ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨] ಕಿಂಧಾಕಾಂಡವು ೧೪೦೫ (ರಾಮನು ಸಪ್ತ ಸಾಲಗಳನ್ನು ಬೇಧಿಸಿದುದು, ವಾಲಿ). ಸುಗ್ರೀವರ ಮೊದಲನೆಯಯುದ್ದವಗೆ ಹೀಗೆ ಹೇಳಿದ ಸುಗ್ರೀವನ ಮಾತನ್ನು ಕೇಳಿ ಮಹಾತೇಜಸ್ವಿಯಾದ ರಾಮನು, ಆತನಿಗೆ ನಂಬಿಕೆಯನ್ನು ಹುಟ್ಟಿಸುವುದಕ್ಕಾಗಿ ತನ್ನ ಬಿಲ್ಲನ್ನು ಕೈಗೆ ತಿಕೊಂಡನು ಭಯಂಕರವಾದ ಒಂದುಬಾಣವನ್ನೂ ಕೈಗೆ ತೆಗೆದುಕಂ ಡು, ಧನುಷಂಕಾರಧ್ವನಿಗಳಿಂದ ಸಮಸ್ಯದಿಕ್ಕುಗಳನ್ನೂ ತುಂಬುತ್ತ, ಆ ಬಾಣವನ್ನು ಧನುಸ್ಸಿನಲ್ಲಿ ಸಂಧಾನಮಾಡಿ, ಒಂದುಸಾಲವೃಕ್ಷವನ್ನು ಗುರಿಹಿ ಡಿದು ಹೊಡೆದನು ಬಲಶಾಲಿಯಾದ ರಾಮನು, ಆ'ಕರ್ಣಾ೦ತವಾಗಿ ಬಾಣವನ್ನೆಳದು ಬಿಟ್ರೊಡನೆ, ಚಿನ್ನ ದಹಿಡಿ ಯುಳ್ಳ ಆ ಒಂದೇಬಾಣವು, ಸಪ್ತ ಸಾಲವೃಕ್ಷಗಳನ್ನೂ ಭರಿಸಿಕೊಂಡುಹೋಗಿ, ಮುಂದಿದ್ದ ಬೆಟ್ಟದ ತಿಖರವ ನ್ಯೂ ಕೂರದು, ಅಲ್ಲಿಂದಾಚೆಗೆ ಭೂಮಿಯಲ್ಲಿಯೂ ನಾಟಿಕೊಂಡಿತು ಹೀಗೆ ಭೂಮಿಯನ್ನು ಭೇದಿಸಿದಮೇಲ, ಅದೇಬಾಣವು ಪುನಃ ಮೇಲಕ್ಕೆದ್ದು, ಅಲ್ಲಿಂದ ಹಿಂತಿರುಗಿ ರಾಮನ ಬತ್ತಳಿಕೆಯನ್ನೇ ಪ್ರವತಿಸಿತು ಆಗ ಸುಗ್ರೀವನು ಈ ರಾ ಮನ ಬಾಣವೇಗವನ್ನೂ , ಆ ಬಾಹತಿಗೆ ಸಪ್ತಸಾಲಗಳೂ ಏಕಕಾಲದಲ್ಲಿ ಮುರಿದುಬಿದ್ದುದನ್ನೂ ನೋಡಿ, ಆಶ್ವ ರದಿಂದ ಹಿಂದುಮುಂದುತೋರದೆ # "ನಾಗಿ ನಿಂತುಬಿಟ್ಟನು ಆಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ * ಕಂರ ಭರಣಗಳು ಜೋಲುವಂತೆ ತಲೆ ಯನ್ನು ನೆಲಕ್ಕೆ ಸೋಕಿಸಿ, ರಾಮ ನಿಗೆ ಪ್ರಣಾಮಮಾಡಿ ಕೈಮುಗಿದು ನಿಂತು, ಧಮ್ಮಜ್ಞನಾಗಿಯೂ, ಸರಾ ಸ್ವವಿಶಾರದದಲ್ಲಿ ಮೇಲಾಗಿಯೂ, ಲೋಕಕಶೂರನಾಗಿಯೂ ಇರುವ ಆರಾಮನನ್ನು ಕುರಿತು, ಅವನ ಅದ್ಭುತಸಾಮರವನ್ನು ನೆನೆನೆನೆದು ಹಿಗ್ಗು (ಎಲೈ ಪುರುಷಶ್ರೇಷ್ಟನೆ' ಇನ್ನು ನಾನೇನುಹೇಳಲಿ'ಯುದ್ಧದಲ್ಲಿ ಇಂದ್ರನೊ ಡಗೂಡಿ ಸಮಸ್ತದೇವತೆಗಳೂ ಬಂದು ನಿಂತರೂ ನೀನು ನಿನ್ನ ಬಾಣಗಳಿಂದ - * ಇಲ್ಲಿ ಕರಾಭರಣಗಳು ಜೂಲುವಂತೆ ತಲೆಯನ್ನು ನೆಲಕ್ಕೆಸೋಕಿಸಿ ಪ್ರ ಣಾಮಮಾಡಿದನೆಂಬುದರಿಂದ, ಉದರಪ್ರದೇಶವು ನೆಲಕ್ಕೆ ಸೋಕದಂತೆ ನಮಸ್ಕರಿಸಿದ ನೆಂದು ಭಾವವು ಇದರಿಂದ ಭಗವದ್ವಿಷಯದಲ್ಲಿ ಪ್ರಣಾಮಪ್ರಕಾರವು ಸೂಚಿತವೆಂದು ಕೆಲವಮತವು - ಒ )