ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೬ ] ಯುದ್ದ ಕಾಂಡವ ೨೧೪ು ಹೇಳಿದೆಯಲ್ಲವೆ? ಇದನ್ನು ಮಾತ್ರ ನಾನು ಸಹಿಸಲಾರೆನು. ಎಲೆ ರಾವಣಾ! ನಾನು ನಿನಗೆ ಮೇಲನ್ನು ಕೋರಿ ಯುಕ್ತಾಯುಕ್ತವನ್ನು ನಿಶ್ಚಯಿಸಿ ಹಿತ ವಾದವನ್ನು ಹೇಳಿದೆನು. ಆದರೂ ಕಾಲವಶರಾದವರಿಗೆ ಹಿತವಾದಗಳು ಕಿವಿ ಗೇರುವುವೆ'ಲೋಕದಲ್ಲಿ ಪ್ರಿಯವಾಕ್ಯವನ್ನು ನುಡಿಯುವವರು, ಎಲ್ಲೆಲ್ಲಿಯೂ ಬೇಕಾದಷ್ಟು ಮಂದಿಯಿರುವರು ಕೇಳುವುದಕ್ಕೆ ಆಪ್ರಿಯವಾಗಿದ್ದರೂ ಮುಂ ದೆ ಹಿತಕರವಾದ ಮಾತನ್ನು ಹೇಳುವವಾಗಲಿ, ಅದನ್ನು ಆದರಿಸಿ ಕೇಳುವವ ರಾಗಲಿ ಸಿಕ್ಕುವುದು ಕಷ್ಟವು.ಮುಖ್ಯವಾಗಿ ಸಮಸ್ತಭೂತಗಳನ್ನೂ ಸಂಹ bಸತಕ್ಕ ಕಾಲಪಾಶವು ನಿನ್ನ ಕೊರಳಿಗೆ ಸುತ್ತಿರುವುದು ಆದುದರಿಂದ ಬೆಂಕಿ ಗೆ ಸಿಕ್ಕಿದ ಮನೆಯನ್ನು ಹೇಗೋಹಾಗೆ ಮೃತ್ಯುವಶನಾದ ನಿನ್ನನ್ನು ನೋ ಡಿ ಸುಮ್ಮನಿರಬಾರದೆಂದು ನಾನು ಇಷ್ಟುದೂರದವರಗೆ ಹೇಳಬೇಕಾಯಿತು ನೀನು ಉರಿಯುವ ಬೆಂಕಿಗೆ ಸಮಾನಗಳಾಗಿಯೂ, ಚಿನ್ನ ದ ಕಟ್ಟುಳ್ಳವುಗಳಾ ಗಿಯೂ, ಅಕ್ಷಗಳಾಗಿಯೂ ಇರವ ರಾಮಬಾ ಗಳಿಗೆ ಸಿಕ್ಕಿ, ಸಾಯುವು ದನ್ನು ನೋಡಲಾರದುದಕ್ಕಾಗಿಯೇ ನಾನು ಹೀಗೆ ಹೇಳಿದೆನು ಯದ್ಯರಂಗ ದಲ್ಲಿ ಎಷ್ಟೆ ಶೂರರಾಗಿದ್ದರೂ, ಎಷ್ಟೇ ಬಲಾಡ್ಯರಾಗಿದ್ದರೂ, ಎಷ್ಟೇ ಆಸ್ತ ವಿಶಾರದರಾಗಿದ್ದರೂ ಮೃತ್ಯುವಶರಾದಾಗ ಮಳಲಿನ ಸೇತುವೆಗಳಂತೆ ನಿಮಿಷ ಮಾತ್ರದಲ್ಲಿ ನಾಶಹೊಂದುವರು ನೀನು ನನಗೆ ಅಣ್ಣನೆಂಬುದಕ್ಕಾಗಿ ನಿನ್ನ ಹಿತವನ್ನು ಕೋರಿ ನಾನು ಹೀಗೆ ಸಲಿಗೆಯಿಂದ ಮಾತಾಡಿಬಿಟ್ಟೆನು | ನನ್ನನ್ನು ಮನ್ನಿಸಬೇಕು. ಮುಖ್ಯವಾಗಿ ನೀನು, ಸತ್ವವಿಧದಿಂದಲೂ, ನಿನ್ನ ನ್ಯೂ , ರಾಕ್ಷಸಸಹಿತವಾದ ಈ ನಿನ್ನ ಲಂಕೆಯನ್ನೂ ರಕ್ಷಿಸಿಕೊಳ್ಳುವ ಮಾ ರ್ಗವನ್ನು ನೋಡು' ನಿನಗೆ ಕ್ಷೇಮವಾಗಲಿ ! ನಾನು ಹೋಗಿ ಬರುವೆನು ಇನ್ನು ನಾನಿಲ್ಲದುದರಿಂದಲಾದರೂ ನೀನು ಸುಖಿಯಾಗಿರು ! (ರಾವಣ! ಮುಖ್ಯವಾಗಿ ಈ ರಾಕ್ಷಸರ ಗುಂಪಿನಲ್ಲಿ ಈ ಪಾಪಕೃತ್ಯಗಳಿಂದ ನಿನ್ನನ್ನು ತಪ್ಪಿಸುವಂತೆ ನಿನಗೆ ಹಿತವನ್ನು ಪದೇಶಿಸಿ ತಡೆಯುವ ಸುಹೃತಾಗಲಿ, ಸ್ನೇ ಹಿತನಾಗಲಿ ಒಬ್ಬನಾದರೂ ಇಲ್ಲ) ನಾನು ಹಿತವನ್ನು ಹೇಳಿದರೆ ನನ್ನ ಮಾ ತು ನಿನ್ನ ಕಿವಿಗೇರಲಿಲ್ಲ' ನಾನೇನು ಮಾಡಲಿ' ಮೃತ್ಯುವು ಸಮೀಪಿಸಿದಾಗಲೇ ಮನುಷ್ಯರು ಮೃತಪ್ರಾಯರೆಂಬುದು ನಿಜವು ಅದರಿಂದಲೇ ಅವರೂ ಸತ್ಯ