ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧೦ ಶ್ರೀಮದ್ರಾಮಾಯಣವು [ಸರ್ಗ, ೧೩. ರಾಮನ ಮಾತಿನಲ್ಲಿ ಸಂಪೂರ್ಣವಾದ ವಿಶ್ವಾಸವನ್ನಿಟ್ಟು, ಪುನಃ ರಾಮ ನನ್ನೂ ಕರೆದುಕೊಂಡು, ವಾಲಿರಕ್ಷಿತವಾದ ಕಿಕ್ಕಿಂಧೆಯಕಡೆಗೆ ಹೊರಟ ನು ಇಲ್ಲಿಗೆ ಹನ್ನೆರಡನೆಯ ಸರ್ಗವು 'ಸುಗ್ರೀವನೊಡಗೂಡಿ ಅವನ ಮಂತ್ರಿಗಳೂ, ರಾಮ ಲಕ್ಷಣಾದಿಗಳೂ ಪುನಃ ಕಿಷಂಧೆಯಕಡೆಗೆ ಹೊರ , ದಾರಿಯಲ್ಲಿ ಸಪ್ತ ಜನರೆಂಬ ಮಹ ( ರ್ಷಿಗಳ ಆಶ್ರಮವನ್ನು ನೋಡಿದುದು ಹೀಗೆ ಥರಾತ್ಮನಾದ ರಾಮನು ಸುಗ್ರೀವನೊಡನೆ ಋಶ್ಯಮೂಕ ದಿಂದ ಹೊರಟು, ವಾಲಿಯ ವೀರದಿಂದ ಸುರಕ್ಷಿತವಾದ ಕಿಕ್ಕಿಂಧೆಯಕಡೆ ಗೆ ಬರುತಿದ್ದನು ಅಲ್ಲಿಂದ ಹೊರಟು ಬರುವಾಗಲೇ ಚಿನ್ನದ ಕಟ್ಟು ಗಳುಳ್ಳ ತನ್ನ ಮಹಾಥನುಸ್ಸನ್ನೆತ್ತಿಕೊಂಡು, ಸರಸಮಾನಗಳಾಗಿ ಜೂಲಿ ಸುತ್ತಿರುವ ಯುದ್ಧ ಸಾಧನಗಳಾದ ತನ್ನ ತೀಕ್ಷಬಾಣಗಳನ್ನೂ ಸಿದ್ಧವಾ ಗಿ ಹಿಡಿದುಹೊರಟನು ಉಬ್ಬಿದ ಕಂರವುಳ್ಳ ಸುಗ್ರೀವನೂ, ಲಕ್ಷಣನೂ, ರಾಮನ ಮುಂದುಗಡೆಯಲ್ಲಿ ಬರುತಿದ್ದರು ರಾಮನ ಹಿಂದೆ ವೀರನಾದ ಹನುಮಂತನೂ, ನಳನೂ,ನೀಲನೂ, ತಾರನೆಂಬ ವಾನರಶ್ರೇಷ್ಠನೂ ಒಟ್ಟಾ ಗಿ ಸೇರಿ ಬರುತಿದ್ದರು ಇವರೆಲ್ಲರೂ ಬಾರಿಯಲ್ಲಿ ಅಲ್ಲಲ್ಲಿ, ಪುಷ್ಪಸಮೃದ್ಧಿ ಯಿಂದ ತೂಗುತ್ತಿರುವ ಗಿಡಗಳನ್ನೂ, ತಿಳಿನೀರಿನಿಂದ ಮನೋಹರಗಳಾಗಿ ಸ ಮುದ್ರಗಾಮಿನಿಗಳಾದ ಮಹಾನದಿಗಳನ್ನೂ, ಸಣ್ಣ ಸಣ್ಣ ಗವಿಗಳನ್ನೂ , ಬೆಟ್ಟಗಳನ್ನೂ, ಕಲ್ಲಿನ ಗವಿಗಳನ್ನೂ, ದೊಡ್ಡಗುಹೆಗಳನ್ನೂ ನೋಡಿ ಆನಂದಿ ಸುತ್ತ, ಮುಂದೆಮುಂದೆ ಸಾಗಿಬರುತಿದ್ದರು ಮತ್ತು ಅಲ್ಲಲ್ಲಿ ಮುಖ್ಯಮು ಶ್ಯಗಳಾದ ಪರತಶಿಖರಗಳನ್ನೂ,ಗೋಡೆಯೆಬ್ಬಿಸಿ ಕಟ್ಟಿದ ಮನೆಯಂತೆ ಅಂ ದವಾದ, ಗುಹೆಗಳನ್ನೂ ನೋಡುತ್ತ ಬಂದರು ವೈಡೂಲ್ಯದಂತೆ ಸ್ವಚ್ಛ ವಾದ ತಾವರೆಯೆಲೆಗಳಿಂದಲೂ, ಸ್ವಲ್ಪವಾಗಿ ಅರಳಿದ ಕಮಲಗಳಿಂದಲೂ ಶೋಭಿತಗಳಾಗಿ, ನೀರಿನಿಂದ ತುಂಬಿದ ಕೆರೆಗಳು ದಾರಿಯುದ್ದಕ್ಕೂ ಅಲ್ಲಲ್ಲಿ ಕಾಣಿಸುತ್ತಿದ್ದುವು ಅಲ್ಲಿ ಕಾರಂಡವಗಳು, ಸಾರಸಪಕ್ಷಿಗಳು,ಹಂಸಗಳು, ವಂ ಜುಲಕಗಳು,ನೀರುಕೋಳಿಗಳು, ಚಕ್ರವಾಕಗಳು, ಮೊದಲಾದ ಬೇರೆಬೇರೆ