ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮.] ಕಿಂಧಾಕಾಂಡವು ೯೪೪a ಟಕವಾಗಿ ಆಕ್ಷೇಪಿಸಿದನು ಕಾಂತಿಹೀನನಾದ ಸೂರನಂತೆಯೂ, ನೀರಿ ಲ್ಲದ ಮೇಫುದಂತೆಯೂ, ಉರಿಯಿಲ್ಲದ ಬೆಂಕಿಯಂತೆಯೂ, ಕಾಂತಿಗುಂದಿ ನೆಲ ದಮೇಲೆ ಬಿದ್ದು ನಿಶ್ಚಿಷ್ಯನಾಗಿದ್ದರೂ, ವಾಲಿಯು ತನ್ನನ್ನು ಹೀಗೆ ಆಕ್ಷೇ ಪಿಸುವುದನ್ನು ನೋಡಿ ರಾಮನು, ಧರಾರ್ಥಯುಕ್ತವಾಗಿಯೂ, ಗುಣವಿಶಿ ಪ್ಯವಾಗಿಯೂ ಇರುವ ಮಾತಿನಿಂದ, ಆವಾಲಿಯ ಮನಸ್ಸಿಗೊಪ್ಪವಂತೆ ಸ ಮಾಧಾನವನ್ನು ಹೇಳತೊಡಗಿದನು 'ಎಲೈ,ವಾನರರಾಜನೆ' ಮೊದಲು ನೀನು ಧರವನ್ನಾಗಲಿ, ಅರ್ಥವನ್ನಾಗಲಿ, ಕಾಮವನ್ನಾಗಲಿ, ಇತರಲೌಕಿಕಾಚಾರ ಗಳನ್ನಾಗಲಿ ತಿಳಿದುಕೊಳ್ಳದೆ, ಇವೆಲ್ಲಕ್ಕೂ ವಿರುದ್ಧವಾಗಿ ನಡೆಯುತ್ತಿರುವ ವನಾದರೂ, ಅಜ್ಞಾನದಿಂದ ನನ್ನಲ್ಲಿ ದೋಷವನ್ನಾ ರೋಪಿಸಿ, ನಿರ್ದೋಷಿ ಯಾದ ನನ್ನನ್ನು ಹೀಗೇಕ ನಿಂದಿಸುವೆ'ಸೀನು ಕೇವಲಚಪಲಬುದ್ಧಿಯುಳ್ಳ ವನು ಬುದ್ಧಿವಂತರಾಗಿಯೂ,ವೃದ್ಧರಾಗಿಯೂ, ಪೂಜ್ಯರಾಗಿಯೂ ಇರುವ ಆ ಚಾತ್ಯರ ಮುಖದಿಂದ ನೀನು ಈ ಧಾರ್ಥಕಾಮಾದಿಗಳ ಸ್ವರೂಪವೊಂದ ನ್ನೂ ಚೆನ್ನಾಗಿ ತಿಳಿದುಕೊಳ್ಳದೆ, ನಿನ್ನ ಕವಿಸ್ವಭಾವಕ್ಕೆ ತಕ್ಕ ಚಾಪಲ್ಯದಿಂದ ನನ್ನನ್ನು ಕುರಿತು ಹೀಗೆ ವ್ಯರ್ಥವಾದ ಮಾತುಗಳನ್ನಾಡುತ್ತಿರುವೆ ನಿನ್ನ ಆ ಕ್ಷೇಪಗಳಿಗೆ ಸಮಾಧಾನವನ್ನು ಹೇಳುವೆನು ಕೇಳು ಪಕ್ವತಗಳಿಂದಲೂ, ಕಾಡುಗಳಿಂದಲೂ, ಮಹಾರಣ್ಯಗಳಿಂದಲೂ ತುಂಬಿದ ಈ ಭೂಮಂಡ ಲವೆಲ್ಲವೂ ಇಕ್ಷಾಕುವಂಶದ ರಾಜರಿಗೆ ಅಧೀನವಾಗಿರುವುದು ಇಲ್ಲಿನ ಮೃಗ ಗಳನ್ನಾಗಲಿ, ಪಕ್ಷಿಗಳನ್ನಾಗಲಿ, ಮನುಷ್ಯರನ್ನಾಗಲಿ, ನಿಗ್ರಹಿಸುವುದ ಕ್ಯೂ, ಅನುಗ್ರಹಿಸುವುದಕ್ಕೂ ನಮ್ಮ ಇಕ್ಷಾಕುವಂಶದವರಿಗೆ ಪೂರ್ಣಾಥಿ ಕಾರವುಂಟು ಆ ವಂಶದಲ್ಲಿ ಹುಟ್ಟಿ, ಧಮ್ಮಾತ್ಮನಾಗಿಯೂ, ಸತ್ಯಸಂಥನಾಗಿ ಯೂ, ನಿಷಪಟನಾಗಿಯೂ ಇರುವ ಭತನು ಈಗ ಈ ಭೂಪ್ರದೇಶವೆಲ್ಲ. ವನ್ನೂ ಪಾಲಿಸುತ್ತಿರುವನು. ಆತನು ಧಾರ್ಥಕಾಮಗಳ ತತ್ವವನ್ನು ಚೆ ಸ್ನಾಗಿ ಬಲ್ಲನು ದುಷ್ಟರನ್ನು ನಿಗ್ರಹಿಸಿ, ಸಾಧುಗಳನ್ನ ನಗ್ರಹಿಸಿ, ಧಮ್ಮವ ನ್ನು ಬಿಡದೆ ಭೂಮಿಯನ್ನು ರಕ್ಷಿಸುತ್ತಿರುವನು ಯಾವನಲ್ಲಿ ನಯವಿನಯ ಗಳೆಂಬಿವೆರಡೂ ಸ್ಥಿರವಾಗಿ ನಿಂತಿರುವವೋ, ಸತ್ಯವೂ ಶಾಸ್ತ್ರವಿಹಿತವಾದ ಪರಾಕ್ರಮವೂ ಎಡೆಬಿಡದೆ ನೆಲೆಗೊಂಡಿರುವುವೋ, ಯಾವನು ದೇಶಕಾಲ