ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨೬ ಶ್ರೀಮದ್ರಾಮಾಯಣವು [ಸರ್ಗ, ೧೬ ಗಿಹಿರಾಗಿ ಬಂದನು ಸುಗ್ರೀವನು ಸ್ವಲ್ಪವೂ ಭಯವಿಲ್ಲದೆ ತನಗಿದಿರಾಗಿ ಮ ಹಾವೇಗದಿಂದ ಯುದ್ಧಕ್ಕೆ ಬರುವುದನ್ನು ನೋಡಿ,ವಾಲಿಯ ಕಣ್ಣುಗಳೆರಡೂ ಕೋಪದಿಂದ ಕೆಂಪಾದುವು ಆಗ ವಾಲಿಯು ಸುಗ್ರೀವನನ್ನು ಕುರಿತು (ಎ ಲೆ ಸುಗ್ರೀವಾ'ಇದೋ' ಈ ಮುಷ್ಟಿಯನ್ನು ನೋಡು ಕ್ರಮವಾಗಿ ಬೆರಳು ಗಳೆಲ್ಲವನ್ನೂ ಸೇರಿಸಿ ಹಿಡಿದ ಈಬಲವಾದ ಮುಷಿಯೊಂದೇ ನಿನ್ನ ಪ್ರಾಣಗ ಳನ್ನು ಸೆಳೆದುಬಿಡುವುದೆಂದು ತಿಳಿ” ಎಂದನು ಇದನ್ನು ಕೇಳಿ ಸುಗ್ರೀವನಿಗೂ ಕೋಪವುಂಟಾಯಿತು ಆಗ ಇವನೂ ಆವಾಲಿಯನ್ನು ಕುರಿತು ಇದೊ ! ಈ ನನ್ನ ಮುಷ್ಠಿಯ ಬಲವನ್ನು ನೀನು ನೋಡಲಿಲ್ಲವ? ಇದು ನಿನ್ನ ಹಣೆಗೆ ಸೋಕಿದೊಡನೆಯೋ ನಿನ್ನ ಪ್ರಾಣವನ್ನು ಹೀರಿಬಿಡುವುದೆಂದು ತಿಳಿ?”ಎಂದನು ಆವರೆ, ಹೀಗೆ ಪರಸ್ಪರವೀರವಾದವನ್ನು ಮಾಡುತ್ತಿರುವಷ್ಟರಲ್ಲಿಯೇ ವಾ ಲಿಯು ಮುಂದೆಬಂದು, ಆ ಸುಗ್ರೀವನನ್ನು ತನ್ನ ಮುಷ್ಟಿಯಿಂದಹೊಡೆದನು ಆಮುಷ್ಟಿಫುತದಿಂದ ಸುಗ್ರೀವನ ದೇಹವೆಲ್ಲವೂ ಜರ್ಝರಿತವಾಯಿತು ಅಂಗಾಂಗಳಲ್ಲಿಯೂ ರಕ್ತವು ಸೂರುವುದಕ್ಕರಂಭಿಸಿತು ಗಿರಿನದಿಗಳನ್ನು ಸುರಿಸುತ್ತಿರುವ ಬೆಟ್ಟದಂತೆ ಕಾಣುತ್ತಿದ್ದನು ಇಷ್ಟಾದರೂ ಎದೆಗುಂದದ ಸುಗ್ರೀವನು ವೇಗದಿಂದ ವಾಲಿಯ ದಿರಿಸಿ, ಸಮೀಪದಲ್ಲಿದ್ದ ಒಂದು ಸಾಲವೃಕ್ಷವನ್ನು ಕಿತ್ತು ತಂದು, ಇಂದ್ರನು ತನ್ನ ವಜ್ರಾಯುಧವನ್ನು ಪಠ್ಯ ತದಮೇಲೆ ಬಿಡುವಂತ ವಾಲಿಯಮೇಲೆ ಬೀಸಿದನು ಈ ಸಾಲವೃಕವು ಮ ಲೆ ಬಿದ್ದೊಡನೆ ವಾಲಿಯ ಅಂಗಾಂಗಳಲ್ಲವೂ ಸಡಿಲಿದುವು ಹೆಚ್ಚು ಭಾ ರವನ್ನು ಹೊರಿಸಿದ ಹಡಗು, ಸಮುದ್ರದಲ್ಲಿ ಮುಳುಗಿ ಹೋಗುವಹಾಗೆ, ವಾ ಲಿಯು ಆ ವೃಕ್ಷದಭಾರವನ್ನು ತಡೆಯಲಾರದೆ ಕುಗ್ಗಿ ದನು, ಹಾಗಿದ್ದರೂ ವಾಲಿಯು ಧೈರಗಿಡದೆಸಿಂತನು ಇಬ್ಬರೂ ಪರಸ್ಪರತಾಡನೆಗಳನ್ನು ಲಕ್ಷ ಮಾಡದೆ, ಭಯಂಕರಗಳಾದ ತಮ್ಮ ಬಲಪರಾಕ್ರಮಗಳ ಚಾತುರವನ್ನು ತೋರಿಸುತ್ತ, ಗರುಡನಂತೆ ಮಹಾವೇಗವುಳ್ಳವರಾಗಿ, ಭಯಂಕರಸ್ವರೂಪ ವಳ್ಳವರಾಗಿ, ಆಕಾಶದಲ್ಲಿ ಚಂದ್ರಸೂಲ್ಯರಿಬ್ಬರೂ ಹೋರಾಡುವಂತೆ ಮ ಹೋತ್ಸಾಹದಿಂದುಬ್ಬುತಿದ್ದರು ಎಂತಹ ಶತ್ರುಗಳನ್ನಾದರೂ ನಿಗ್ರಹಿಸ ಬಲ್ಲ ಆ ವೀರರಿಬ್ಬರೂ ಒಬ್ಬರನ್ನೊಬ್ಬರು ಕೆಡಹುವುದಕ್ಕಾಗಿ ಹೊಂಚು