ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨೨ ಶ್ರೀಮದ್ರಾಮಾಯಣವು (ಸರ್ಗ ೧೫ ಸ್ಥಾನವೆಂದು ಹೇಳಬಹುದು ಪಾರಲೌಕಿಕವಾದ ಮೋಕ್ಷವಿಚಾರವನ್ನೂ, ಐಹಲ್ಕಿಕಗಳಾದ ವ್ಯಾವಹಾರಿಕ ವಿಷಯಗಳನ್ನೂ ಆತನು ಸಂಪೂರ್ಣವಾ ಗಿ ಬಲ್ಲನು ತಂದೆಯಾಜ್ಞೆಯನ್ನು ಮೀರಿದವನಲ್ಲ ಗೈರಿಕಾದಿಧಾತುಗಳಿಗೆ ಪಕ್ವತವು ಹೇಗೋ ಹಾಗೆ, ಸಮಸ್ತಗುಣಗಳಿಗೂ ಅವನು ಗನಿಯಂತಿರುವ ನು ಇಂತಹ ರಾಮನೇ ಈಗ ನಿನ್ನ ತಮ್ಮನಾದ ಸುಗ್ರೀವನಿಗೆ ಸಹಾಯಕ ನಾಗಿ ಬಂದಿರುವನಲ್ಲವೆ? ಆ ಮಹಾತ್ಮನೊಡನೆ ನಿನಗೆ ವಿರೋಧವು ಎಂದಿಗೂ ತಕ್ಕುದಲ್ಲ ಯುದ್ಧಗಳಲ್ಲಿ ಆತನನ್ನು ಜಯಿಸುವುದು ಯಾರಿಗೂ ಸಾಧ್ಯವಲ್ಲ ಮುಖ್ಯವಾಗಿ ಆತನ ಮಹಿಮೆಯನ್ನು ಇಷ್ಟೆಂದು ಹೇಳಿ ತೀರದು' ಎಲೈ ಶೂರನೆ' ಸಿನಗೆ ಮತ್ತೂಂದು ಮುಖ್ಯವಿಷಯವನ್ನು ಹೇಳುವೆನು ನೀನು ಕೋಪಿಸಬಾರದು ನಾನು ಅದಕ್ಕಾಗಿ ಹೇಳುವ ಹಿತವಾಕ್ಯವನ್ನು ಚೆನ್ನಾ ಗಿ ಲಾಲಿಸಿಕೇಳು' ಅದರಂತೆಯೇ ನಡೆಸು' ಈಗಲೇ 'ಆ ಸುಗ್ರೀವನನ್ನು ಕರೆ ತರಿಸಿ, ಅವನಿಗೆ ಯೌವರಾಜ್ಯದಲ್ಲಿ ಅಭಿಷೇಕವನ್ನು ಮಾಡಿಬಿಡು' ಈಗೀಗ ಆ ವನು ನಿನಗಿಂತಲೂ ಬಲದಲ್ಲಿ ಮೇಲಾಗಿಯೇ ಇರುವನು ಹೀಗೆ ಬಲಾಡ್ಯ ನಾದ ನಿನ್ನ ಒಡಹುಟ್ಟಿದವನೊಡನೆ ವೈರವನ್ನು ಬೆಳೆಸಬೇಡ ' ಎಲೈ ವೀರನೆ' ರಾಮನೊಡನೆ ನೀನು ವೈರವನ್ನು ಮಾಡಬಾರದೆಂಬುದುಮಾತ್ರವೇ ಅಲ್ಲ ನೀನಾಗಿ ಅವನನ್ನು ಕರೆತಂದು ಅವನೊಡನೆ ಸ್ನೇಹವನ್ನು ಮಾಡಿಕೊಂಡ ರೂ ಮೇಲು'ಸುಗ್ರೀವನೊಡನೆಯೂ ಈಗಿನ ವೈರವನ್ನು ಬಿಟ್ಟು ಪ್ರೀತಿಯ ನ್ನು ಬೆಳೆಸು'ನಿನ್ನ ತಮ್ಮನಾದ ಆತನನ್ನು ನೀನಾಗಿ ಕರೆತಂದು ಲಾಲಿಸಿಪೋ ಷಿಸಬೇಕಲ್ಲವೆ? ಅವನು ಅಲ್ಲಿದ್ದರೇನು? ಇಲ್ಲಿದ್ದರೇನು ? ಎಲ್ಲಿದ್ದರೂ ನಿನಗೆ ಬಂಧುವೆನಿಸಿದನು ಲೋಕದಲ್ಲಿ ಒಡಹುಟ್ಟಿದವನಿಗಿಂತಲೂ ಬೇರೆ ಬಂಧುವುಂ

  • *

--- - - - (ಗುಣಾನಾಮಾಕರಃ) 'ಸಮಸ್ತ ಕಲ್ಯಾಣಗುಣಗಳಿಗೂ ಗನಿಯಂತಿರುವನು 'ಧಾತೂ ನಾಮಿವ ಶೈಲೇಂದ್ರ” ಎಂಬ ಹೋಲಿಕೆಯಿಂದ ಪರತಗಳಲ್ಲಿ ಬಗೆಬಗೆಯಾದ ಧಾತು ಗಳಿರುವಂತೆ ರಾಮನಲ್ಲಿ ಜ್ಞಾನಶಕ್ತಿ ಬಲೈಶ್ಚರಾದಿಬಹುಭೇದಗಳುಳ್ಳ ಕಲ್ಯಾಣಗುಣ ಗಳೆಲ್ಲವೂ ತುಂಬಿರುವುವೆಂದು ಭಾವವು, ಮತ್ತು ಇಲ್ಲಿ ಪರೈತಸಾದೃಶ್ಯದಿಂದ (ಆ ರಾ ಮನಗುಣಗಳಿಗೂ, ಧೈಯ್ಯಕ್ಕೂ ಚಲನವೇ ಇಲ್ಲವೆಂದೂ ಸೂಚಿತವು.