ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧೪ ಶ್ರೀಮದ್ರಾಮಾಯಣವು (ಸರ್ಗ, ೧೪. ಬಿರುವರು ಇದರ ಪರದ್ಘಾರಗಳೆಲ್ಲವೂ ಸುವರ್ಣಮಯವಾಗಿರುವುವು ಮ ತ್ತು ಇಲ್ಲಿ ಧ್ವಜಗಳೂ ಅನೇಕಯಂತ್ರಗಳೂ ಹೇರಳವಾಗಿರುವುವು ರಾಮಾ' ನೀನು ಮೊದಲಿಂದಲೂ ನನಗೆ ವಾಣಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆಯ ನ್ನು ಮಾಡಿಕೊಟ್ಟಿರುವೆ' ಈಗ ಅದಕ್ಕೆ ಫಲಕಾಲವು ಬಂದಿರುವುದು ಫಲ ಕಾಲದಲ್ಲಿ ಲತೆಗಳು ತಪ್ಪದೆ ಫಲಿಸುವಂತೆ, ಈಗ ನೀನು ನಿನ್ನ ಪ್ರತಿಜ್ಞೆಯನ್ನು ತಪ್ಪದೆ ಸಫಲಗೊಳಿಸಬೇಕು ” ಎಂದನು ಇದನ್ನು ಕೇಳಿ ಧರಾತ್ಮನಾಗಿ ಯೂ ಶತ್ರನಿಗ್ರಾಹಕನಾಗಿಯೂ ಇರುವ ರಾಮನು, ಸುಗ್ರೀವನನ್ನು ಕುರಿ ತು, ('ಎಲೈ ಮಿತ್ರನೆ' ಆಗ ನಾನು ವಾಲಿಯನ್ನು ಕೊಲ್ಲದಿದ್ದುದಕ್ಕೆ ಯಥಾ ರವಾದ ಕಾರಣವನ್ನು ಹೇಳಿರುವೆನಲ್ಲವೆ ! ಈಗ ಲಕ್ಷಣನು ನಿನ್ನ ಕಂಗದಲ್ಲಿ ಈ ನಾಗಪಷ್ಟಿಲತೆಯನ್ನು ಹಾಕಿರುವುದರಿಂದ, ನಾನು ಸುಲಭ ವಾಗಿ ನಿನ್ನ ಗುರುತನ್ನು ಕಂಡುಕೊಳ್ಳಬಹುದು ಸುಗ್ರೀವಾ' ಈಗ ವಾಲಿಯು ನನ್ನ ಬಾಣದಿಂದ ಸಾಯುವುದು ಹಾಗಿರಲಿ! * ನಕ್ಷತ್ರಮಾಲೆಯಿಂದ ಪರಿವೃ - - -------- - - - - - - - - - - -- -

  • ಇಲ್ಲಿ 'ಶೋಭಸೇ ಹ್ಯಧಿಕಂ ವೀರ ಲತಯಾ ಕಂಠಸಕ್ಕಯಾ 'ವಿಪರೀತ ಇವಾ ಕಾಶೇ ಕೂರೋ ನಕ್ಷತ್ರಮಾಲಯಾ' ಎಂದು ಮೂಲವು ಇಲ್ಲಿ ಸೂರನು ನಕ್ಷತ್ರಮಾ ಲೆಯಿಂದ ಪರಿವೃತನಾಗುವುದು ಅಸಂಭವದಾದುದರಿಂದ, ಇದನ್ನು ಅಭೂತೋಪಮೆ

ಯೆಂದು ಗ್ರಹಿಸಬೇಕು ಈ ಹೋಲಿಕೆಯೇವಾಲಿವಿನಾಶಕ್ಕೆಸೂಚಕವೆಂದೂಗಾಹ್ಯವ. 'ರಾತಾವಿಂದ್ರಧನುರ್ದಶಿ್ರ ದಿವಾನಕ್ಷತ್ರದರ್ಶನೇ ತದ್ರಾಹ್ಮನಾಥನಾಶಸ್ಸಾದಿ ಗರ್ಗಸ್ಯಭಾಷಿತಮ್” ಎಂಬುದಾಗಿ, ರಾತ್ರಿಯಲ್ಲಿ ಇಂದ್ರಧನುಸ್ಸನ್ನೂ ,ಹಗಲಲ್ಲಿ ನಕ್ಷ ತ್ರವನ್ನೂ ನೋಡಿದರೆ, ಆಯಾರಾಷ್ಟ್ರದ ರಾಜರಿಗೆ ಹಾನಿಯೆಂದು ಗರ್ಗವಚನವಿರು ವುದರಿಂದ, ನಕ್ಷತ್ರ,ಪರಿವೃತನಾದ ಸೊಲ್ಯನನ್ನು ಹೋಲುತ್ತಿರುವ ಈ ಸುಗ್ರೀವನ ಸ್ವ ರೂಪವೇ, ಈಗ ವಾನರರಾಜನಾದ ವಾಲಿಯ ಮರಣಕ್ಕೆ ಸೂಚಕವೆಂದು ಭಾವವು ಅಥವಾ 'ಪರೀತಂತು ದಿವಾ ಪ್ರೋಕ್ತಂ ವಿಪರೀತಂತು ಶಶ್ವರೀ?” ಎಂದೂ, ರಾ ಕಾಮಧ್ಯಗತಶ್ಚಂದ್ರಸರ ಇತ್ಯಭಿಧೀಯತೇ ಎಂದೂ ಪ್ರಮಾಣಗಳಿರುವುದರಿಂದ, ವಿಪರೀತವೆಂದರೆ ರಾತ್ರಿಯು, ಸಯ್ಯನೆಂದರೆ ರಾಕಾಚಂದ್ರನು ಇದರಿಂದ ರಾತ್ರಿಯಲ್ಲಿ ನಕ್ಷತ್ರಪರಿವೃತನಾದ ರಾಕಚಂದ್ರನಂತೆ ಸುಗ್ರೀವನು ಶೋಭಿಸುತ್ತಿದ್ದನೆಂದು ಸಾಮಾ ನ್ಯೂಪಮೆಯನ್ನೂ ಹೇಳಬಹುದು.