ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9೨೮ ಶ್ರೀಮದ್ರಾಮಾಯಣವು (ಸರ್ಗ, ೧೬, ಆರು ಸಿಡಿಲಿನಂತೆ ಧ್ವನಿಮಾಡುತ್ತ, ಅಗ್ನಿ ಯಂತೆ ಬಾಜ್ವಲ್ಯಮಾನವಾಗಿ ಬಂ ದುವಾಲಿಯ ಎದೆಯಲ್ಲಿ ತಾಕಿತು ವಾಲಿಯು ವೀರದಿಂದ ಕೊಬ್ಬಿ ಮ ಹಾತೇಜಸ್ವಿಯೆನಿಸಿಕೊಂಡಿದ್ದರೂ, * ಆ ಒಂದುಬಾಣದ ವೇಗದಿಂದಲೇ ಹತನಾಗಿ, ಶಕ್ತಿಗುಂದಿ ನೆಲದಮೇಲೆ ಬಿದ್ದನು, ಆಶ್ವಯುಜಮಾಸದ ಹುಣ್ಣಿ ಮೆಯಲ್ಲಿ ಉತ್ಸವಾನಂತರದಲ್ಲಿ ಕೆಳಗೆ ಕಡಹಲ್ಪಡುವ ಇಂದ್ರಧ್ವಜದಂತೆ ನೆಲಕ್ಕುರುಳಿದನು ಪುರುಷಶ್ರೇಷ್ಠನಾದ ರಾಮನಾದರೋ ಹೀಗೆ ಕಾಲಮ್ಮ ತ್ಯುವಿನಂತೆ ಅತಿಕರವಾಗಿಯೂ, ಚಿನ್ನ ಬೆಳ್ಳಿಗಳಿಂದಲಂಕರಿಸಲ್ಪಟ್ಟು ದಾ ಗಿಯೂ, ಶತ್ರುಸಿಗ್ರಾಹಕವಾಗಿಯೂ, ಅಗ್ನಿ ಯಂತೆ ಜ್ವಲಿಸುವುದಾಗಿಯೂ ಇರುವ ತನ್ನ ಬಾಣವನ್ನು ,ಕಾಲರುದ್ರನು ಮುಖದಿಂದ ಬೆಂಕಿಯನ್ನು ಕಕ್ಕು ವಂತೆ ತನ್ನ ಬಿಲ್ಲಿನಿಂದ ಪ್ರಯೋಗಿಸಲು, ಇಂದ್ರಸುತನಾದ ವಾಲಿಯು ಆ ದರಿಂದ ಜರ್ಝರಿತವಾದ ದೇಹವುಳ್ಳವನಾದನು ಅವನ ದೇಹದ ಸುತ್ತ ಲೂ ರಕ್ತಪ್ರವಾಹಗಳು ಸೋರುತಿದ್ದುವು ಕಾಡುಗಿಚ್ಚಿನ ಜ್ವಾಲೆಯ ನಡು ವೆ ಸಿಕ್ಕಿಬಿದ್ದ ಪುಷ್ಟಿತವಾದ ಅಶೋಕವೃಕ್ಷದಂತೆ ಕಾಣುತ್ತ, ಉತ್ಸವಾಂ ತದಲ್ಲಿ ಹಗ್ಗವನ್ನು ಸಡಿಲಿಸಿದ ಇಂದ್ರಧ್ವಜವು ಕಳಗೆಬಿಳುವಂತೆ ನೆಲದಮೇ ಲೆ ಬಿದ್ದ ನು ಇಲ್ಲಿಗೆ ಹದಿನಾರನೆಯ ಸರ್ಗವು ++ ವಾಲಿಯು ರಾಮನನ್ನು ನಿಂದಿಸಿದುದು ++ ರಇಪಂಡಿತತನಾಗಿದ್ದರೂ ವಾಲಿಯು ಹೀಗೆ ರಾಮಬಾಣದಿಂದ ಹೊ ಡೆಯಲ್ಪಟ್ಟು, ಬುಡಕಡಿದ ಮರದಂತೆ ನೆಲದಮೇಲೆ ಬಿದ್ದೊಡನೆ, ಅವನ ೩೦ ಗಂಗಳಲ್ಲವೂ ನಿಚ್ಛೇಷ್ಟವಾದುವು ಅವನ ದೇಹದ ಆಭರಣಗಳಲ್ಲವೂ ಅಗ್ನಿ - * ಇಲ್ಲಿ ವಾಲಿಯು ಒಂದೇಬಾಣದಿಂದ ಸಂಹೃತನಾದಂತೆ ಹೇಳಲ್ಪಟ್ಟಿರುವು ದ್ದು ಮುಂದೆ ತಾರೆಯು “ರಾಮೇಷ ಪ್ರಹಿತೈ ರೌದ್ರೆರ್ಮಾರ್ಗಕ್ಕೆ ' ಎಂದು ಅ ನೇಕಬಾಣಗಳಿಂದ ಸಂಹೃತನಾದಂತೆ ಹೇಳುವಳು ಇದು ಪರಸ್ಪರ ವಿರೋಧದಂತೆ ತೋರಬಹುದು ಆದರೆ, ಮುಂದೆ ತಾರೆಯು ಒಂದೇ ಬಾಣದಿಂದ ವಾಲಿಯು ಸಂಕೃತ ನಾದುರಗಯೇ ಚಾರರಿಂದ ಕೇಳಿದ್ದರೂ, ಇಲ್ಲಿ ಬಹುಬಾಣಗಳೆಂದು ಹೇಳಿದುದು ಕುಹಕವಶ್ಯದಿಂದಲ್ಲದೆ ಬೇರೆಯಲ್ಲವೆಂದು ಗ್ರಾಹ್ಯವು.