ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೧ ] ಕಿಂಧಾಕಾಂಡವು ೧೪೦೧ ನಿಯು ಅವನ ಮಾತಿಗೆ ಕಿವಿಗುಡದೆ, ತನ್ನಾಶ್ರಮಕ್ಕೆ ಹೊರಟುಹೋದನು ಇತ್ತಲಾಗಿ ವಾಲಿಯು ಶಾಪಭಯದಿಂದ ದುಃಖಿತನಾಗಿ, ತನ್ನ ನಿವಾಸಕ್ಕೆ ಹೊರಟುಹೋದನು ಈಗಲೂ ವಾಲಿಯು ಆ ಋಷಿಶಾಪಕ್ಕೆ ಹೆದರಿ ಈ ಋಶ್ಯಮೂಕಕ್ಕೆ ಕಾಲಿಡುವುದಿಲ್ಲ ಈ ಕಡೆಗೆ ಕಣ್ಣೆತ್ತಿಯೂ ನೋ ಡುವುದಿಲ್ಲ ಇದನ್ನು ತಿಳಿದೇ ನಾನು ಈಗ ನಿರ್ಭಯವಾಗಿ ನನ್ನ ಮಂ ತ್ರಿಗಳೊಡನೆ ಇಲ್ಲಿ ಸೇರಿಕೊಂಡಿರುವೆನು ರಾಮಾ' ಇದೋ ನೋಡು' ಆಗ ವಾಲಿಯು ತನ್ನ ಕೈಗಳಿಂದೆತ್ತಿಬಿಸುವ ಆ ದುಂದುಭಿಯ ಮೃತದೇಹವು, ಒಣಗಿ ಆಸ್ತಿ ಶೇಷವಾಗಿ ಈಗಲೂ ಇಲ್ಲಿ ಬಿಕ್ಕಿರುವುದು ಬೆಟ್ಟದಂತೆ ದೊ ಡದಾದ ಈ ದೇಹವನ್ನು ಆ ವಾಲಿಯು ಎಷ್ಟು ದೂರಕ್ಕೆ ಬಿಸಾಡಿರುವನು ನೋಡಿದೆಯಾ?ಅವನ ವೀರಾತಿಶಯಕ್ಕೆ ಇದಕ್ಕಿಂತಲೂ ಬೇರೆ ಯಾವ ಸಿದ ರ್ಶನವು ಬೇಕು' ರಾಮಾ! ಅದೂ ಹೋಗಲಿ' ಇತ್ತಲಾಗಿ ನೋಡು' ಅನೇಕ ಶಾಖೆಗಳೊಡಗೂಡಿ ವಿಸ್ತಾರವಾಗಿ ಬೆಳೆದ ಬಲವಾದ ಈ ಏಳು ಸಾಲವೃ ಕ್ಷಗಳುಕಾಣುವುವಷ್ಟೆ? *ಆ ವಾಲಿಯು ಇವುಗಳಲ್ಲಿ ಒಂದೇ ಸಲಕ್ಕೆ ಒಂದೊಂ ದುಮರವನ್ನು ತನ್ನ ಬಾಣದಿಂದ ಕರೆದುಬಿಡಬಲ್ಲ ಅದ್ಭುತಸಾಮರ್ಥ್ಯ ವುಳ್ಳವನು' ರಾಮಾ' ಈಗ ನಾನಂತೂ ಆ ವಾಲಿಯಲ್ಲಿರುವ ಅಸಾಧಾರಣ ಸಾಮರ್ಥ್ಯವನ್ನು ನಿನಗೆ ತಿಳಿಸಿಬಿಟ್ಟಿರುವೆನು ಹೀಗೆ ಎಣೆಯಿಲ್ಲದ ವೀರ ವುಳ್ಳ ಆ ವಾಲಿಯನ್ನು ಯುದ್ಧದಲ್ಲಿ ನೀನು ಹೇಗೆ ಜಯಿಸಬಲ್ಲೆ?” ಎಂ ದನು ಇದನ್ನು ಕೇಳುತಿದ್ದ ಲಕ್ಷಣನು, ಮುಗುಳ್ಳ ಗೆಯಿಂದ ನಗುತ್ತ, ಆ ಸುಗ್ರೀವನನ್ನು ಕುರಿತು, ಅಯ್ಯಾ ವಾನರೇಂದ್ರನೆ' ನಮ್ಮ ರಾಮನು ಆ ವಾಲಿಯನ್ನು ಕೊಲ್ಲಬಲ್ಲನೆಂಬ ವಿಷಯದಲ್ಲಿ ನಿನಗೆ ಚೆನ್ನಾಗಿ ನಂಬಿಕೆಯುಂ ವಾಗಬೇಕಾದರೆ, ಈಗ ಯಾವಕೆಲಸವನ್ನು ಮಾಡಿ ತೋರಿಸಬೇಕು ಹೇಳು” ಎಂದನು ಅದಕ್ಕಾಸುಗ್ರೀವನು ಲಕ್ಷ್ಮಣನನ್ನು ಕುರಿತು, (ಲಕ್ಷಣಾ ! ನಾನು ಬೇರೆಯಾವುದನ್ನೂ ಅಪೇಕ್ಷಿಸುವವನಲ್ಲ ಆ ವಾಲಿ ಯು ಈ ಏಳುಮ ರಗಳಲ್ಲಿ ಒಂದೊಂದುಮರವನ್ನೂ ತನ್ನ ಒಂದೊಂದು ಬಾಣದಿಂದ ಕೊರೆದು - *ವಾಲಿಯು ತನ್ನ ಶಕ್ತಿಯಿಂದಾಡಿಸಿ ಒಂದೊಂದುಸಲಕ್ಕೆ ಒಂದೊಂದುಮರದ ಎಲೆ ಗಳೆಲ್ಲವನ್ನೂ ವಿಶೇಷವಾಗಿ ಉದಿರಿಸಿಬಿಡಬಲ್ಲನೆಂದೂ ಅರಾಂತರವನ್ನು ಹೇಳುವರು,