ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧೭ ಸರ್ಗ ೧೫ ] ಕಿಷಿಂಧಾಕಾಂಡವು ಮುಂದುತೋರದೆ, ದಿಕ್ಕುಗೆಟ್ಟು ಓಡಲಾರಂಭಿಸಿದುವು ಆಕಾಶದಲ್ಲಿ ನಕ್ಷ ತ್ರರೂಪದಿಂದ ಶೋಭಿಸುವ ಪುಣ್ಯಪುರುಷರು, ತಾವುಮಾಡಿದ ಪುಣ್ಯ ಫಲವೆಲ್ಲವೂ ಮುಗಿದಮೇಲೆ ಭೂಮಿಗೆ ಬೀಳುವಂತೆ, ಗಗನಚಾರಿಗಳಾದ ಪಕ್ಷಿಗಳೆಲ್ಲವೂ ಮೇಲಿಂದ ಉದಿರುತ್ತಿದ್ದುವು ಹೀಗೆ ಸೂರಾತ್ಮಜನಾದ ಆ ಸುಗ್ರೀವನು, ಮೇಫುಸಮೂಹಗಳು ಒಂದಾಗಿ ಸೇರಿ ಗರ್ಜಿಸುವಂತೆ ಭ ಯಂಕರವಾದ ಸಿಂಹನಾದವನ್ನು ಮಾಡಿ, ವಾಯುವೇಗದಿಂದ ಉಲ್ಲೋಲ ಕಲ್ಲೋಲವಾದ ಮಹಾಸಮುದ್ರದಂತೆ ಆರ್ಭಟಿಸುತ್ತ, ಪರಾಕ್ರಮದಿಂ ದಬ್ಬಿ ಬರುತಿದ್ದನು ಇಲ್ಲಿಗೆ ಹದಿನಾಲ್ಕನೆಯಸರ್ಗವು ( ಸುಗ್ರೀವನ ಸಿಂಹನಾದವನ್ನು ಕೇಳಿ ವಾಲಿಯು ವುನಃ) ಕೋಪಗೊಂಡು ಯುದ್ಧಕ್ಕೆ ಹೊರಟುದು, ತಾರೆ ( ಯು ಬೇಡವೆಂದು ವಾಲಿಯನ್ನು ತಡೆದುದು ಹೀಗೆ ಸುಗ್ರೀವನು ಹಿಂದೆ ಯಾವಾಗಲೂ ಇಲ್ಲದಥ್ರವನ್ನು ಹಿಡಿದು ಮಾಡಿದ ಸಿಂಹನಾದವು, ಅತ್ತಲಾಗಿ ವಾಲಿಯ ಕಿವಿಗೆ ಬಿದ್ದಿತು ಅಂತಃ ಪುರದಲ್ಲಿ ವಾಲಿಗೆ ಸಹಿಸಲಾರದ ಕೋಪವುಂಟಾಯಿತು ವಾಲಿಯು ಅಂತಃಪುರವಿಹಾರದಲ್ಲಿದ್ದರೂ, ಸಮಸ್ತಭೂತಗಳನ್ನೂ ನಡುಗಿಸುವಂ ತಿರುವ ಆ ಗರ್ಜನಧ್ವನಿಯನ್ನು ಕೇಳಿದೊಡನೆ, ಅವನಿಗಿದ್ದ ಕಾಮ ಮದವೆಲ್ಲವೂ ಅಡಗಿಹೋಯಿತು ವಾಲಿಯು ಸಹಜವಾಗಿ ಸಂಜೆಗೆಂಪಿ ನಂತೆ ಮೈಬಣ್ಣವುಳ್ಳವನಾಗಿದ್ದರೂ, ಆಗ ಮಿತಿಮೀರಿದ ಕೋಷ ದಿಂದ ಕಪ್ಪುಹಿಡಿದ ದೇಹವುಳ್ಳವನಾಗಿ * ಗ್ರಹಣಹಿಡಿದ ಸೂರನಂ ತೆ ಕಾಂತಿಹೀನನಾಗಿಬಿಟ್ಟನು ಭಯಂಕರವಾದ ಕೋರೆದಾಡೆಗಳಿಂದಕೂ

  • ಇಲ್ಲಿ ಉಪರಕ್ಕೆ ಇವಾದಿತ್ಯಃ”ಎಂದುಮಲವು ಉಪರಕ್ಕನೆಂದರೆ ಸಮೀ ಪದಲ್ಲಿ ರಕ್ತವರ್ಣವುಳ್ಳವನು,ಪರಿವೇಷವನ್ನು ಹೊಂದಿರುವವನೆಂದರವು ಪರಿವೇಷದಿಂದ ಕೂಡಿದ ಸೂರನು ಹೇಗೆ ಕಾಂತಿಹೀನನಾಗುವನೋ, ಹಾಗೆ ವಾಲಿಯ ಕಾಂತಿಹೀನ ನಾಗಿದ್ದನೆಂದೂ ಅರ್ಥಾಂತರವು ಮೇಲೆ ಹೇಳಿದಂತೆ ರಾಹುಗ್ರಸ್ತನಾದ ಸೂರನೆಡ ನೆ ಹೋಲಿಸುವುದರಿಂದ ವಾಲಿಗೆ ಮುಂದೆ ಬರುವ ವಿನಾಶವು ಸೂಚಿತವಾಗುವುದು,