ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಶ್ರೀಮದ್ರಾಮಾಯಣವು [ಸರ್ಗ ೧೬. ಬೃರೊಡನೆ ಯುದ್ಧಮಾಡುವ ಆತುರದಲ್ಲಿದ್ದಾಗ, ನೀನು ನನ್ನನ್ನು ಏನೂ ಮಾಡಲಾರೆಯೆಂದೂ ತಿಳಿದಿದ್ದೆನು ನಿನ್ನನ್ನು ನೋಡುವುದಕ್ಕೆ ಮೊದಲು ನಾನು ನಿನ್ನ ಖ್ಯಾತಿಯೆಲ್ಲವನ್ನೂ ನಿಜವೆಂದೇ ತಿಳಿದಿದ್ದೆನು ಈಗ ನಿನ್ನ ಸ್ವಭಾ ವವು ಚೆನ್ನಾಗಿ ಸ್ಪಷ್ಟವಾಯಿತು * ನೀನು ಹೀಗೆ ಬುದ್ಧಿಗೆಟ್ಟವನೆಂದೂ, ಲೋಕವನ್ನು ವಂಚಿಸುವುದಕ್ಕಾಗಿ ಧಮ್ಮಚಿಹ್ನಗಳನ್ನು ಧರಿಸಿರುವೆಯೆಂದೂ ನನಗೆ ತಿಳಿಯದೆಹೋಯಿತು ಇಂತಹ ಪಾಪಬುದ್ಧಿಯುಳ್ಳ ನೀನು ಮೇಲೆ ಹುಲ್ಲುಹೊದೆಸಿದ ಬಾವಿಯಂತೆ ಹೊರಗೆಮಾತ್ರ ಧರಥಜವನ್ನು ಧರಿಸಿರುವೆಯೆಂದು ನನಗೆ ತಿಳಿದಿರಲಿಲ್ಲ ಬೂದಿಮುಚ್ಚಿದ ಬೆಂಕಿಯಂತೆ, ಮೇಲೆ ಮಾತ್ರ ಸತ್ಪುರುಷರ ವೇಷವನ್ನು ಧರಿಸಿ,ಥವೆಂಬ ನೆಪದಿಂದ ನಿಜ ಸ್ವಭಾವವನ್ನು ಮರೆಸಿಕೊಂಡಿರುವ ನೀನು ಹೀಗೆ ಕುಟಿಲಬುದ್ಧಿಯುಳ್ಳವ ನೆಂದು ನನಗೆ ತಿಳಿಯದೆ ಹೋಯಿತು ರಾಮಾ' +ನಾನು ನಿನ್ನ ದೇಶಕ್ಕೆ ಬಂ ದವನಲ್ಲ ನಿನ್ನ ಪಟ್ಟಣಕ್ಕೆ ಕಾಲಿಟ್ಟವನಲ್ಲ ನಾನು ನಿನಗೆ ಯಾವವಿಧದಲ್ಲಿ ಯೂ ಅಪರಾಥಮಾಡಿದವನಲ್ಲ ಹಿಂದೆ ಎಂದಾದರೂ ನಾನು ನಿನ್ನನ್ನು ಅವಮಾನಪಡಿಸಿದವನೂ ಅಲ್ಲ' ಹೀಗೆ ನಿರ್ದೋಷಿಯಾದ ನನ್ನನ್ನು ನೀನು ಕೊಲ್ಲಲು ಕಾರಣವೇನು? ಅಲ್ಲಲ್ಲಿ ಹಣ್ಣು ಗಡ್ಡೆಗಳನ್ನು ಕಿತ್ತು ತಿಂದು, ಕಾಡಿ ನಲ್ಲಿ ವಾಸಮಾಡುತ್ತಿರುವ ಕೇವಲವಾನರನಾದ ನನ್ನನ್ನು ನೀನು ಕೊಲ್ಲಬ ಹುದೆ? ಇದರಮೇಲೆ ನಾನು ನಿನ್ನೊಡನೆ ಯುದ್ಧಕ್ಕೆ ನಿಂತವನೂ ಅಲ್ಲ ಮ ತೊಬ್ಬರೊಡನೆ ಯುದ್ಧಕ್ಕೆ ನಿಂತು, ಆ ಸಂಭ್ರಮದಿಂದ ನಾನು ಪರಾ ಬ್ಬುಖನಾಗಿರುವಾಗ ಹಿಂದಿನಿಂದ ಹೊಡೆದೆಯಲ್ಲಾ ' ನೀನು ಸ್ವಭಾವ

  • ಇಲ್ಲಿ 'ನಾಂವಿನಿಹತಾತ್ಮಾನಂ ಧರ ಧ್ವಜಮಧಾರಿ ಕಂ। ಜಾನೇಪಾಪಸಮಾಚಾ ರಂ ತೃಣೆ ಕೂಪಮೀವಾವೃತ೦ll ಸತಾಂವೇಷಧರಂಪಾಪಂ ಪ್ರಚ್ಛನ್ನ ಮಿವಪಾವಕಂ। ನಾಹಂತ್ಯಾಮಭಿಜಾನಾಮಿಧರ “ದ್ಯಾಭಿಸಂವೃತಂ”ಎಂದುಮೂಲವು.ಅಧಾರಿ ಕಾದಿ ದುರ್ಗುಣಗಳಾವವನ್ನೂ ನಾನು ನಿನ್ನಲ್ಲಿ ಕಾಣಲಿಲ್ಲವೆಂದು ಇಲ್ಲಿನ ವಾಸ್ತವಾರವು

+ ಇಲ್ಲಿ ಕಸ್ಮಾತ್‌ ಹಂಗ್ಯಕಿಷಂ” ಎಂದು ಮೂಲವು “ನೀನು ನಿರಪರಾಧಿ ಗಳನ್ನು ಎಂದಿಗೂ ದಂಡಿಸತಕ್ಕವನಲ್ಲ 'ಹೀಗಿರುವಾಗಲೂ ನೀನು ನನ್ನನ್ನು ದಂಡಿಸಿ ದುದರಿಂದಲೇ ನಾನು ಅಪರಾಧಿಯೆಂಬುದು ಸ್ಪಷ್ಟವಾಗುವುದೆಂದು ವಾಸ್ತವಾರವು