ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦೦ ಶ್ರೀಮದ್ರಾಮಾಯಣವು (ಸರ್ಗ ೧೧, ಆ ಪಾಪಿಯು, ಇನ್ನು ಇಲ್ಲಿಗೆ ಕಾಲಿಡುವುದೆಂದರೇನು? ಇಲ್ಲಿಂದ ಸುತ್ತಲೂ ಪೂರ್ಣವಾಗಿ ಒಂದುಗಾವುದದವರೆಗೆ ವ್ಯಾಪಿಸಿರುವ ಈ ನನ್ನಾಶ್ರಮದ ಎ ಲೈ ಕಟ್ಟಿಗೆ ಅವನು ಕಾಲಿಟ್ಟರೆ ಸಾಕು ಆ ದುರ್ಬುದ್ಧಿಯು ಆಕ್ಷಣವೇ ಸಾ ಯುವನು ಇಷ್ಟೆ ಅಲ್ಲ' ಅವನ ಮಂತ್ರಿಗಳಲ್ಲಿ ಕಲವರು ಈಗಲೂ ಈ ಆಶ್ರ ಮದಲ್ಲಿ ಸೇರಿಕೊಂಡಿರುವರು ಅವರೂ ಇನ್ನು ಮೇಲೆ ಇಲ್ಲಿರಕೂಡದು ಇದ ನ್ನು ಕೇಳಿದೊಡನೆ ಅವರೂ ಈ ಸ್ಥಳವನ್ನು ಬಿಟ್ಟು, ಇಷ್ಟಬಂದಕಡೆಗೆ ಸು ಖವಾಗಿ ಹೋಗಿ ಸೇರಿಕೊಳ್ಳಲಿ' ಹಾಗಿಲ್ಲದೆ ಅವರು ಇಲ್ಲಿಯೇ ಇದ್ದ ಪಕ್ಷದಲ್ಲಿ ಅವರಿಗೂ ಶಾಪವನ್ನು ಕೊಡುವುದೇ ನಿಶ್ಚಯವು ನಾನು ಈ ಆಶ್ರಮವನ್ನು ಪುತ್ರನಂತೆ ಕಾಣುತ್ತ ಎಷ್ಟೋ ಪ್ರೀತಿಯಿಂದ ರಕ್ಷಿಸುತ್ತಿರುವೆನು ಇದರಲ್ಲಿ ಅವರನ್ನುಳಿಸುವುದರಿಂದ ಇಲ್ಲಿನ ಫಲಮೂಲಗಳೂ, ಎಲೆಚಿಗುರುಗಳೂ ಮುರಿಯಲ್ಪಡುತ್ತಿರುವುದು ಆದುದರಿಂದ ಇದೊಂದುದಿವಸದವರಗೆ ಮಾ ತ್ರವೇ ಅವರಿಗೆ ಗಡುವನ್ನು ಕೊಟ್ಟಿರುವೆನು ಎಲ್ಲರೂ ನಾಳೆ ಬೆಳಗಾಗುವಷ್ಟ ರೊಳಗಾಗಿ ಇದನ್ನು ಬಿಟ್ಟು ಹೋಗಬೇಕು ನಾಳೆ ಬೆಳಗಾದಮೇಲೆ ಇಲ್ಲಿ ಯಾವನಾದರೂ ಒಬ್ಬ ವಾನರನು ನನ್ನ ಕಣ್ಣಿಗೆ ಬಿದ್ದರೆ,ಆಕ್ಷಣವೇ ಅವನು ಕ ಲ್ಲಾಗಿಹೋಗಿ,ಅನೇಕ ಸಹಸ್ರವರ್ಷಗಳವರೆಗೆ ಆ ತಿಲಾರೂಪದಿಂದಲೇ ಇರ ತಿ'"ಎಂದು ಅತಿಕೂರಶಾಪವನ್ನು ಕೊಟ್ಟನು ಈ ವಿಷಯವು ಅಲ್ಲಿದ್ದ ವಾನ ರರಿಗೆಲ್ಲರಿಗೂ ಕ್ರಮಕ್ರಮವಾಗಿ ತಿಳಿಯಿತು ಆ ಕ್ಷಣವೇ ಅವರೆಲ್ಲರೂ ಆ ವನವ ನ್ನು ಬಿಟ್ಟುಹೋದರು ಹೀಗೆ ಗುಂಪುಗೂಡಿ ಬರುತ್ತಿರುವ ತನ್ನ ಕಡೆಯ ವಾನರ ರನ್ನು ನೋಡಿ ವಾಲಿಯುಶಂಕಾಕುಲಿತನಾಗಿ “ಎಲೈವಾನರರೆ 'ಇದೇನು'ಮಂ ತಗಾಶ್ರಮದಲ್ಲಿರುತ್ತಿದ್ದ ನೀವೆಲ್ಲರೂ ಒಟ್ಟಾಗಿ ಹೀಗೆ ಅದನ್ನು ಬಿಟ್ಟು ಬರುವು ದಕ್ಕೆ ಕಾರಣವೇನು? ನಮ್ಮ ವಾನರರೆಲ್ಲರಿಗೂ ಕ್ಷೇಮವಷ್ಟೆ” ಎಂದನು | ಆಗ ವಾನರರಲ್ಲರೂ ತಾವು ಹೊರಟುಬಂದಕಾರಣವನ್ನೂ , ಆ ವಾಲಿಗುಂ ಟಾದ ಶಾಪವನ್ನೂ ವಿವರವಾಗಿ ತಿಳಿಸಿದರು ಆಗ ವಾಲಿಯು ತನ್ನ ಕಡೆಯ ಮಂತ್ರಿಗಳು ಹೇಳಿದ ಈ ಮಾತನ್ನು ಕೇಳಿ,ಆಕ್ಷಣವೇ ಮತಂಗಮನಿಯ ಬ ಳಿಗೆ ಬಂದು ಕೈಮುಗಿದು, ಅನೇಕವಿಧದಲ್ಲಿ ಆತನ ಮನ್ನಣೆಯನ್ನು ಬೇಡಿಕೊಂ ಡನು ವಾಲಿಯು ಎಷ್ಟು ವಿಧದಲ್ಲಿ ಪ್ರಾರ್ಥಿಸಿದರೂ ಮತಂಗಮು