ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪of ಸರ್ಗ ೧೨ | ಕಿಷಿಂಧಾಕಾಂಡವು ಮೋಸಬರಬಾದ (ಎಂದೆಣಿಸಿ, ಶತ್ರುವಿನ ಪ್ರಾಣವನ್ನು ಹೀರಿಬಿಡತಕ್ಕ ಈ ನನ್ನ ಘೋರಬಾಣವನ್ನು ಪ್ರಯೋಗಿಸಲಿಲ್ಲ ' ಇದುಹೊರತು ಬೇರೆ ಕಾರಣವೇನೂ ಇಲ್ಲ ಇದು ಸತ್ಯವು ಇದನ್ನು ಯೋಚಿಸದೆ ನಾನು ಅಜ್ಞಾ ನದಿಂದಾಗಲಿ, ಅಲ್ಪ ಬುದ್ಧಿಯಿಂದಾಗಲಿ, ಬಾಣವನ್ನು ಬಿಟ್ಟು, ಅದರಿಂದ ನಿ ನಗೇನಾದರೂ ವಿಪತ್ತು ಸಂಭವಿಸಿದ್ದ ಪಕ್ಷದಲ್ಲಿ, ಆಗ ಲೋಕವೆಲ್ಲವೂ ನನ್ನ ವಿಷಯದಲ್ಲಿ ಏನೆಂದು ಭಾವಿಸಬಹುದು? ಆಗ ನನ್ನ ವಿವೇಕಶೂನ್ಯತೆಯೂ,ಹು ಡುಗುತನವೂ ಚೆನ್ನಾಗಿ ಹೊರಪಡು ತಿತ್ತಲ್ಲವೆ?ಯಾವನಿಗೆ ನಾವು ಅಭಯವ ನ್ನು ಕೊಟ್ಟಿರುವೆವೋ ಅವನನ್ನೇ ಕೊಲ್ಲುವುಕ್ಕಿಂತ ಮಹಾಪಾತಕವೇನುಂಟು ಸುಗ್ರಿವಾ'ಇನ್ನೆಷ್ಟು ಹೇಳಿದರೇನು?ಮುಖ್ಯವಾಗಿ ನಾನೂ, ಈಲಕ್ಷಣನೂ, ವರವರ್ಣಿನಿಯಾದ ಆ ನನ್ನ ಪ್ರಿಯ ಸೀತೆಯೂ ಈಗ ನಿನ್ನಲ್ಲಿ ಮರಹೊಕ್ಕು ನಿನ್ನ ಆಧೀನರಾಗಿರುವೆವು ಈಗ ಈ ಕಾಡಿನಲ್ಲಿ ನಾವು ಮೂವರಿಗೂ ನೀ ನೇ ದಿಕ್ಕಾಗಿರುವೆ' ಆದುದರಿಂದ ನೀನು ನಮ್ಮಲ್ಲಿ ಸಂದೇಹಿಸಬೇಡ' ಪುನಃ ಹೋಗಿ ಆ ವಾಲಿಯನ್ನು ಯುದ್ಧಕ್ಕೆ ಕರೆದು ಯುದ್ಧವನ್ನಾರಂಭಿಸು' ನನ್ನ ಮಾತನ್ನು ದೃಢವಾಗಿ ನಂಬು'ಸತ್ಯವಾಗಿಯೂ ಸಂದೇಹಿಸಬೇಡ'ಸಾರಿಸಾರಿ ಹೇಳುವೆನು ಈ ಒಂದೇಬಾಣದಿಂದ ಇನ್ನು ಮುಹೂರ್ತದೊಳಗಾಗಿ ವಾಲಿ ಯು ಯುದ್ಧರಂಗದಲ್ಲಿ ನೆಲಕ್ಕೆ ಬಿದ್ದು ಉರುಳುವುದನ್ನು ನಿನ್ನ ಕಣ್ಣಾರೆ ನೀ ನೇ ನೋಡುವೆ' ಆದರೆ ನೀನುಮಾತ್ರ ಆ ದ್ವಂದ್ವಯುದ್ಧಕ್ಕೆ ಹೊರಡುವಾಗ ನನಗೆ ತಿಳಿಯುವುದಕ್ಕಾಗಿ ಒಂದು ಗುರುತನ್ನಿಟ್ಟುಕೊಂಡು ಹೋಗಬೇಕು ವತ್ಸ ಲಕ್ಷಣಾ ! ಇದೋ ಇಲ್ಲಿ ಈ ನಾಗಪ್ರಷ್ಟಿಲತೆಯು ಚೆನ್ನಾಗಿ ಪುಷ್ಟಿಸಿರುವುದು ನೋಡು ! ಇದನ್ನು ಕಿತ್ತು ತಂದು ಮಹಾತ್ಮನಾದ ಈ ಸುಗ್ರೀವನ ಕೊರಳಿಗೆ ಹಾಕು !” ಎಂದನು ಇದನ್ನು ಕೇಳಿದೊಡನೆ ಲ ಕಣನು ಬೆಟ್ಟದ ತಪ್ಪಲಿನಲ್ಲಿ ಬೆಳೆದಿದ್ದ ಪುಷ್ಟಿತವಾದ ಆ ಲತೆಯನ್ನು ತಂದು ಸುಗ್ರೀವನ ಕೊರಳಿಗೆ ಹಾಕಿದನು ಆಗ ಸುಗ್ರೀವನು ಕಂರಗತವಾ ದ ಆ ಮಾಲೆಯಿಂದ'ಆಕಾಶದಲ್ಲಿ ನಕ್ಷತ್ರಮಾಲೆಯಿಂದ ಪರಿವೃತನಾದ ಸೂ ರನಂತೆ ಶೋಭಿಸುತ್ತಿದ್ದನು ಮತ್ತು ಬಲಾಕಪರಂಪರೆಯಿಂದ ಕೂಡಿದ ಸಂಜೆಯಮೇಫುದಂತೆ ಆತನ ದೇಹವು ಪ್ರಕಾಶಿಸುತ್ತಿತ್ತು.ಆಗ ಸುಗ್ರೀವನು 89