ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'೧೪೦೪ ಶ್ರೀಮದ್ರಾಮಾಯಣವು [ಸರ್ಗ, ೧೧' ಕಾರವೇನೋ ತೃಪ್ತಿಕರವಾಗಿಯೇ ಇರುವುದು ಆದರೂ ಇದರಿಂದ ಅಷ್ಟಾ ಗಿ ನನ್ನ ಶಂಕೆಯು ನೀಗಲಿಲ್ಲ ಮೊದಲು ಈ ದೇಹವು ಇನ್ನೂ ಹಸಿದಾಗಿತ್ತು ಮಾಂಸತುಂಬಿ ಉಬ್ಬಿದಾಗಲೇ ವಾಲಿಯು ಇದನ್ನು ಕೈಯಿಂದೆತ್ತಿ ಇಷ್ಟು ದೂರಕ್ಕೆ ಬಿಸುಟನು ಈಗ ಅದೇದೇಹವು, ಕೇವಲ ಶುಷ್ಕವಾಗಿ, ಸ್ವಲ್ಪವೂ ಮಾಂಸವಿಲ್ಲದೆ ಹುಲ್ಲಿನಂತೆ ಹಗುರವಾಗಿರುವುದು ಇದಲ್ಲದೆ ಇದನ್ನು ಬಿಸುಡು ವಾಗ ನಮ್ಮಣ್ಣನು ಆಗಲೇ ಯುದ್ಧಮಾಡಿ ಬಹಳವಾಗಿ ಬಳಲಿದನು ಆದ ರಮೇಲೆ ಅವನು ಆಗಲೇ ನಿದ್ರೆಯೆಂದೆದ್ದು ಬಂದವನಾದುದರಿಂದ ಬಿಗುಡಿನಲ್ಲಿ ಯೂ ಇದನು ಹೀಗಿರುವಾಗಲೂ ನನ್ನಣ್ಣನು ಅಷ್ಟು ಭಾರವುಳ್ಳದೇಹವನ್ನು ಇಷ್ಟುದೂರಕ್ಕೆಸೆದನು ಈಗ ನೀನು ಆ ವಿಧವಾದ ನ್ಯೂನತೆಯೊಂದೂ ಇಲ್ಲ ದೆ ಉತ್ಸಾಹದಿಂದಿರುವೆ ಮತ್ತು ಈ ದೇಹವೂ ಒಣಗಿ ಹಗುರವಾಗಿಹೋಗಿರು ವುದು ಆದುದರಿಂದ ಇಷ್ಟು ಮಾತ್ರಕ್ಕೆ ನಿನ್ನ ಬಲವು,ಹೆಚೊ, ಅವನಬಲವು ಹ ಜ್ಯೋ ಎಂಬುದನ್ನು ನಿರ್ಧರಿಸುವುದು ಸಾಧ್ಯವಲ್ಲ ರಾಮಾ' ಈ ವಿಷಯದಲ್ಲಿ ಬೇರೊಂದನ್ನೂ ನಾವು ನೋಡಬೇಕಾದ ಎಲ್ಲವಾದರೂ, ಆಗ ಹಸಿಯಾಗಿ ಭಾರವಾಗಿದ್ದ ದೇಹವು, ಈಗ ಒಣಗಿನಿಸ್ಸಾರವಾಗಿರುವುದೆಂಬ ಈವ್ಯತ್ಯಾಸವೇ ಸಾಕಲ್ಲವೆ?ಆದುದರಿಂದ ನಿನ್ನ ಮತ್ತು ವಾಲಿಯ ಬಲದಲ್ಲಿ ಮೊದಲಿನ ಸಂದೇ ಹವು ನನಗಿದ್ದೇ ಇರುವುದು ನೀನು ಈ ಸಾಲವೃಕ್ಷಗಳಲ್ಲಿ ಒಂದನ್ನು ನಿನ್ನ ಒಂದೇಬಾಣದಿಂದ ಭೇದಿಸಿಬಿಟ್ಟೆಯಾದರ, ಆಗ ನಿಮ್ಮ ಬಲಾಬಲಗಳು ಚೆ ಸ್ನಾಗಿ ತಿಳಿದುಹೋಗುವುವು ಆದುದರಿಂದ ರಾಮಾ ! ಅನೆಯ ಸುಂಡಿಲಂ ತೆ ಮಹತ್ತಾದ ಈ ನಿನ್ನ ಬಿಲ್ಲಿಗೆ ನಾಣೇರಿಸಿ ಆಕರ್ಣಾ೦ತವಾಗಿ ಎಳೆದು,ಬಾ ಣವನ್ನು ಪ್ರಯೋಗಿಸು ನೀನು ಪ್ರಯೋಗಿಸಿದ ಬಾಣವು ಈ ಸಾಲವೃಕ್ಷ ವನ್ನು ಬೇಧಿಸುವುದರಲ್ಲಿ ಸಂದೇಹವೇನೂ ಇರದು ಆದರೂ ನನ್ನ ಮನಸ್ಯ ಪ್ತಿಗಾಗಿ ನಿನ್ನನ್ನು ಕೇಳಿಕೊಳ್ಳುವೆನು ನಿನ್ನನ್ನು ಪರೀಕ್ಷಿಸುವೆನೆಂದು ನನ್ನಲ್ಲಿ ನೀನು ಬೇರೆಪಿದವಾಗಿ ಎಣಿಸಬೇಡ ಇದೋ'ನಾನು ಸತ್ಯವಾಗಿ ಹೇಳುವೆನು ತೇಜಸ್ವಿಗಳಲ್ಲಿ ಸೂರನೂ, ಪ್ರತಗಳಲ್ಲಿ ಹಿಮವಂತವೂ, ಮೃಗಗಳಲ್ಲಿ ಸಿc ಹವೂ, ಹೇಗೆ ಮೇಲ್ಕಯನ್ನು ಪಡೆ ಬರುವುವೋ, ಹಾಗೆಯೇ ನೀನೂ ಪರಾಕ್ರ ಮದ ವಿಷಯದಲ್ಲಿ ಈ ಮನುಷ್ಯಲೋಕದಲ್ಲೆಲ್ಲಾ ಮೇಲೆಯನ್ನು ಪಡೆದ ವನೆಂಬುದರಲ್ಲಿ ಸಂದೇಹವಿಲ್ಲ” ಎಂದನು. ಇಲ್ಲಿಗೆ ಹನ್ನೊಂದನೆಯಸರ್ಗವು.