ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೧ ] ಕಿಷಿಂಧಾಕಾಂಡವು ೧೪೦೩ ಮೊದಲಾದ ಕೆಲವು ವಾನರರೊಡನೆ ಸುತ್ತುತ್ತಿರುವೆನು ಎಲೈಮಿತ್ರವತ್ಸಲ ನೆ' ಹೀಗೆ ಭಯದಿಂದ ತತ್ತಳಿಸುತ್ತಿರುವ ನನಗೆ ದೈವಗತಿಯಿಂದ ಪರಮಶ್ಲಾ ಫ್ಯನಾದ ನಿನ್ನಂತಹ ಸನ್ನಿತನು ದೊರಕಿದನು ಎಲೈಪುರುಷಶ್ರೇಷ್ಟನೆ'ಹಿ ಮವಂತವನ್ನಾಶ್ರಯಿಸುವಂತೆ ಈಗ ನಾನು ನಿನ್ನನ್ನು ಆಶ್ರಯಿಸಿಬಿಟ್ಟಿರುವೆ ನು ಆದರೆ ನಾನು ಆ ನನ್ನ ದುಷ್ಯಸಹೋದರನಾದ ವಾಲಿಯ ಬಲವನ್ನು ಆ ನೇ ಕಾವರಿ ಅನುಭವಿಸಿ ತಿಳಿದಿರುವೆನು ಯುದ್ಧದಲ್ಲಿ ನಿನ್ನ ವೀರವೆಂತದೆಂಬು ದನ್ನು ನಾನು ಯಾವಾಗಲೂ ಪ್ರತ್ಯಕ್ಷವಾಗಿ ನೋಡಿ ತಿಳಿದವನಲ್ಲ ರಾಮಾ! ಆದರೆ ನಾನು ಈಗ ನಿನ್ನ ಪ್ರೀಲ್ಯವನ್ನು ಇತರರೊಡನೆ ಹೋಲಿಸಿ ಪರೀಕ್ಷಿಸ ಬೇಕಂಬುದಕ್ಕಾಗಲಿ, ನಿನ್ನನ್ನು ಅವಮಾನಪಡಿಸುವುದಕ್ಕಾಗಲಿ, ನಿನ್ನ ನ್ನು ಹೆದರಿಸುವುದಕ್ಕಾಗಲಿ ಹೀಗೆ ಹೇಳುವನೆಂದೆಣಿಸಬೇಡ! ಆ ವಾಲಿಯ ಭಯಂ ಕರವಾದ ಕಾವ್ಯಗಳನ್ನು ನೋಡಿರುವುದರಿಂದ ನನಗುಂಟಾಗಿರುವ ಭೀತಿಯು ನನ್ನನ್ನು ಹೀಗೆ ಹೇಳಿಸುತ್ತಿರುವುದು ಎಲ್ಯ ರಘುವಂಶಶಿಖಾಮಣಿಯೆ ನಿನ್ನ ಅಭಯವಾಕ್ಯವೊಂದೇ ನನಗೆ ಸಾಕಾದ ಪ್ರಮಾಣವೆಂಬುದರಲ್ಲಿ ಸಂದೇಹವಿ ಲ್ಲ ಇದರಮೇಲ ಸಿನ್ನ ಬುದ್ಧಿಯೂ ನಿನ್ನ ಆಕಾರವೂ, ನಿನ್ನ ಧೈಯ್ಯವೂ, ಬೂದಿ ಮುಚ್ಚಿದ ಕೆಂಡದಂತಿರುವ ನಿನ್ನ ಮಹಾತೇಜಸ್ಸನ್ನು ಸೂಚಿಸುತ್ತಿರುವುವು ಇದರಲ್ಲಿ ಸಂದೇಹವೇಇಲ್ಲ” ಎಂದನು ಧೀರನಾದ ರಾಮನು ಈ ಮಾತನ್ನು ಕಳಿ ಮಂದಹಾಸಪೂರೈಕವಾಗಿ ಸುಗ್ರೀವನನ್ನು ನೋಡಿ, “ಎಲೈ ವಾನರೇಂ ದ್ರನೆ' ಹಾಗ ನಿನಗೆ ನನ್ನ ಪರಾಕ್ರಮದಲ್ಲಿ ನಂಬಿಕಯಲ್ಲದಿದ್ದರೆ, ಆ ಯುದ್ಧ ವಿಷಯದಲ್ಲಿ ನಾನು ಸಮರ್ಥನೆಂಬುದಕ್ಕೆ ನಿನಗೆ ಸಾಕಾದಷ್ಟು ನಂಬಿ ಕಯನ್ನು , ನೀನು ಕೇಳಿದುದಕ್ಕಿಂತಲೂ ಹೆಚ್ಚಾಗಿಯೇ ತೋರಿಸಿಕೊಡುವೆ ನು” ಎಂದನು ಆಗಲೇ ರಾಮನು ಅಸ್ಲಿ ದುಂದುಭಿಯ ದೇಹವನ್ನು ಕೇವಲ ಲೀಲಾಮಾತ್ರದಲ್ಲಿ ತನ್ನ ಕಾಲಿನ ಹೆಬ್ಬೆರಳಿನಿಂದ ಚಿಮ್ಮಿ ಬಿಟ್ಟನು ಆ ದು ಹತ್ತು ಯೋಜನದ ದೂರದವರೆಗೆ ಹೆ ಗಿಬಿಟ್ಟಿತು ಆದರೆ ಹೀಗೆ ರಾಮ ನು ಒಣಗಿದ್ದ ಆ ಮೃತದೇಹವನ್ನು ಕಾಲಿನಿಂದ ಚಿಮ್ಮಿ ಅಷ್ಟು ದೂರಕ್ಕೆ ಹಾ ರಿಸಿದರೂ ಸುಗ್ರೀವನಿಗೆ ಮನಸ್ಸಿನ ಶಂಕೆಯು ಹೋಗಲಿಲ್ಲ ಆಗ ಸುಗ್ರಿ ವನು ಲಕ್ಷಣನಿಗಿದಿರಾಗಿ ರಾಮನನ್ನು ನೋಡಿ, ರಾಮಾ ನೀನು ಮಾಡಿದ