ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೯೮ ಶ್ರೀಮದ್ರಾಮಾಯಣವು [ಸರ್ಗ ೧೧. ವೇ ಈಗ ನಿನ್ನೊಡನೆ ಮಾಡಬೇಕಾದ ಯುದ್ಧಕ್ಕೆ * ವೀರಪಾನವೆಂದು ತಿಳಿ!” ಎಂದನು ಹೀಗೆಂದು ಹೇಳಿ ವಾಲಿಯು, ಪರಮಕುಪಿತನಾಗಿ, ಪೂತ್ವದಲ್ಲಿ ತನಗೆ ತಂದಯಾದfದೇವೇಂದ್ರನು ಕೊಟ್ಟ ಸುವರ್ಣಮಾಲಿಕೆಯನ್ನು ಸರಿ ಯಾಗಿ ಕೊರಲಿಗೇರಿಸಿಕೊಂಡು ಯುದ್ಧಕ್ಕೆ ನಿಂತನು ಆಗಲೇ ವಾಲಿಯು ಪ ರೂತಾಕಾರವುಳ್ಳ ಆ ದುಂದುಭಿಯ ಕೊಂಬುಗಳೆರಡನ್ನೂ ತನ್ನ ಎರಡು ಕೈ ಗಳಿಂದ ಹಿಡಿದುಕೊಂಡು, ಅವನ ದೇಹವನ್ನು ಗಿರಗಿರನೆ ತಿರುಗಿಸಿ ಅವನನ್ನು ದೂರಕ್ಕೆಸೆದುಬಿಟ್ಟನು ಹೀಗೆ ಆತನನ್ನು ನೆಲದಲ್ಲಿ ಕೆಡಹಿದಮೇ ಲೆ ಒಂದು ಸಿಂಹನಾದವನ್ನೂ ಮಾಡಿದನು ಆ ದುಂದುಭಿಯ ಎರಡು ಕಿವಿಗಳಿಂದಲೂ ರಕ್ತಪ್ರವಾಹವು ಹೊರಟಿತು ಆದರೂ ಆ ದುಂದುಭಿಯು ಹಿಮ್ಮೆಟ್ಟದೆ ಪ್ರನಃ ವಾಲಿಗಿದಿರಾಗಿ ನಿಂತು ಯುದ್ಧಕ್ಕೆ ತೊಡಗಿದನು ದುಂದುಭಿವಾನರರಿಬ್ಬರೂ ಒಬ್ಬರನ್ನೊಬ್ಬರು ಜಯಿಸಬೇಕೆಂಬ ಹಟದಿಂ ದ, 'ಕೋಪಾವೇಶದೊಡಗೂಡಿ, ಮಹಾಘೋರವಾದ ಯುದ್ಧವನ್ನಾ ರಂಭಿಸಿದರು ಆಗ ಇಂದ್ರಸಿಗೆಣೆಯಾದ ಪರಾಕ್ರಮವುಳ್ಳ ವಾಲಿಯು, ತ ನ್ನ ಮುಷ್ಠಿಗಳಿಂದಲೂ ಮೊಳಕಾಲುಗಳಿಂದಲೂ, ಆ ದುಂದುಭಿಯನ್ನು ಗುದ್ದುತಿದ್ದನು ಕೈಗೆ ಸಿಕ್ಕಿದ ಕಲ್ಲುಮರಗಳನ್ನೆ ಲ್ಲಾ ಆತನಮೇಲೆ ಪ್ರಯೋ ಗಿಸಿ ಅತಿಸಾಹಸದಿಂದ ಯುದ್ಧ ಮಾಡಿದನು ಆ ರಾಕ್ಷಸನೂ ಕೈಯಿಂದಾದ ತ್ಯು ಸಾಹಸವನ್ನು ತೋರಿಸುತಿದ್ರನು ಹೀಗೆ ವಾನರರಾಕ್ಷಸರಿಬ್ಬರೂ ಬಹ ಛಹೊತ್ತಿನವರೆಗೆ ಒಬ್ಬರನ್ನೊಬ್ಬರು ಹೊಡೆಯುತ್ತಿರಲು, ಕೊನೆಕೊನೆಗೆ ದುಂದುಭಿಯ ಶಕ್ತಿಯು ಕಡಿಮೆಯಾಗುತ್ತಾ ಬಂದಿತು ಇಂದ್ರಪುತ್ರನಾದ ವಾಲಿಯ ಕೈ ಮೇಲಾಯಿತು ಕ್ರಮಕ್ರಮವಾಗಿ ಆ ದುಂದುಭಿಯ ಅವಯ ವವ್ಯಾಪಾರಗಳೂ, ಅವನ ಧೈಯ್ಯವೂ, ಅವನ ವೀಳ್ಯವೂ, ಅವನ ಪರಾಕ್ರಮ

  • ವೀರಪಾನವೆಂದರೆ ವೀರರು ಯುದ್ಧಕ್ಕೆ ಹೊರಡುವುದಕ್ಕೆ ಮೊದಲು ಉ ತ್ಸಾಹವೃದ್ಧಿಗಾಗಿ ಕುಡಿಯುವ ರಸವು

↑ ದೇವೇಂದ್ರನು ಈ ಸುವರ್ಣಮಾಲಿಕೆಯನ್ನು ವಾಲಿಗೆ ಕೊಟ್ಟಾಗ, “ಇದ ನ್ನು ಧರಿಸಿ ಯುದ್ಧ ಮಾಡುವಾಗ ಇದಿರಿಗಿರುವ ಶತ್ರುಗಳ ಬಲವೆಲ್ಲವೂ ನಿನಗೆ ಒರಲಿ'? ಎಂದು ಅನುಗ್ರಹಿಸಿರುವನು