ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೦ ಶ್ರೀಮದ್ರಾಮಾಯಣವು - [ಸರ್ಗ ೧೩ ಕ್ಯದಿಂದ ಅವನನ್ನು ಕುರಿತು ವಿಭೀಷಣಾ' ಸಾಕು ಸುಮ್ಮನಿರು' ನಿನ್ನ ಸಹವಾ ಸವೇ ನನಗೆ ಯುಕ್ತವಲ್ಲ' ಶತ್ರುವಿನೊಡನೆಯಾದರೂ ಇರಬಹುದು. ಕೋ ಪಗೊಂಡ ಕಾಳಸರ್ಪದೊಡನೆಯಾದರೆ ಸಹವಾಸಮಾಡಬಹುದು 1 ಶ ತುಪಕ್ಷವನ್ನು ವಹಿಸಿ ಮಿತ್ರನಂತೆ ನಟಿಸುವ ನಿನ್ನಂತವನೊಡನೆ ಮಾತ್ರ ಎಂದಿಗೂ ಸಹವಾಸಮಾಡಬಾರದು. ಎಲೆ ರಾಕ್ಷಸನೆ ' ಲೋಕದಲ್ಲಿ ಜ್ಞಾತಿ ಗಳ ಸ್ವಭಾವವನ್ನು ನಾನು ಕಾಣೆನೆ | ತಮ್ಮಲ್ಲಿ ಪರಸ್ಪರವ್ಯಸನವನ್ನು ನೋಡಿ ಸಂತೋಷಪಡುವುದೇ ದಾಯಾದಿಗಳ ಸ್ವಭಾವವು ನನಗೆ ದಾ ಯಾದನಾದ ನೀನ, ಹೀಗೆ ನನ್ನ ಸಂಕಟಕಾಲಗಳಲ್ಲಿ ಸಂತೋಷಪಡುವು ದು, ಜ್ಞಾತಿಸ್ವಭಾವಕ್ಕೆ ತಕ್ಕಂತೆಯೇ ಇರುವುದು ಜ್ಞಾತಿಗಳು ತಮ್ಮ ಕುಲ ದಲ್ಲಿ ಮುಖ್ಯನಾದವನ್ನೂ , ಕಾಠ್ಯಸಾಧಕನನ್ನೂ , ಏ ದೈಬಲ್ಲವನನ್ನೂ, ಧರ ತೀಲನನ್ನೂ , ಶೂರನಾದವನನ್ನೂ ಕಂಡರೆ ಅಸೂಯೆಯಿಂದ ತಿರಸ್ಕರಿಸು ವರೇ ಹೊರತು ಗೌರವಿಸುವುದಿಲ್ಲ. ಇದಿರಿಗಿದ್ದಾಗ ಸಂತೋಷವನ್ನು ನಟಿ ಸುವರು ವ್ಯಸನಕಾಲಗಳಲ್ಲಿ ಮತ್ತಷ್ಟು ದ್ರೋಹವನ್ನು ಮಾಡುವರು ತ ತಹ ರಾವಣರು (ಕಾಲಚೋದಿತ: ) ಕಾಲವ್ರರಿತನಾಗಿ, ಎಂದರೆ, ತನ್ನನ್ನು ಬದುಕಿಸು ವುದಕ್ಕಾಗಿ ಬಂದ ತಮ್ಮನ ಮಾತಿಗೆ ಕಿವಿಗುಡದೆ, ಕೊಲ್ಲುವುದಕ್ಕಾಗಿ ಕಾದಿರುವ ಕಾಲ ಮೃತ್ಯುವಿನ ದಾರಿಯನ್ನೇ ನಮ್ಮಿದವನಾಗಿ, (ಪರುಷಂ ವಾಕ್ಯ ಮಬ್ರವೀತ) “ದ್ವಿಧಾ ಭಯಮಸ್ಯೆನಂ ನ ನಮೇಯಂ ಕದಾಚನ” ಎಂದು ರಾಮನ ಬಾಣಕ್ಕೆ ಸಿಕ್ಕಿಸಾ ಯುವ ಸ್ಥಿತಿಯಲ್ಲಿರುವಾಗಲೂ “ತಾನು ಎರಡುಭಾಗವಾಗಿ ಸೀಳಿಬದ್ದರೂ ಬಿಳುವೆನೇ ಹೊರತು ರಾಮನಕಡೆಗೆಮಾತ್ರ ತಲೆಬಗ್ಗಿಸುವವನಲ್ಲವೆಂದು ಹೇಳಿದ ಪರಮಮೂರ್ಖ ಸ್ವಭಾವಕ್ಕೆ ತಕ್ಕಂತೆ ಕರವಾಕ್ಯವನ್ನಾಡಿದನು. ವಿಭೀಷಣನು ಹೇಳಿದ ಸರೋ ತಮವಾದ ಬುದ್ದಿವಾದವನ್ನು ಕೇಳಿದೊಡನೆ “ಈಗ ನನ್ನ ಸಂದೇಹವು ತೀರಿತು” ಎಂದು ಅದನ್ನ ಭಿನಂದಿಸಬೇಕು, ಹಾಗಿಲ್ಲವೇ ನೀನು ನನಗೆ ಮಹೋಪಕಾರವನ್ನು ಮಾಡಿದೆ” ಎಂದು ಹೇಳಿ ಅತನನು ಸು ತಿಸಿಯಾದರ ಸ ತಿಸಬೇಕು! ಹಾಗೂ ಇಲ್ಲದಿದ್ದರೆ ಇಂತಹ ಹಿತವಾದವನ್ನು ಹೇಳಿದ ನಿನಗೆ ತಕ್ಕ ಪ್ರತ್ಯುಪಕಾರವನ್ನು ಮಾಡು ವುದಕ್ಕೂ ಇಲ್ಲವಲ್ಲಾ” ಎಂದು ಅನುತಾಪವನ್ನಾದರೂ ತೋರಿಸಬೇಕು, ಇವೆಲ್ಲ ವನ್ನೂ ಬಿಟ್ಟು, ಶತ್ರುಗಳನ್ನು ಕಂಡಾಗ ಕೋಪದಿಂದ ನುಡಿಯುವ ಕರವಾಕ್ಯ ವನ್ನೇ ಹೇಳಲಾರಂಭಿಸಿದನೆಂದು ಭಾವವು, (ತವಿಶ್ಲೋಕಿ)