ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨೯ ಸರ್ಗ, ೧.] ಕಿಂಧಾಕಾಂಡವು ಯಂತೆ ಜ್ವಲಿಸುತ್ತಿರಲು, ಹಗ್ಗವನ್ನು ಸಡಿಲಿಸಿದ ಇಂದ್ರಧ್ವಜದಂತೆ ಕೆಳಗೆ ಬಿದ್ದಿದ್ದನು ವಾನರರೆಲ್ಲರಿಗೂ ಅಥಿರಾಜನಾದ ವಾಲಿಯು,ಹೀಗೆ ಬಾಣದಿಂ ದ ಹತನಾಗಿ ಬಿಟ್ಟಿರಲು, ಆ ವನಭೂಮಿಯೆಲ್ಲವೂ ಚಂದ್ರನಿಲ್ಲದ ಆಕಾಶಪ್ಪ ದೇಶದಂತೆ ಕೇವಲಕಾಂತಿಹೀನವಾಗಿ ಕಾಣುತಿತ್ತು ಮಹಾತ್ಮನಾದ ಆ ವಾಲಿಯು ಹೀಗೆ ನಿಶ್ಚಮ್ಮನಾಗಿ ನೆಲದಲ್ಲಿ ಬಿದ್ದಿದ್ದರೂ, ಅವನಮುಖದ ಕ ಳೆಯಾಗಲಿ, ಅವನ ಪ್ರಾಣಗಳಾಗಲಿ, ಅವನ ತೇಜಸ್ಸಾಗಲಿ, ಅವನ ಪರಾ ಕ್ರಮವಾಗಲಿ ಅವನ ದೇಹವನ್ನು ಬಿಟ್ಟುಹೋಗಲಿಲ್ಲ ಹಿಂದೆ ಇಂದ್ರನಿಂದ ಅನುಗ್ರಹಿಸಿ ಕೊಡಲ್ಪಟ್ಟ, ವಜಾಲಂಕೃತವಾದ ಕಾಂಚನಮಾಲಿಕೆಯು ಅವನ ಪ್ರಾಣಗಳನ್ನೂ, ತೇಜಸ್ಸನ್ನೂ, ಕಾಂತಿಯನ್ನೂ ,ಅವನ ದೇಹದಿಂದ ಬಿಟ್ಟು ಹೋಗದಂತೆ ನಿಲಿಸಿತು ಸತ್ತಮವಾದ ಆ ಕಾಂಚನಮಾಲೆ ಯಿಂದಲಂಕೃತನಾಗಿದ್ದ ವಾಲಿಯ, ಆಗ ಸುತ್ತಲೂ ಅಂಚಿನಲ್ಲಿ ಸಂಧ್ಯಾ ರಾಗದಿಂದಾವರಿಸಲ್ಪಟ್ಟ ಮೇಫುದಂತೆ ಶೋಭಿಸುತ್ತಿದ್ದನು ವಾಲಿಯು ಹೀಗೆ ಬಾಣದಿಂದ ಹತನಾಗಿ ನೆಲದಮೇಲೆ ಬಿದ್ದಿದ್ದರೂ, ಸ್ವಾಭಾವಿಕವಾ ದ ದಿವ್ಯತೇಜಸ್ಸಿನಿಂದ ಕೂಡಿದ ಅವನ ದೇಹವೂ, ಆ ಕಾಂಚನಮಾಲೆ ಯೂ, ಮರದಲ್ಲಿ ನಾಟಿದ ಅಮೋಘವಾದ ರಾಮಬಾಣವೂ, ಇವು ಮೂ ರೂ ಬೇರೆ ಬೇರೆಯಾಗಿ ಪ್ರಕಾಶಿಸುತ್ತಿರುವುದನ್ನು ನೋಡಿದರೆ, ಆ ವಾಲಿಯ ತೇಜಸ್ಸೇ ಆ ಮೂರುವಿಧದಿಂದ ರಚಿಸಲ್ಪಟ್ಟಂತೆ ತೋರುತಿತ್ತು ಯುದ್ಧದ @ ಆಸ್ಕೃಹತನಾದ ವಾಲಿಗೆ ವೀರಸ್ವರ್ಗವು ಸ್ವತಸ್ಸಿದ್ಧವಾಗಿದ್ದರೂ, ಶ್ರೀ ರಾಮನ ಅವಧನುಸ್ಸಿನಿಂದ ಹೊರಟುಬಂದ ಈ ಮಹಾಸವು, ಅವನ ಮೈಗೆ ತಾಗಿದುದರಿಂದ, ಪುನರಾವೃತ್ತಿಯಿಲ್ಲದ ಸರೊತ್ತಮವಾದ ಪರಗತಿ ಲಭಿಸುವಂತಾಯಿತು ಹೀಗೆ ವಾಲಿಯು ಉರಿಯಡಗಿದ ಅಗ್ರಿ ಯಂತೆ ನೆಲದಲ್ಲಿ ಬಿದ್ದು, ತನ್ನ ಮೇಲೆ ಬಿದ್ದ ಆಬಾಣದ ವೇಗವನ್ನ ಭಿನಂದಿಸುತ್ಯಹೀಗೆ ಅದ್ಭುತಬಾಣವನ್ನು ಪ್ರಯೋಗಿಸಿದ ವೀರನಾವನೆಂಬುದನ್ನು ತಿಳಿಯುವುದ ಕ್ಯಾಗಿ ಸುತ್ತಲೂ ಕಣ್ಣಿಟ್ಟು ನೋಡುತಿದ್ದನು ವಾಲಿಯಾದರೆ ಮ ಹೇಂದ್ರನಂತೆ ಇತರದಿಂದ ಜಯಿಸಕೂಡದ ಪರಾಕ್ರಮವುಳ್ಳವನು ಮಹೇಂದ್ರನಂತೆ ಇತರರಿಗೆ ಸಹಿಸಲಸಾಧ್ಯವಾದಮಹಾವೀರವುಳ್ಳವನು ಸಾ