಯವುಂಟು ' ನಮ್ಮ ಪ್ರಭುವಾದ