ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬.] ಕಿಂಧಾಕಾಂಡವು ೧೪೩೩. ದಿಂದ ಕಪಟಿಯಾಗಿ ಮೇಲೆಮಾತ್ರ ಧವನ್ನಭಿನಯಸುತ್ತಿರುವೆಯೇ ಹೊ ರತು ಬೇರೆಯಲ್ಲ ಈಗ ನೀನು ನಡೆಸಿದ ಅಕೃತ್ಯದಿಂದಲೇ ನಿನ್ನ ಕಾಪಟ್ಯವು ಸ್ಪಷ್ಟವಾಗುವುದು *ಕ್ಷತ್ರಿಯಕುಲದಲ್ಲಿ ಹುಟ್ಟಿ, ವಿದ್ಯಾವಂತನಾದ ಯಾ ವನು ತಾನೇ ಹೀಗೆ ಧಮ್ಮವೇಷದಿಂದ ತನ್ನನ್ನು ಮರೆಸಿಕೊಂಡು ಇಂತಹ ಕೂರಕಾರವನ್ನು ನಡೆಸುವನು? ರಾಮಾ' ನೀನು ರಾಜವಂಶದಲ್ಲಿ ಹುಟ್ಟಿ ಧರ ಜ್ಞನೆಂಬ ಖ್ಯಾತಿಯನ್ನು ಹೊಂದಿರುವೆ +ಹೀಗಿದ್ದರೂ ಕೂರಸ್ವಭಾ ವವನ್ನು ಬಿಡದೆ ಇತರರನ್ನು ವಂಚಿಸುವುದಕ್ಕಾಗಿಯೇ ಹೊರಗೆ ಸಾಧುತ್ವವ ಭಿನಯಿಸುತ್ತ ಹೀಗೆ ಸಂಚರಿಸುವೆಯಾ' ಎಲೈರಾಜನೆ' ಸಾಮ, ದಾನ, ತಾಳ್ಮೆ, ಧರ, ಸತ್ಯ, ಧೈಯ್ಯ, ಪರಾಕ್ರಮ, ಅಪರಾಧಿಗಳನ್ನು ದಂಡಿಸುವು ದು, ಇವೆಲ್ಲವೂ ರಾಜರಿಗಿರಬೇಕಾದ ಗುಣಗಳು, ನಾವಾದರೋ ಗಡ್ಡೆಗೆಣಸು ಗಳನ್ನು ತಿಂದು, ಕಾಡಿನಲ್ಲಿ ಸಂಚರಿಸುವ ಮೃಗಗಳು ಇದೇ ನಮಗೆ ಸ್ವಭಾ

  • ಇಲ್ಲಿ ಸಾಮಾನ್ಯ ಕ್ಷತ್ರಿಯರೇ ಕೂರಕಾರವನ್ನು ಮಾಡುವುದಕ್ಕಂಜುವಾಗ ಸರೋಶ್ವರನಾದ ನಿನ್ನ ವಿಷಯದಲ್ಲಿ ಹೇಳತಕ್ಕುದೆನೆಂದು ವಾಸ್ತವಾರ್ಥವು

ಇಲ್ಲಿ 'ಅಭಭವ್ಯರೂಪೇಣ ಕಿ ತರಂ ಪರಿಧಾ ನಸಿ” ಎಂದುಮೂಲವು ಇದರಲ್ಲಿ ತ್ವಂ ಅಭವ್ಯರ್ಸ್ತ ಅರಮುದ್ದಿಶ್ಯ ಭವರೂಪೇಣ ಪರಿಭಾವಸಿ ಕಿಂ?” ಎಂದು ಅನ್ವಯಭೇದವನ್ನು ಮಾಡಿ, ನೀನುಪ್ರಾಕೃತರಾದ ಬೇರೆ ಹೀನಜನರಂತೆ, ಪ್ರ ಯೋಜನಾಪೇಕ್ಷೆಯಿಂದ ಸಾಥುವೇಷವನ್ನು ಹಾಕಿಕೊಂಡು ಇಂತಹಕೂರಕಾರವನ್ನು ನಡಸತಕ್ಕ ವನ' ಎಂದಿಗೂ ಹಾಗಲ್ಲ” ವೆಂದು ಭಾವವು

  • ಇಲ್ಲಿ ರಾಜನೀತಿಯನ್ನು ವಿಚಾರಿಸಿದರೂ ಕೂಡ ಅಪರಾಧಿಯಾದ ನನ್ನನ್ನು ದಂಡಿಸಿದುದು ನಿನಗೆ ಯುಕ್ತವೇ?” ಎಂದುಭಾವವು |

S ಇಲ್ಲಿ ನಿನಗೂ ನನಗೂ ವೈರಪ್ರಸಕ್ತಿಯೇ ಇಲ್ಲವು, ನಾವು ಕಾಡಿನಲ್ಲಿರುವ ವರು ನೀವು ಪುರವಾಸಿಗಳು ನಾವು ಹಣ್ಣುಗಡ್ಡೆಗಳನ್ನು ತಿನ್ನುವವರು ನೀವು ಮೃಷ್ಟಾನ್ನವನ್ನು ಭುಜಿಸತಕ್ಕವರು ನಾವು ಮೃಗಗಳು, ನೀವು ಮನುಷ್ಯರು, ಆ ದುದರಿಂದ ನಮ್ಮಿಬ್ಬರಿಗೂ ಈರ್ಸ್ಯೆಗೆ ಕಾರಣವಿಲ್ಲ ಇದಲ್ಲದೆ ನಮ್ಮಿಬ್ಬರಿಗೂ ಭೂಹಿ ರಣ್ಯಗಳೇ ಮೊದಲಾದ ಇತರವೈರಕಾರಣಗಳೂ ಇಲ್ಲ ಹೀಗೆ ವೈರಪ್ರಸಕ್ತಿಯೇ ಇಲ್ಲ ದಿರುವಾಗಲೂ ನೀನು ನನ್ನನ್ನು ಹೊಡೆದುದಕ್ಕೆ ನನ್ನ ಅಪರಾಧವೇ ಕಾರಣವಲ್ಲದೆ ಬೇ ರೆಯಲ್ಲ” ವೆಂದು ಭಾವವು