ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೮ ಶ್ರೀಮದ್ರಾಮಾಯಣವು (ಸರ್ಗ, ೧೬, -- .. - . ಸ್ವಪ್ತಿಗಾಗಿ ತಾನಾಗಿಯೇ ಆನುಷಂಗಿಕಭೋಗಗಳನ್ನೂ ಕೊಡುವುದಾಗಿ ಹೇಳುವ ರು ಹನುಮಂತನು ವಿಭೀಷಣನವಿಷಯವಾಗಿ ರಾಮನನ್ನು ಕುರಿತುರಾಜ್ಯಂ ಪ್ರಾ ರಯಮಾನಸ್ಸು ಬುದ್ಧಿಪೂರೈಮಿಹಾಗತ:”ಎಂದೂ, ರಾಮನು 'ರಾಜ್ಯಕಾಂಕ್ಷೀ ವಿ ಭೀಷಣೆ ” ಎಂದೂ ಹೇಳಿದುದಕ್ಕೆ ಕಾರಣವೇನು?” ಎಂಬ ಶಂಕೆಯುಂಟಾಗಬಹುದು ಇವೆಲ್ಲವೂ, ರಾಮಭಕ್ತಿಯಿಂದ ವಿಭೀಷಣನ ನಿಜಸ್ಥಿತಿಯನ್ನರಿಯಲಾರದೆ ಆತುರಪಡು ತಿದ್ದ ಸುಗ್ರಿ -ನಿಗೆ, ಆ ವ್ಯಾಮೋಹವನ್ನು ನೀಗಿಸುವುದಕ್ಕಾಗಿ ವ್ಯಾಜೀಕರಿಸಿದ ಮಾ ತೇಹೊರತು ಬೇರೆಯಲ್ಲವೆಂದು ಗ್ರಾಹ್ಯವು ಇಲ್ಲಿ ಹನುಮದ್ರಾಮವಾಕ್ಯಗಳಿಗೂ, ವಿ ಭೀಷಣನ ವಾಕ್ಯಕ್ಕೂ ಅನ್ನೋನ್ಯ ವಿರೋಧವು ತೋರಿಬಂದರೂ, ಅಂತರಂಗಬಹಿರಂಗ ಗಳಲ್ಲಿ ಅಂತರ°ಗವೇ ಪ್ರಬಲವೆಂಬ ನ್ಯಾಯದಿಂದ, ವಿಭೀಷಣನ ವಾಕ್ಯಕ್ಕೆ ಪ್ರಾಬಲ್ಯ ವೆಂದು ತಿಳಿಯಬೇಕು ಆದುದರಿಂದ ವಿಭೀಷಣನ ನಾಕಾನುಸಾರವಾಗಿ ಆತನಿಗೆ ರಾ ಜ್ಯಕಾಂಕ್ಷೆಯಿಲ್ಲವೆಂಬುದು ಸ್ಪಷ್ಟವು ಇದಕ್ಕಾಗಿಯೇ ನಿಭೀಷಣನು 'ರಾಜಾನಂ ತ್ಯಾಂ ಕರಿಷ್ಯಾಮಿ” ಎಂದು ರಾಮನು ತನಗೆ ಹೇಳಿದಾಗೆಲೂ, ಅದಕ್ಕೆ ಯಾವ ಪ್ರ ತ್ಯುತ್ತರವನ್ನೂ ಹೇಳದೆ, ರಾಕ್ಷಸರೊಡನೆ ಯ ದ್ಯದಲ್ಲಿ ತನ್ನಿಂದಾದಷ್ಟು ಸಹಾಯ ಮಾಡುವುದಾಗಿಮಾತ್ರವೇ ಹೇಳಿದುದರಿಂದ, ನಿಭೀಷಣನಿಗೆ ಆತನ ಪರಿಚರಣ ಮಾತ್ರವೇ ಮುಖ್ಯೋದೆ ಶವಾಗಿತ್ತೆಂದು ವ್ಯಕ್ತವಾಗುವುದು ಹೀಗೆ ವಿಭೀಷಣನಿಗೆ ರಾಜ್ಯಾಭಿಲಾಷೆ ಯಿಲ್ಲದಿದ್ದರೂ ರಾಮನ ಬಲಾತ್ಕಾರಕ್ಕಾಗಿ ಅವನ 1 ರಾಜ್ಯವನ್ನು ಸ್ವೀಕರಿಸಬೇಕಾಯಿ ತೆಂಬುದು, ಉತ್ತರಕಾಂಡದಲ್ಲಿ ಸ್ಪಷ್ಟಳಾಗಿ ಹೇಳಲ್ಪಡುವುದು ಹೀಗೆ ವಿಭೀಷಣನು ಅನ ಪ್ರಯೋಜನನೆಂಬದನ್ನು ತಿಳಿದೇ, ಅವನಿಗೆ ರಾಮು, ತನಗೆ ಕುಲಧನವಾದ ಶ್ರೀರಂಗನಾಥನನ್ನು ಮಾತ್ರ ಕೊಟ್ಟು ಕಳುಹಿಸಿದನು ಮತ್ತು ರಾಮನು ಧಮ್ಮ ಸಂಸ್ಕಾ ಪನಾರ್ಥವಾಗಿಯೇ ಅವತರಿಸಿದವನಾದುದರಿಂದ, ಲಂಕೆಯಲ್ಲಿ ಹತಶೇಷವಾದ ರಾಕ್ಷಸ ಜಾತಿಯನ್ನು ಸನ್ಮಾರ್ಗದಲ್ಲಿರಿಸುವುದಕ್ಕಾಗಿಯೇ ವಿಭೀಷಣನನ್ನು ನಿರ್ಬಂಧಿಸಿ ಆ ಲ್ಲಿನ ರಾಜ್ಯಾಧಿಕಾರಕೂ ನಿಲ್ಲಿಸಿದನು ವಿಭೀಷಣನು ರಾಜ್ಯವನ್ನಂಗೀಕರಿಸಿದುದೂ ಕೂಡ ರಾ ರಾಜ್ಞೆ ಯನ್ನನುಸರಿಸಿ ಬಂದುದರಿಂದ, ಅದೂ ರಾಮಕೈಂಕಯ್ಯದಲ್ಲಿಯೇ ಸೇರಿತೆಂದು ವಿಭೀಷಣನ ತಾತ್ಸರ ವು ಹೀಗೆಯೇ ಹಿಂದೆ ಧರತತ ವನ್ನು ತಿಳಿದ ಲಕ್ಷಣನೂಕೂಡ, ಸಾಮಾನ್ಯಧರ ಕ್ಕಿಂತ ವಿಶೇಷಧರ ವೇ ಪ್ರಬಲವೆಂದೆಣಿಸಿ 'ಅಹಂ ತಾವನ್ನಹಾರಾಜೇ ಪಿತೃತ್ವಂ ನೋಪಲಕ್ಷಯೇ | ಛಾತಾ ಭರ್ತಾಚ ಬಂಧುಶ್ಯ ಪಿತಾಚ ಮಮ ರಾಘವ ”ಎಂಬುದಾಗಿ ಸೋಶಾಧಿಕಪಿತೃವಾದ ದಶರಥನನ್ನು ತ್ಯಜಿಸಿ, ನಿರುಪಾ ಧಿಕಸರವಿಧಬಂಧುವಾದ ರಾಮನನ್ನೇ ತಂದೆಯಂತೆ ಕೈಕೊಂಡಿರುವನು ಮತ್ತು ಅಹಂ ಸತ್ವಂ ಕರಿಷ್ಯಾಮಿ” ಎಂದು ರಾಮಕೈಂಕಯ್ಯನನ್ನೇ ಫಲವಾಗಿ ಪ್ರಾರ್ಥಿಸಿರುವನು. ಮ ತುಸ ಭಾತರಿಶ್ಚರಣೆಗಾಢಂ ನಿಪೀಡ”ವೆಂಬಂತೆ,ರಾಮನನ್ನೇ ಮರೆಹೊಕ್ಕಿರುವನು,