ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩೦ ಶ್ರೀಮದ್ರಾಮಾಯಣವು (ಸರ್ಗ, ೧೭. ಕಾಸ್ಮಹೇಂದ್ರಪುತ್ರನ ಮಹೇಂದ್ರದತ್ತವಾದ ಕಾಂಚನಮಾಲಿಕೆಯನ್ನೂ ಧರಿಸಿರುವನು ಸಿಂಹದಂತೆ ವಿಸ್ತಾರವಾದ ಎದೆಕಟ್ಟುಳ್ಳವನು ಉದ್ದವಾದ ತೋಳುಗಳುಳ್ಳವನು ಅವನ ಮುಖದಲ್ಲಿ ದಿವ್ಯತೇಜಸ್ಸು ಉಕ್ಕುತ್ತಿರುವುದು ಪಿಂಗಳವರ್ಣವಾದ ಕಣ್ಣುಗಳುಳ್ಳವನು ಹೀಗೆ ಮಹಾದ್ಭುತಲಕ್ಷಣಗ ಳುಳ್ಳವನಾಗಿದ್ದರೂ, ತನ್ನ ಪುಣ್ಯಫಲವು ಮುಗಿದಮೇಲೆ ದೇವಲೋಕದಿಂ ದ ಕೆಳಗೆ ಬಿದ್ದ ಯಯಾತಿಯಂತೆಯೂ, ಪ್ರಳಯಕಾಲದಲ್ಲಿ ದೈವಪ್ರೇರಣೆ ಯಿಂದ ಭೂಮಿಗೆ ಬಿದ್ದ ಸೂರನಂತೆಯೂ, ಶಸ್ಸ ಹತನಾಗಿ ನೆಲದಲ್ಲಿ ಬಿ ದ್ಭು, ಬಾಣಹತಿಯ ವೇದನೆಯಿಂದ ಮೆಲ್ಲಗೆ ದೃಷ್ಟಿಯನ್ನು ತಿರುಗಿಸಿ ನೋ ಡುತ್ತಿರಲು, ಅದನ್ನು ಕಂಡು ರಾಮನು ಲಕ್ಷಣಸಹಿತನಾಗಿ ಮುಂದೆ ಬಂದನು ಹೀಗೆ ಇದಿರಾಗಿ ಬರುತ್ತಿರುವ ರಾಮನನ್ನೂ , ಅವನ ಪಕ್ಕದಲ್ಲಿ ದ ಬಲಾಢನಾದ ಲಕ್ಷಣವನ್ನೂ ನೋಡಿ ವಾಲಿಯು ವಿನಯದಿಂದ ರಾ ಮನನ್ನು ಕುರಿತು,*ಮರ್ಮವನ್ನು ಭೇದಿಸುವಂತೆ ಪರುಷವಾಗಿದ್ದರೂ, ಧಮ್ಮ ಯುಕ್ತವಾಗಿರುವ ಮಾತಿನಿಂದ 1 ಎಲೈ ! ನೀನಾದರೋ ಮಹಾರಾಜ ಕುಮಾರನು ವಿಶೇಷವಾದ ಖ್ಯಾತಿಯನ್ನೂ ಹೊಂದಿದವನು ಶಾಸ್ತ್ರವಿ ಚಾರಗಳಲ್ಲಿ ಅಕ್ಕರಯುಳ್ಳವನು ಸತ್ಕುಲದಲ್ಲಿ ಹುಟ್ಟಿದವನು ಸತ್ವಗುಣ ಸಂಪನ್ನನು ಮಹಾತೇಜಸ್ವಿ ಯು ಅನೇಕವ್ರತಗಳನ್ನು ನಡೆಸಿದವನು ಎದ್ದ ರೇನು?+ಈಗ ನಾನು ನಿನ್ನನ್ನು ಇರಿಸದೆ, ಬೇರೊಬ್ಬನೊಡನೆ ಯುದ್ಧವನ್ನು

  • ಇಲ್ಲಿ ಅಬ್ರವೀತ್ಪರುಷಂ ವಾಕ್ಯಂ ಪ್ರಶಿತಂ ಧರ ಸಂಹಿತಂ” ಎಂದು ಮೂಲವು ಹೊರಕ್ಕೆ ಪರುಷವಾಗಿ ಕಾಣುತಿದ್ದರೂ ವಾಲಿಯು ರಾಮನನ್ನು ಕುರಿ

ತು ವಿನಯದಿಂದಲೂ, ಭರದಿಂದಲೂ ಕೂಡಿದ ಮಾತುಗಳನ್ನೇ ಹೇಳುತಿದ್ದನೇ ಹೊರ ತು ನಿಂದಿಸಲಿಲ್ಲವೆಂದು ಗ್ರಹಿಸಬೇಕು, ನಿಂದಾವಾಕ್ಯಗಳಂತೆ ತೋರುವ ಕೆಲವು ಮಾ ತುಗಳಿಗೆ ಮಾತ್ರ ಅನ್ವಯಭೇದದಿಂದಲೂ, ಅರಭೇದದಿಂದಲೂ ಸ್ತುತಿರೂಪವಾದ ವಾ ಪ್ರವಾರ್ಥವು ಅಲ್ಲಲ್ಲಿ ವಿವರಿಸಲ್ಪಡುವುದು, + ಅಲ್ಲಿ 'ಪರಾಜ್ಜುಖವಧಂ ಕೃತ್ವಾಕೆನುಪ್ರಾಸ್ತಯಾಗಣೆ: | ಯ ದಹಂ ಯುದ್ಧಸಂರಂಭಶರೇಣೋರಸಿ ತಾಡಿತ:” ಎಂದು ಮೂಲವು ಇದರ ವಾಸ್ತ್ರ ವಾರವೇನೆಂದರೆ, “ಆತ್ಮಪರಾಣ್ಮುಖನಾಗಿ ವಿಷಯಲೋಲನಾಗಿರುವ ನನ್ನನ್ನು ಕೊಂ