ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦೬ ಶ್ರೀಮದ್ರಾಮಾಯಣವು (ಸರ್ಗ ೧೨, ಕೊಲ್ಲಬಲ್ಲೆ ಯಂಬುದರಲ್ಲಿ ಸಂದೇಹವಿಲ್ಲ ಇನ್ನು ವಾಲಿಯನ್ನು ಕೊ ಲ್ಲುವುದೇನು ಹೆಚ್ಚು' ಒಂದುಮರವನ್ನು ಕಡಿಯುವುದಕ್ಕಾಗಿ ನೀನು ಬಿಟ್ಟ ಒಂದೇಬಾಣವು, ತನ್ನ ವೇಗದಿಂದ ಏಳುಮರಗಳನ್ನೂ ಭೇದಿಸಿದುದಲ್ಲದೆ, ಮುಂದಿಬೆಟ್ಟವನ್ನೂ ಕರೆದು, ಭೂಮಿಗೂ ನಾಟಿತು'ಇನ್ನು ನಿನ್ನ ಮುಂ ದೆ ಯುದ್ಧದಲ್ಲಿ ನಿಲ್ಲುವವನಾವನು ? ಈಗ ನನ್ನ ಶೋಕವೆಲ್ಲವೂ ನೀಗಿತು ಈಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ ! ಮಹೇಂದ್ರವರುಣರಿಗೆ ಸಮಾನ ನಾದ ನಿನ್ನೊಡನೆ ನನಗೆ ಸ್ನೇಹವುಂಟಾದಮೇಲೆ, ಇನ್ನು ನನಗೆ ಯಾವವಿ ಧದಲ್ಲಿ ಕೊರತೆಯುಂಟು ? 'ರಾಮಾ ! ಇನ್ನು ತಡಮಾಡಬೇಡ ! ನನಗೆ ಒಡಹುಟ್ಟಿದ ರೂಪದಿಂದಿರುವ ನನ್ನ ವೈರಿಯನ್ನು ಕೊಂದು, ನನ್ನ ಇಷ್ಟವನು ಕೈಗೂಡಿಸುವುದಕ್ಕೆ ಪ್ರಯತ್ನಿ ಸು' ಇದೂ' ಕೈ ಮುಗಿಯುವೆನು” ಎಂದನ್ನು ಆಗ ರಾಮನು ಆಗಿನ ಸಂತೋಷ ತಿಶಯದಿಂದ ಪ್ರಿಯದರ್ಶನನಾದ ಸುಗ್ರಿ ವನನ್ನ ಪ್ಪಿಕೊಂಡು, ಮಹಾಪ್ರಜ್ಞನಾದುದರಿಂದ, ಲಕ್ಷ್ಮಣನ ಇಂಗಿತಗ ಇನ್ನೂ ತಿಳಿದ., ಅವನಿಗೂ ಇಷ್ಟವಾದ ಮಾತಿನಿಂದ ಸುಗ್ರೀವನನ್ನು ಕುರಿತು ಹೇಳುವನು (ಎಲೈ ಸುಗ್ರೀವನ' ಇನ್ನು ಸಾವಕಾಶವೇಕೆ? ಇಲ್ಲಿಂದ ಹೀಗೆ ಯೇ ಕಿಷಿಂಧೆಗೆ ಹೊರಟುಬಿಡುವೆವು ನೀನು ಸ್ವಲ್ಪ ಮುಂದಾಗಿ ಬೇಗಹೋ। ಗು' ಆಗ್ಲಿಹೊಗಿ ಭಾತೃಹಿಂಸಕನಾದ ವಾಲಿಯನ್ನು ಯುದ್ಧಕ್ಕೆ ಕರೆಯ) ವನಾಗು'” ಎಂದನು ಆಮೇಲೆ ಎಲ್ಲರೂ ವೇಗದಿಂದ ಹೊರಟು ಕಿಂಧೆ ಯಬಳಿಗೆ ಬಂದರು ಅಲ್ಲಿ ಸಮೀಪದಲ್ಲಿದ್ದ ದುರ್ಗಮವಾದ ಒಂದು ಅಡವಿ ಯಲ್ಲಿ ರಾಮಾದಿಗಳಲ್ಲರೂ ಒಂದುಮರದ ಮರೆಯಲ್ಲಿ ನಿಂತರು ಆತ್ತಲಾಗಿ ಸುಗ್ರೀವನು ನಡುದಟ್ಟಿಯನ್ನು ಬಲವಾಗಿ ಎಳೆದುಕಟ್ಟಿಕೊಂಡು, ಯುದ್ಧ ಸನ್ನದ್ಧನಾಗಿ ಬಂದುನಿಂತು, ವಾಲಿಯನ್ನು ಯುದ್ಧಕ್ಕೆ ಕರೆಯುವುದಕ್ಕಾಗಿ ಆಕಾಶವೇ ಭೇದಿಸುವಂತೆ ಭಯಂಕರವಾದ ಒಂದುಗರ್ಜನೆಯನ್ನು ಮಾಡಿ ದನು ಸುಗ್ರೀವನ ಈ ಘೋರಗರ್ಜನವನ್ನು ಕೇಳಿ ವಾಲಿಗೆ ಮಹಾಕೋಪ ವುಂಟಾಯಿತು *ಆಸ್ಕಾಚಲದಿಂದ ಬರುವ ಸೂರನಂತೆ ಆಕ್ಷಣವೇ ಮಹಾವೇ

  • ಈ ನಿದರ್ಶನದಿಂದ ವಾಲಿಗಂಟಾಗುವ ತೇಜೋಹಾನಿಯೂ ಅವನ ಕೊನೆ ಗಾಲವೂ ಸೂಚಿತವಾಗುವುದು