ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೪ ಶ್ರೀಮದ್ರಾಮಾಯಣವು (ಸರ್ಗ ೧೬. ವರಂತೆಯೇ, ತಮ್ಮ ಮಿತ್ರರು ಹೇಳಿದ ಹಿತವಾದವನ್ನು ಗ್ರಹಿಸಲಾರರು.” ಎಂದನು ಇಲ್ಲಿಗೆ ಹದಿನಾರನೆಯ ಸರ್ಗವು - - -


  • ವಿಭೀಷಣನು ಮಂತ್ರಿಸಹಿತನಾಗಿ ರಾಮಲಕ್ಷ ಹರಿ ) ದ ಕಡೆಗೆ ಬಂದುದು ಸುಗ್ರೀವಾದಿವಾನರರು ಅವನ ! ನ್ನು ನೋಡಿ ಅವನು ವಧ್ಯನೆಂದು ರಾಮನಿಗೆ ತಿಳಿಸಿದು | 3 ದು, ರಾಮನು ಈ ವಿಷಯದಲ್ಲಿ ಸಮಸ್ತ ವಾನರರ ಅಭಿಪ್ರಾಯವನ್ನೂ ಕೇಳಿ, ಕೊನೆಗೆ ಹನುಮಂತನ ಮ ತದಂತೆ ಅವನನ್ನು ಕರೆಸಿಕೊಳ್ಳುವುದಾಗಿ ನಿಶ್ಚಯಿಸಿ

- ವಾನರರಿಗೆ ಆಜ್ಞೆ ಮಾಡಿದುದು, + ಹೀಗೆ ವಿಭೀಷಣನು ರಾವಣನನ್ನು ಕುರಿತು ಪರುಷವಾಕ್ಯವನ್ನು ಹೇಳ ಆಕ್ಷಣವೇ ಅಲ್ಲಿಂದ ರಾಮಲಕ್ಷ್ಮಣರಿದ್ದ ಕಡೆಗೆ ಹೊರಟು ಬಂದನು. •w+ ವಿಭೀಷಣಶರಣಾಗತಿ ಪ್ರಕರಣವು www « 'ಆನುಕೂಲ್ಯಕ್ಕೆ ಸಂಕಲ್ಪಪ್ರಾತಿಕೂಲ್ಯಸ್ಯ ವರ್ಜನಂ| ರಕ್ಷಿಷ್ಯತೀತಿ ವಿಶ್ವಾ ಸೋ ಗೋತವರಣಂ ತಥಾ | ಆತ್ಮ ನಿಕ್ಷೇಪಕಾರಕ್ಕೆ ಷಡ್ನಿ ದಾ ಶರಣಾಗತಿ.” ಎಂಒಂತೆ, ಶರಣಾಗತಿಗೆ ಆನುಕೂಲ್ಯ ಸಂಕಲ್ಪವೇ ಮೊದಲಾದ ಆರು ಅಂಗಗಳುಂಟು. ರಾಮನಲ್ಲಿ ಶರಣಾಗತಿಯನ್ನು ಮಾಡುವುದಕ್ಕಾಗಿ ಉದ್ದೇಶಿಸಿದ ವಿಭೀಷಣನು, ಆ ಅ೦ ಗಗಳಲ್ಲಿ ಆನುಕೂಲ್ಯ ಸಂಕಲ್ಪ, ಪ್ರಾತಿಕೂಲ್ಯವರ್ಜನ, ವಿಶ್ವಾಸಗಳಂಬ ಮೊದಲನೆಯ ಮೂರು ಅಂಗಗಳನ್ನೂ ನಿರಹಿಸಿರುವಂತೆ ಹಿಂದಿನ ಎಂಟುಸರ್ಗಗಳಿಂದ ಕಾಣಿಸಲ್ಪ ಟ್ವಿಬೆ ರಾಮನಿಗೆ ಸೀತಯನ್ನೊಪ್ಪಿಸಿ ಆತನಲ್ಲಿ ಮರಹುಗಬೇಕೆಂಬುದೇ ಆನುಕೂಲ್ಯ ಸಂಕಲ್ಪವು, ಎಂದರೆ, ತನ್ನ ಸ್ವರೂಪಕ್ಕೆ ಅನುಕೂಲವಾದುದನ್ನು ನಡೆಸಬೇಕೆಂದು ಉದ್ದೆಶಿಸುವುದು ರಾವಣನನ್ನೂ ಅವನ ದೇಶವನ್ನೂ ಬಿಟ್ಟು ಹೋಗುವುದೇ ಪ್ರಾತಿ ಕೂಲ್ಯ ವರ್ಜನವು, ತನಗೆ ಪ್ರತಿಕೂಲವಾದುದನ್ನು ಬಿಟ್ಟು ಹೋಗುವುದು, ಹಾಗೆಯೇ ವಿಭೀಷಣನು ರಾವಣನಿಗೆ ಬಾರಿಬಾರಿಗೂ ಹಿತೋಪದೇಶವನ್ನು ಮಾಡಿರುವುದರಿಂದ, ತ ಮಗೆ ರಾಮನೇ ರಕ್ಷಕನೆಂಬ ವಿಶ್ವಾಸವೂ ಕಾಣಿಸಲ್ಪಟ್ಟಿತು ಇನ್ನು ಮೇಲೆ ಕಾರಣ್ಯ ಪ್ರದರ್ಶನವೂರೈಕವಾದ ಶರಣಾಗತಿಸ್ವರೂಪವು ತೋರಿಸಲ್ಪಡುವುದಾಗಿ ಗ್ರಾಹ್ಯವು." ↑ ಇಲ್ಲಿ ಇತ್ಯುಕ್ತಾ ಪರುಷಂ ವಾಕ್ಯಂ ರಾವಣಂ ರಾವಣಾನುಜಃ | ಆಜಗಾ ಮ ಮುಹೂರ್ತನ ಯತ್ರ ರಾಮಪ್ಪಲಕ್ಷಣ"ಎಂದು ಮೂಲವ್ರ ವಿಶೇಷಾರವು:-