ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೩.] ಕಿಂಧಾಕಾಂಡವು ೧೪೧೧ ಜಲಪಕ್ಷಿಗಳೆಲ್ಲವೂ ಕಿವಿಗಿಂಪಾಗಿ ಕೂಗುತ್ತಿದ್ದುವು ಅಲ್ಲಲ್ಲಿರುವ ಹುಲ್ಲಿನ ಮೈ, ದಾನಗಳಲ್ಲಿ ಮೃದುವಾದ ಎಳಗರಿಕೆಯನ್ನು ಮೇಯುತ್ತ, ನಿರ್ಭಯವಾಗಿ ಸು ತಲೂ ಸಂಚರಿಸುತ್ತಿರುವ ಕಾಡುಜಿಂಕೆಗಳನ್ನು ಕಂಡರು ಮತ್ತು ಆ ಕೆರೆ ಯ ಸುತ್ತಿನಲ್ಲಿ ಅಂದವಾದ ಬಿಳೀದಂತಗಳಿಂದ ಶೋಭಿತಗಳಾಗಿ, ಭಯಂಕರ ಸ್ವರೂಪವುಳ್ಳವುಗಳಾಗಿ, ಮದದಿಂದ ಕೊಬ್ಬಿ, ಮೈನವೆಯನ್ನಾರಿಸುವುದ ಕ್ಯಾಗಿ ಕೆರೆಯ ಕಟ್ಟುಗಳನ್ನು ಕೊಂಬುಗಳಿಂದ ತಿವಿಯುತ್ತ, ನಡೆವೆಟ್ಟುಗ ಳಂತೆಯೂಮೇಫುಗಳಂತೆಯೂ ಒಂಟಿಯಾಗಿ ಸುತ್ತುತ್ತಿರುವ ಕಾಡಾನೆಗಳ ನ್ನು ಕಂಡರು ಮತ್ತು ಅವರೆಲ್ಲರೂ ಕಾಡಿನಲ್ಲಿರುವ ಇನ್ನೂ ಬೇರೆಬೇರ ಮೈ ಗಜಾತಿಗಳನ್ನೂ ,ಆಕಾಶದಲ್ಲಿ ಸಂಚರಿಸತಕ್ಕ ಪಕ್ಷಿಜಾತಿಗಳನ್ನೂ ನೋಡುತ್ತ, ಸುಗ್ರೀವನ ವಶವರ್ತಿಗಳಾಗಿ ಬೇಗಬೇಗನೆ ಮುಂದೆ ಸಾಗಿ ಬರುತಿದ್ದರು ಹೀ ಗೆ ವೇಗದಿಂದ ಎಲ್ಲರೂ ಬರುತ್ತಿರುವಾಗ, ಮುಂದೆ ಅನೇಕ ವೃಕ್ಷಸಮೂಹ ನಿಂದ ತುಂಬಿದ ಒಂದು ವನವನ್ನು ನೋಡಿ,ರಾಮನು ಸುಗ್ರೀವನನ್ನು ಕುರಿತು (ಎಲೈ ಮಿತ್ರನೆ' ಇದೊ' ಆಕಾಶದಲ್ಲಿರುವ ಮೇಘದಂತೆ ಕಪ್ಪಾದ ವೃಕ ಸಮೂಹವು ಕಾಣುತ್ತಿರುವುದು ಮೇಫುಗಳು ಗುಂಪುಕಟ್ಟಿದಂತೆ ಇದು ಅತಿ ವಿಸ್ತಾರವಾಗಿಯೂ ಬೆಳೆದಿರುವುದು ಸುತ್ತಲೂ ಬಾಳೆಯಗಿಡಗಳಿಂದ ಪರಿ ವೃತವಾಗಿರುವುದು ಈ ಸ್ಥಳವಾವುದೆಂಬುದನ್ನು ತಿಳಿಯಬೇಕೆಂದು ನನಗೆ ಬಹಳ ಕುತೂಹಲವುಂಟಾಗಿರುವುದು ನೀನು ಇಬರ ವಿವರವನ್ನು ತಿಳಿಸಿ ನ « ಕುತೂಹಲವನ್ನು ನೀಗಿಸುವೆಯಾ?” ಎಂದನು ಆಗ ಸುಗ್ರೀವನು ದಾರಿ ನಡೆಯುತ್ತಿರುವಾಗಲೇ ರಾಮನಿಗೆ ಆ ವನದ ವೃತ್ತಾಂತವನ್ನು ಹೇಳತೊಡ ಗಿ (ರಾಮಾ' ಇದೊಂದು ಋಷ್ಯಾಶ್ರಮವು ಇದು ಅತಿವಿಶಾಲವಾಗಿ ಯೂ, ತಂಪಾಗಿಯೂ ಇರುವುದರಿಂದ ಎಷ್ಟು ಶ್ರಮವನ್ನಾದರೂ ಕ್ಷಣಮಾ ತ್ರದಲ್ಲಿ ನೀಗಿಸುವುದು ಅಂದವಾದ ಉದ್ಯಾನವನಗಳಿಂದಲೂ, ರುಚಿರುಚಿ ಯಾದ ಕಂದಮೂಲಫಲಗಳಿಂದಲೂ, ತಿಳಿನೀರಿನಿಂದಲೂ ಶೋಭಿಸುವ ಈ ಆಶ್ರಮದಲ್ಲಿ ಮೊದಲು ಸಪ್ತಜನರೆಂಬ ಏಳುಮಂದಿಋಷಿಗಳು ವಾಸಮಾ ಡುತಿದ್ದರು, ಅವರೆಲ್ಲರೂ ತೀಕ್ಷ್ಮವಾದ ವ್ರತವನ್ನು ಹಿಡಿದು, ತಲೆಕೆಳಗಾಗಿ ನೀರಿನಲ್ಲಿ ಮುಳುಗಿ ತಪಸ್ಸನ್ನು ಮಾಡುತಿದ್ದರು, ಅವರು ಈ ವನದಲ್ಲಿ ಏಳುರಾ