ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨೪ ಶ್ರೀಮದ್ರಾಮಾಯಣವು [ಸರ್ಗ, ೧೬ ನಾನು ಇವೆಲ್ಲವನ್ನೂ ಹೇಗೆ ಮನ್ನಿಸಿಬಿಡಲಿ'ಎಲೆ' ಭೀರು' ಇದುವರೆಗೆ ಯಾ ವ ಯುದ್ಧದಲ್ಲಿಯೂ ಹಿಂತಿರುಗದ, ಯಾರಿಂದಲೂ ಪರಾಜಿತರಾಗದ ಶೂ ರರಿಗೆ, ಇಂತಹ ತಿರಸ್ಕಾರಗಳನ್ನು ಕೇಳುವುದು ಮರಣಕ್ಕಿಂತಲೂ ಹೆಚ್ಚು ಸಂಕಟವನ್ನುಂಟುಮಾಡುವುದು ನನ್ನಿಂದ ಮೈಮುರಿಸಿಕೊಳ್ಳುವುದ ಕ್ಕಾಗಿಯೇ ಹೀಗೆ ನನ್ನನ್ನು ಯುದ್ಧಕ್ಕೆ ಕರೆಯುತ್ತಿರುವ ಆತನ ಈ ಕೂಬ್ಬ ನ್ಯೂ, ಅವನ ಈಗರ್ಜನವನ್ನೂ, ನಾನು ಎಂದಿಗೂ ಸಹಿಸಲಾರೆನು ರಾಮ ನಿಂದ ನನಗೆ ಅಪಾಯವುಂಟಾಗುವುದೆಂದು ನೀನು ಸ್ವಲ್ಪವೂ ಚಿಂತಿಸಬೇ ಕಾದುದಿಲ್ಲ ಅವನು ಧರಜ್ಞನೆಂದೂ, ಕೃತಜ್ಞನೆಂದೂ ನೀನೇ ಹೇಳಿದೆಯ ಲ್ಲವೆ?ಇಷ್ಟು ಗುಣಾಢನಾದವನು, ಅವನ ವಿಷಯದಲ್ಲಿ ನಿರಪರಾಧಿಯಾದ ನ ನ್ನನ್ನು ನಿಷ್ಕಾರಣವಾಗಿ ಕೊಲ್ಲುವಷ್ಟು ಪಾಪಕಾರವನ್ನು ಮಾಡುವನೆ ? ಎ ಲೆಪ್ರಿಯೆ' ಹೋಗು' ಈ ಸ್ತ್ರೀಯರೆಲ್ಲರನ್ನೂ ಹಿಂತಿರುಗಿಸಿಕೊಂಡು ನೀನೂ ಅಂತಃಪುರಕ್ಕೆ ನಡೆ? ಇದೇನು ? ನಾನು ಎಷ್ಟು ಹೇಳಿದರೂ ಕೇಳದೆ ಹಿಂಬಾಲಿಸಿ ಬರುತ್ತಿರುವೆ ? ಎಲೆ ತಾರೆ ' ನೀನು ಪತಿಯಾದ ನನ್ನಲ್ಲಿ ತೋ ರಿಸಬೇಕಾದಷ್ಟು ಪ್ರೀತಿಯನ್ನು ತೋರಿಸಿದುದಾಯಿತಲ್ಲವೆ ನಿನ್ನ ಭಕ್ತಿಯ ನ್ನೂ ತೋರಿಸಿದೆ? ಇನ್ನು ನೀನು ಹೋಗು ' ನಾನು ಸುಗ್ರೀವನೊಡ ನೆ ಯುದ್ಧಮಾಡಿಬರುವೆನು ನಿನ್ನ ಕಳವಳವನ್ನು ಬಿಡು ' ನಾನು ಅವನ ಕೋ ಬನ್ನು ಮಾತ್ರ ಮುರಿದುಬರುವೆನೇ ಹೊರತು ಆತನನ್ನು ಕೊಂದುಬಿಡುವುದಿ ಲ್ಲ ನಾನು ಯುದ್ಧದಲ್ಲಿ ನಿಂತಾಗಲೂ ನನ್ನ ಮನಸ್ಸನ್ನು ತಡೆದಿಡಬಲ್ಲೆನಾ ದುದರಿಂದ, ಕಾಲೋಚಿತವಾಗಿ ನಡೆಸಿಬರುವೆನು ಮರಗಳಿಂದಲೂಮುಷ್ಟಿ ಪ್ರಹಾರಗಳಿಂದಲೂ ಆತನನ್ನು ಹೊಡೆದು, ಮುಂದೆ ನಿಲ್ಲದಂತೆ ಓಡಿಸಿ ಬಿಡುವೆನು ಹೇಗಿದ್ದರೂ ಅವನು ನನ್ನ ಪೆಟ್ಟುಗಳಿಗೆ ಸಿಕ್ಕಿ ಬಹಳಹೊತ್ತಿನವ ರೆಗೆ ನಿಲ್ಲಲಾರನು ಎಲೆ ತಾರೆ' ನೀನು ದಾನಮಾನಾದಿಗಳಿಂದ ಅವನನ್ನು ಸ ತ್ಕರಿಸಿ ವಶದಲ್ಲಿರಿಸಿಕೊಳ್ಳಬೇಕೆಂದು ಹೇಳಿದೆಯಲ್ಲವೆ ? ದುರಾತ್ಮನಾದ ಆತ ನು ನನ್ನ ಮೇಲ್ಕೆಯನ್ನಾಗಲಿ, ದರ್ಪವನ್ನಾಗಲಿ, ಪ್ರಯತ್ನವನ್ನಾಗಲಿ ಸ್ವಲ್ಪವೂ ಸಹಿಸುವವನಲ್ಲ ನೀನಂತೂ ನಿನಗೆ ತಿಳಿದಮಟ್ಟಿಗೆ ನನಗೆ ಹಿತವಾದವನ್ನು ಹೇಳಿ, ನಿನ್ನ ಬುದ್ಧಿಯಿಂದ ವಿಶೇಷಸಹಾಯವನ್ನು ಮಾಡಿ