ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಶ್ರೀಮದ್ರಾಮಾಯಣವ (ಸರ್ಗ ೧೮. ತೋರಿದ್ದ ಪಕ್ಷದಲ್ಲಿ,ನಿನಗೆ ತೋರಿದ ಸಮಾಧಾನವನ್ನು ಹೇಳು ನೋಡುವೆ ನು” ಎಂದನು ಹೀಗೆ ಮಹಾತ್ಮನಾಗಿಯೂ ಇಂದ್ರಪುತ್ರನಾಗಿಯೂ ಆ ರುವ ವಾಲಿಯು, ಬಾಣಹತಿಯುಂಟಾದ ವೇದನೆಯಿಂದ ಸಂಕಟಪಡುತ್ತ, ರಾಮನನ್ನು ಕುರಿತು ಈ ಮಾತುಗಳನ್ನಾಡುತ್ತಿರುವಷ್ಟರಲ್ಲಿಯೇ, ಆಯಾಸ ಡಿಂದ ಬಾಯೊಣಗಿ, ಸರಸಮಾನನಾದ ಆ ರಾಮನನ್ನೇ ನಟ್ಟ ಕಣ್ಣಿ ನಿಂದ ನೋಡುತ್ತ ಸುಮ್ಮನಾದನು ಇಲ್ಲಿಗೆ ಹದಿನೇಳನೆಯಸರ್ಗವು ++ ರಾಮನು ವಾಲಿಗೆ ತಕ್ಕ ಸಮಾಧಾನಗಳನ್ನು ಹೇಳಿದುದು ++ ಹೀಗೆ ವಾಲಿಯು ಹತನಾಗಿ ಬಿದ್ದು, ಜ್ಞಾನಾಜ್ಞಾನದಿಂದ ರಾಮ ನನ್ನು ಕುರಿತು ವಿನಯದೊಡನೆ ಥರಾರ್ಥಸಹಿತವಾಗಿಯೂ, ತನಗೆ ಯುಕ್ತವೆಂದು ತೋರಿದುದಾಗಿಯೂ ಇರುವ ಮಾತಿನಿಂದ, ಮರ್ಮೋದ್ಯಾ ರಾಲೋಚಿಸಿಯೇ, ರಾಮನು ವಾಲಿಯನ್ನು ಕೊಲ್ಲುವಕಾಲದಲ್ಲಿ ಅದ್ರಶ್ಯನಾಗಿರಬೇಕಾ ಯಿತು ಮುಖ್ಯವಾಗಿ ತನ್ನ ಅವತಾರಕ್ಕೆ ಫಲವಿಲ್ಲದೆ ದೂಗುವುದೆಂಬುದಕ್ಕಾಗಿ, ವಾ ಲಿಯೊಡನೆ ಸ್ನೇಹವನ್ನು ಬೆಳೆಸುವುದಕ್ಕಿಲ್ಲದೆ ಹೋಯಿತು ಇದನ್ನನುಸರಿಸಿಯೇ ಕ ಬಂಧನೂ ಸುಗ್ರೀವನನ್ನು ತೋರಿಸಿಬಿಟ್ಟುದರಿಂದ, ಆವಾಲಿಗೆ ವೈರಿಯಾದ ಸುಗ್ರೀವ ನೊಡನೆ ಸ್ನೇಹವನ್ನು ಮಾಡಬೇಕಾಯಿತು ಆ ಸ್ನೇಹವಾತ್ಸಲ್ಯದಿಂದ ವಾಲಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆಯನ್ನೂ ಮಾಡಬೇಕಾಯಿತು, ಆ ಪ್ರತಿಜ್ಞೆಗೆ ಭಂಗವು ಬರ ಬಾರದೆಂಬುದಕ್ಕಾಗಿ ನಿರಪರಾಧಿಯಾಗಿದ್ದರೂ ವಾಲಿಯನ್ನು ಕೊಲ್ಲಬೇಕಾಯಿತು ಬ್ರ ಹೇಂದ್ರಾದಿಗಳ ವಾಕ್ಯವನ್ನು ಪಾಲಿಸುವುದಕ್ಕಾಗಿಯೇ ತಾನು ಅದೃಶ್ಯನಾಗಿಯೂ ನಿಂ ತು ಆತನನ್ನು ಕೊಲ್ಲಬೇಕಾಯಿತೆಂದೂ ಗ್ರಾಹ್ಯವು ಈ ಕಾರಣಗಳಿಂದಲೂ, ರಾಮನು ಮುಂದೆ ಹೇಳುವ ಇತರಸಮಾಧಾನಗಳಿಂದಲೂ ರಾಮನು ಇಲ್ಲಿ ವಾಲಿಯನ್ನು ಕೊಂ ದುದು ಯುಕ್ತವೆಂದೇ ತಿಳಿಯಬೇಕು. • ಇವಲ್ಲದೆ ರಾಮನು ವಾಲಿಗಿದಿರಾಗಿ ನಿಲ್ಲದುದಕ್ಕೆ ಮತ್ತೆರಡು ಮುಖ್ಯ ಕಾರಣಗ ತುಂಟ ವೀರಕ್ಷತ್ರಿಯನಾದ ತಾನು ಕಪಿಯೊಡನೆ ಯುದ್ಧಕ್ಕೆ ನಿಲ್ಲವುದು ಅವಮಾನ ಕರವೆಂಬುದೊಂದು, ಅಥವಾ ಹಾಗೆ ನಿಂತರೂ ನಾಲಿಯು ತನ್ನ ಮಹಿಮೆಯನ್ನು ತಿಳಿ ದು ತನ್ನಲ್ಲಿ ಶರಣಾಗತನಾದರೆ, ಹಿಂದೆ ಹೇಳಿದಂತೆ ಅವತಾರಫಲವು ಕೆಡುವುದೊಂದು, ಇವೆರಡು ಕಾರಣಗಳಿಂದಲೂ ಮರೆಯಲ್ಲಿರಬೇಕಾಯಿತೆಂದೂ ಗ್ರಾಹ್ಯವು