ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧೨ ಶ್ರೀಮದ್ರಾಮಾಯಣವು [ಸರ್ಗ ೧೩ ತ್ರಿಗಳಿಗೊಂದಾವರ್ತಿ ವಾಯುಭಕ್ಷಕರಾಗಿ ಏಳುನೂರುವರುಷಗಳವರೆಗೆ ತಪಸ್ಸನ್ನು ಮಾಡಿ, ಕೊನೆಗೆ ಸಶರೀರಸ್ವರ್ಗವನ್ನು ಹೊಂದಿದರು ಇಂತಹ ಮಹಾಮಹಿಮೆಯುಳ್ಳ ಆ ಋಷಿಗಳ ಪುಣ್ಯಾಶ್ರಮಕ್ಕೆ ಸುತ್ತಲೂ ಈ ವ್ಯಕ ಗಳೇ ಪ್ರಾಕಾರವಾಗಿ,ಇಂದ್ರನೊಡಗೂಡಿದ ದೇವಾಸುರರು ಬಂದರೂ ಪ್ರ. ವೇತಿಸಲಸಾಧ್ಯವಾಗಿರುವುದು ಮನುಷ್ಯರಾರೂ ಈ ಆಶ್ರಮವನ್ನು ಪ್ರ ವೇಶಿಸುವುದಿಲ್ಲ ಪಕ್ಷಗಳಾಗಲಿ, ಕಾಡಿನಲ್ಲಿರುವ ಇತರಜಂತುಗಳಾಗಲಿ ಈ ಆಶ್ರ ಮಕ್ಕೆ ಎಷ್ಟು ಮಾತ್ರವೂ ಕಾಲಿಡಲಾರವು ಅಥವಾ ತಿಳಿಯದೆ ಯಾವಪ್ಪಾ ಟೆಯಾದರೂ ಈ ಆಶ್ರಮದೊಳಗೆ ಕಾಲಿಟ್ಟರೆ,ಅಲ್ಲಿಯೇ ನಾಶಹೊಂದುವು ವೇಹೊರತು ಹಿಂತಿರುಗಿ ಬರುವುದಿಲ್ಲ ರಾಮಾ' ಈ ಆಶ್ರಮದಲ್ಲಿ ಯಾವಾಗ | ಲೂ ನೃತ್ಯವನ್ನು ಮಾಡುವ *ಅಪ್ಪರಸ್ತಿಯರುಗಳ ಆಭರಣಧ್ವನಿಗಳೂ, ಅ ವ್ಯಕ್ತಮಧುರವಾದ ಅಕ್ಷರಗಳಿಂದ ಕೂಡಿದ ಅವರ ಗಾನಧ್ವನಿಗಳೂ,ವಾದ್ಯ ಧ್ವನಿಗಳೂ, ಕಿವಿಗೆ ಬೀಳುತ್ತಲೇ ಇರುವುವು ಇಲ್ಲಿಂದ ಅನವರತವೂ ದಿವ್ಯಗಂ ಧವು ಹೊರಡುತ್ತಿರುವುದು ಯಾವಾಗಲೂ ಇಲ್ಲಿ ತೇತಾಗ್ನಿಗಳು ಜ್ವಲಿಸು ತಿರುವುವು ಈಗಲೂ ಇದಕ್ಕೆ ನಿದರ್ಶನವಾಗಿ ಈ ಧೂಮಪರಂಪರೆಯು ವೃಕ್ಷಾಗ್ರಗಳನ್ನು ದಟ್ಟವಾಗಿ ಸುತ್ತಿ, ಮೇಫುರಿಂದ ಮುಚ್ಚಲ್ಪಟ್ಟ ವೈಡೂ ಲ್ಯದ ಬೆಟ್ಟಗಳಂತೆ ಕಾಣುವುವು ನೋಡು'ಎಲೈ ಧರಾತ್ಮನೆ' ನೀನುಲಕ್ಷಣ ನೊಡನೆ ಆ ಮಹಾತ್ಮರಾದ ಋಷಿಗಳನ್ನು ದೈತಿಸಿಕೊಂಡು, ಭಕ್ತಿಯಿಂದ ಕೈಮುಗಿದು ಇಲ್ಲಿಗೆ ನಮಸ್ಕರಿಸು' ಆತ್ಮಜ್ಞಾನವುಳ್ಳ ಆ ಮುನಿಗಳಿಗೆ ಯಾ ರು ನಮಸ್ಕರಿಸುವರೋ, ಅವರಿಗೆ ದೇಹದಲ್ಲಿ ಎಂದಿಗೂ ಯಾವ ಅಶುಭವೂ ಉಂಟಾಗಲಾರದು”ಎಂದನು ಆಗ ರಾಮನು ಲಕ್ಷಣನೊಡಗೂಡಿ ಆ ಋ ಷಿಗಳನ್ನು ಧ್ಯಾನಿಸುತ್ತ, ಆ ಆಶ್ರಮಕ್ಕೆ ಕೈಮುಗಿದು ನಮಸ್ಕರಿಸಿದನು ಹೀ ಗೆ ಮಹಾತ್ಮನಾದ ರಾಮನೂ ಲಕ್ಷ್ಮಣನೂ ನಮಸ್ಕರಿಸಿದಮೇಲೆ, ಅವರೊ ಡನೆ ಸುಗ್ರೀವನೂ, ಇತರವಾನರರೂ ಸಂತುಷ್ಟಚಿತ್ತಗಾಗಿ ಮುಂದಕ್ಕೆ ಪ್ರಯಾಣಮಾಡಿದರು. ಆ ಸಪ್ತಜನಾಶ್ರಮದಿಂದ ಬಹುದೂರದವರೆಗೆ ನ

  • ಇದರಿಂದ ಆ ಸಪ್ತಜನಮಹರ್ಷಿಗಳು ದೇವಲೋಕದಿಂದ ಈ ವನಕ್ಕೆ ಆ ಗಾಗ ಬಂದು ಅಪ್ಪ ರಸ್ಸುಗಳೊಡನೆ ಕ್ರೀಡಿಸುತ್ತಿದ್ದರೆಂದು ಗ್ರಾಹ್ಯಶ.