ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ • ೧೫ ) ಕಿಷಿಂಧಾಕಾಂಡವು ೧೪೧೯ ಒಂದು ದೊಡ್ಡ ಕಾರಣವಿರಬೇಕು ಈಗ ಸುಗ್ರೀವನು ಮೊದಲಿನಂತೆ ಯೇ ಅಸಹಾಯನಾಗಿ ಬಂದಿರುವನೆಂದು ನನಗೆ ತೋರಲಿಲ್ಲ ಸಂ ಪೂರ್ಣವಾದ ಯಾವುದೋ ಸಹಾಯದ ಬಲದಿಂದಲೇ ಅವನು ಹೀಗೆ ಉತ್ಸಾಹದಿಂದ ಗರ್ಜಿಸುತ್ತಿರುವನು ಆದರೆ ಯಾವನ ಸಹಾಯವಿದ್ದರೂ ಭಯವಿಲ್ಲ”ವೆಂದು ನೀನು ಹೇಳಬಹುದು ಹಾಗೆಣಿಸಬಾರದು ಆ ಸುಗ್ರಿ ವನು ಸಹಜವಾಗಿಯೇ ಬಹಳಚಾತುರವುಳ್ಳವನು ಬಹಳ ಬುದ್ದಿವಂತನು ಯುಕ್ತಾಯುಕ್ತ ವಿವೇಚನೆಯನ್ನು ಚೆನ್ನಾಗಿ ಬಲ್ಲವನು ಅವರವರ ವೀರವನ್ನು ಚೆನ್ನಾಗಿ ಪರೀಕ್ಷಿಸಿ ನೋಡಿದಹೊರತು, ಸ್ನೇಹವನ್ನು ಬಳೆಸುವವನಲ್ಲ ತನಗೆ ನಂಬಿಕೆಯು ಹುಟ್ಟಿದಹೊರತು ಇತರರನ್ನು ಸಹಾಯಕ್ಕೆ ಕರೆಯುವವನಲ್ಲ ಇದಲ್ಲದೆ ಹಿಂದೊಮ್ಮ ನಿನ್ನ ಕುಮಾರನಾದ ಅಂಗದನು, ನನಗೆ ಒಂದು ವಿ ಷಯವನ್ನು ಹೇಳಿರುವನು ನಿನಗೆ ಹಿತಕರವಾದ ಆ ಸಂಗತಿಯನ್ನೂ ತಿಳಿಸು ವೆನು ಕೇಳು ಅಂಗದನು ಒಮ್ಮೆ ಕಾಡಿನಲ್ಲಿ ಸುತ್ತಿ ಬರುವುದಕ್ಕಾಗಿ ಹೋಗಿದ್ದಾಗ, ಅಲ್ಲಿ ಆಪ್ತರಾದ ಕೆಲವು ಚಾರರಿಂದ ತಾನು ತಿಳಿದ ಕೆಲವು ಸಂಗತಿಗಳನ್ನು ನನ್ನೊಡನೆ ಹೇಳಿರುವನು ಇಕಾಕುವಂಶದಲ್ಲಿ ಆಯೋ ಧ್ಯಾಧಿಪತಿಯಾದ ದಶರಥನ ಮಕ್ಕಳಾದ ರಾಮಲಕ್ಷ್ಮಣರೆಂಬ ಮಹಾಶೂ ರರಿಬ್ಬರು ಸುಗ್ರೀವನ ಸಹಾಯಕ್ಕಾಗಿ ಇಲ್ಲಿಗೆ ಬಂದಿರುವರೆಂದೂ, ಯುದ್ಧ ದಲ್ಲಿ ಅವರನ್ನು ಜಯಿಸುವುದು ಯಾರಿಗೂ ಸಾಧ್ಯವಲ್ಲವೆಂದೂ ಕೇಳಿದನು ಎಲೈ ಪ್ರಿಯನೆ ! ಆ ಇಬ್ಬರಲ್ಲಿ ರಾಮನೆಂಬವನೊಬ್ಬನ ಗುಣವನ್ನು ಮಾತ್ರ ಹೇಳುವೆನು ಕೇಳು'ಅವನುಯುದ್ಧಕಾರದಲ್ಲಿ ಅತಿಕ್ರನು ಎಷ್ಟೆಶತ್ರುಸೈ ನ್ಯವನ್ನಾದರೂ ಪ್ರಳಯಕಾಲದ ಬೆಂಕಿಯಂತೆ ತನ್ನ ಬಾಣದಿಂದ ದಹಿಸಿಬಿ ಡುವನು' ಸಾ ಧ.ಗಳಿಗೆ ಆಶ್ರಯವೃಕ್ಷದಂತಿರುವನು ಎಷ್ಟೇಕಷ್ಟದಲ್ಲಿ ಸಿಕ್ಕಿ

  • ಇಲ್ಲಿ 'ನಿವಾಸವೃಕ್ಷಸ್ಕಾಧನಾಮಾಪನ್ನಾನಾಂ ಪರಾ ಗತಿಃ | ಆಗ್ತಾನಾಂ ಸಂಶ್ರಯಶೈವ ಯಶಸಶೈಕಭಾಜನಂ||ಜ್ಞಾನವಿಜ್ಞಾನಸಂಪನ್ನೋ ನಿದೇಶೀ ನಿರತ : ಪಿತುಃ ಧಾತನಾಮಿವ ಶೈಲೇನ್ನೊ ಗುಣಾನಾಮಾಕರೆ ಮರ್ಹಾ "ಎಂದು ಲವು ತಾರೆಯು ರಾಮಲಕ್ಷ್ಮಣರೆಂತವರೆಂಬುದನ್ನು ನಾಲಿಗೆ ತಿಳಿಸಲಾರಂಭಿಸಿ, ಅವರಲ್ಲಿ ಪ್ರಧಾ ನಭೂತನಾದ ರಾಮನ ಸ್ವರೂಪವನ್ನು ತಿಳಿಸುವುದರಿಂದಲೇ, ಇಬ್ಬರ ಸ್ವರೂಪ