ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೭ ಸರ್ಗ ೧೫ ] ಯುದ್ಧಕಾಂಡವು ಕುಲದಲ್ಲಿ ಹುಟ್ಟಿದ ರಾಕ್ಷಸನಾದ ನಿನಗೆ ಈ ಮಾತು ಯೋಗ್ಯವೆ ?” ಎಂದು ಹೇಳಿ, ರಾವಣನಕಡೆಗೆ ತಿರುಗಿ, ಅಪ್ಪಾನಮ್ಮ ರಾಕ್ಷಸಕಾಲದಲ್ಲಿ ನಿನ್ನ ತಮ್ಮನಾದ ಈ ವಿಭೀಷಣನೊಬ್ಬನೇ ಬಲದಲ್ಲಿಯೂ, ವೀಳ್ಯದಲ್ಲಿಯೂ, ಪ ರಾಕ್ರಮದಲ್ಲಿಯೂ, ಶ್ರದಲ್ಲಿಯೂ, ಥೈಲ್ಯದಲ್ಲಿಯೂ, ತೇಜಸ್ಸಿನಲ್ಲಿಯೂ ಕೇವಲಹೀನನೆಂದು ತೋರುವುದು.”ಎಂವನು ಆಮೇಲೆ ತಿರುಗಿ ವಿಭೀಷಣನ ನ್ನು ಕುರಿತು, - ಎಲ ಹೆಡೀ ' ಸೀನುಮಾತ್ರವೇ ಭಯಪಡುವುದಲ್ಲದೆ ನಮ್ಮ ನೋ ಹೆದರಿಸುವೆಯಾ' ಕೇವಲದುರ್ಬಲರಾದ ಆ ರಾಜಕುಮಾರರನ್ನು ಕೂ ಲ್ಲುವುದಕ್ಕೆ ನಮ್ಮಲ್ಲಿ ಕೆಲಸಕ್ಕೆ ಬಾರದ ಯಾವನಾದರೂ ಒಬ್ಬ ರಾಕ್ಷಸನೇ ಸಾಕು'ಇಂದ್ರನು ಎಂತವನೆಂಬುದನ್ನು ನೀನು ಕಾಣೆಯಾ?ಮೂರುಲೋಕ ಕ್ರೂ ನಾಥನು ದೇವತೆಗಳಿಗೆ ಪ್ರಭು ಆತನ ಸೇನಾಸಾಮಗ್ರಿಯಾದರೂ ಕೇವಲವಾದುದ್ದಲ್ಲಿ ಅಂತಹ ದೇವೇಂದ್ರನನ್ನೇ ನಾನು ನೆಲಕ್ಕೆ ಕೆಡಹಿದವನ ಲ್ಲವೆ? ಅವನಕಡೆಯ ದೇವತೆಗಳೆಲ್ಲರೂ ನನ್ನಿಂದ ಭೀತರಾಗಿ ದಿಕ್ಕುಹಕ್ಕಿಗೆ ಪ ಲಾಯನಮಾಡಲಿಲ್ಲವೆ ? ಐರಾವತವೆಂಬ ಬಗ್ಗೆ ಜವೂ ಕೂಡ ನನ್ನ ಪ್ರಹಾರಕ್ಕೆ ತಡೆಯಲಾರದೆ, ವಿಕೃತಸ್ವರಬಂದರಚುತ್ತ ಕಳಗೆ ಬಿಳಲು, ನಾನು ಅದರ ದಂತಗಳನ್ನು ಕೈಯಿಂದ ಕಿತ್ತು, ಅವುಗಳಿಂದಲೇ ಸಮಸ್ತದೇವತೆಗಳ ಹೆ ದರಿಸಿ ಓಡಿಸಿರುವೆನು ಹೀಗೆ ನಾನು ದೇವತೆಗಳ ಕಚ್ಚನ್ನೂ ಮುರಿದು, ದೈತ್ಯ ರನ್ನೆಲ್ಲಾ ಗೋಳಾಡಿಸಿರುವೆನು ಹೀಗಿರುವಾಗ ಕೇವಲಾಕೃತಮನುಷ್ಯ ರಾದ ಆ ರಾಜಕುಮಾರನನ್ನು ಜಯಿಸಲಾರೆನೆ ? ನನ್ನ ಮಹಾವೀರಕ್ಕೆ ಆ ದೊಂದು ದೊಡ್ಕಾರವೆ ? " ಎಂದನು. ಇಂದ್ರಸಿಗೆಣೆಯಾದ ಇಂದ್ರಜಿ ತ್ತು ಹೀಗೆಂದು ಹೇಳಿದ ಅಹಂಕಾರದ ಮಾತನ್ನು ಕೇಳಿ, ಶಸ್ತ್ರಧಾರಿಗಳಲ್ಲಿ ಮೇಲೆನಿಸಿದ ವಿಭೀಷಣನು, ಸಾರವತ್ತಾದ ಮಾತಿನಿಂದ ಆ ಇಂದ್ರಜಿತನ್ನು ಕುರಿತು ಎಲೆ ವತ್ಪನೆ ' ಇನ್ನೂ ನೀನು ಬಾಲನು ! ಯಾವ ವಿಷಯಗಳಲ್ಲಿ ಯೂ ಅನುಭವವಿಲ್ಲದವನು ನಿನ್ನ ಬುದ್ಧಿಯು ಇನ್ನೂ ಪರಿಪಕ್ವವಾಗಿ ಈ ಯಾವ ವಿಷಯವನ್ನಾದರೂ ಬುದ್ಧಿಯಿಂದಾಲೋಚಿಸಿ ನಿಶ್ಚಯಿಸು ವ ಶಕ್ತಿಯೂ ನಿನಗಿಲ್ಲ ! ಈ ಕಾರಣಗಳಿಂದಲೇ ನಿನ್ನ ಕೇಡನ್ನೂ ನೀನು ವಿ ಚಾರಿಸದೆ, ಈ ನಿರರ್ಥಕವಾಕ್ಯಗಳನ್ನು ಪ್ರಲಪಿಸುತ್ತಿರುವೆ ? ಬಾಯಿಗೆ ಬಂ 135