ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬. | ಕಿಂಧಾಕಾಂದವು ೧೪೨೩ ಟಿ? ಪ್ರಿಯನೆ' ನೀನಾಗಿ ಅವನನ್ನು ಕರೆಯಿಸಿ, ದಾನಮಾನಾದಿ ಸತ್ಕಾರಗ ಳಿಂದ ಅವನನ್ನು ಸಂತೋಷಪಡಿಸಿ, ಸಮೀಪದಲ್ಲಿಯೇ ಇರಿಸಿಕೊಳ್ಳುವನಾ ಗು'ವೈರವನ್ನು ಬಿಟ್ಟುಬಿಡು' ಅವನು ನಿನಗೆ ಸಹಾಯಕನಾಗಿ ನಿನ್ನ ಬಳಿಯಲ್ಲಿ ರಲಿ'ಹೇಗಿದ್ದರೂ ಆ ಸುಗ್ರೀವನು ನಿನಗೆ ಬಂಧುವೆನಿಸಿರುವನು ಆತನಲ್ಲಿ ಮೊದಲಿನಂತೆಯೇ ಒಡಹುಟ್ಟಿದ ಪ್ರೇಮವನ್ನು ತೋರಿಸು ಈಗ ನಿನಗೆ ಈ ಉಪಾಯವನ್ನು ಬಿಟ್ಟರೆ ಬೇರೆ ದಾರಿಯಿಲ್ಲ! ನೀನು ನನಗೆ ಪ್ರಿಯವನ್ನು ಕೋ ರುವವನಾಗಿದ್ದರ,ನಾನೂ ನಿನಗೆ ನಿಜವಾದ ಹಿತೈಷಿಣಿಯೆಂದು ನೀನು ನಂ ಬುವುದಾದರೆ, ಇದೊ ಕೈಮುಗಿದು ಯಾಚಿಸುವೆನು ನನ್ನ ಮಾತನ್ನು ನಡೆ ಸಿಕೊಡು'ಎಲೈ ಪ್ರಿಯನೆ' ಈ ಕೋಪವನ್ನು ಬಿಟ್ಟು ನನ್ನಲ್ಲಿ ಪ್ರಸನ್ನ ನಾಗು! ಪಧ್ಯವಾದ ನನ್ನ ಮಾತನ್ನು ಕೇಳು' ಕೂಪವನ್ನೇ ಅನುಸರಿಸಬೇಡ' ಇಂ ದ್ರನಿಗೆಣೆಯಾದ ದಿವ್ಯತೇಜಸ್ಸುಳ್ಳ ಆ ಕೋಸಲರಾಜಪುತ್ರನೊಡನೆ ಯುದ್ಧ ಕೈ ನಿಲ್ಲುವುದು ಎಂದಿಗೂ ನಿನಗೆ ತಕ್ಕುದಲ್ಲ” ಎಂದಳು ಹೀಗೆ ತಾರೆಯು ವಾಲಿಯನ್ನು ಕುರಿತು, ಅನೇಕವಿಧದಲ್ಲಿ ಹಿತವಾಗಿಯೂ ಪಥ್ಯವಾಗಿಯೂ ಇರುವ ಬುದ್ದಿವಾದಗಳನ್ನು ಹೇಳಿದರೂ, ಮೃತ್ಯುವಶನಾಗಿ ವಿನಾಶಕಾಲ ದಲ್ಲಿದ್ದ ಆಕೆಯ ಮಾತೊಂದೂ ಆವಾಲಿಗೆ ಕಿವಿಗೇರಲಿಲ್ಲ ಇಲ್ಲಿಗೆ ಹದಿನೈದನೆಯಸರ್ಗವು ( ವಾಲಿಯು ತಾರೆಯನ್ನು ಹೆದರಿಸಿ ಕಳುಹಿಸಿ, ತಾನು) ೨ ಯುದ್ಧಕ್ಕೆ ಹೊರಟುದು ವಾಲಿಸುಗ್ರೀವರ ಯುದ್ಧ | 1 ವು ಕೊನೆಗೆ 'ವಾಲಿಯಬಲವು ಹೆಚ್ಚಿದುದನ್ನು ನೋಡಿ | ( ರಾಮನು ಅವನ ಎದೆಗೆ ಬಾಣವನ್ನು ಬಿಟ್ಟುದು ) ಹೀಗೆ ತನಗೆ ಹಿತವಾದವನ್ನು ಹೇಳುತಿದ್ದ ಚಂದ್ರಮುಖಿಯಾದ ಆ ತಾರೆಯನ್ನು ವಾಲಿಯು ಹೆದರಿಸಿ, ಅವಳನ್ನು ಕುರಿತು "ನನಗೆ ಒಡಹುಟ್ಟಿದ ವನಾಗಿ,ನನಗಿಂತಲೂ ಕಿರಿಯವನಾದ ಆ ಸುಗ್ರೀವನು,ಇಷ್ಟು ಹೆಮ್ಮೆಯಿಂದ ಗರ್ಜಿಸಿ ನನ್ನನ್ನು ಯುದ್ಧಕ್ಕೆ ಕರೆಯುತ್ತಿರುವಾಗ, ನಾನು ಸುಮ್ಮನಿರಬೇಕೆ? ಅದರಲ್ಲಿಯೂ ಅವನು ನನ್ನ ಮೇಲೆ ಪ್ರಬಲವಾದ ವೈರವನ್ನೂ ಬೆಳೆಸಿರುವನು