ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪ ಶ್ರೀಮದ್ರಾಮಾಯಣವು (ಸರ್ಗ ೧೮. ಸ್ಥಿತಿಗಳನ್ನು ಚೆನ್ನಾಗಿ ಬಲ್ಲನೋ ಅಂತಹ ಭರತನೇ ಈಗ ಈ ಭೂಮಿಗೆ ರಾಜ ನಾಗಿರುವನು ನಾವೂ ಇನ್ನು ಬೇರೆ ಕೆಲವು ರಾಜರೂ ಧರಾಭಿವೃದ್ಧಿಯ ನ್ನು ಕೂರಿ * ಆ ಭರತನ ರಾಜಧರವನ್ನನುಸರಿಸಿ, ಅದಕ್ಕಧೀನರಾಗಿಯೇ ಈ ಭೂಮಿಯೆಲ್ಲವನ್ನೂ ಸುತ್ತುತ್ತಿರುವೆವು ಧಮ್ಮಪರಾಯಣನಾಗಿ ರಾಜ ಸಿಂಹನೆನಿಸಿಕೊಂಡಿರುವ ಆ ಭರತನು, ಈ ಸಮಸ್ತ ಭೂಮಂಡಲವನ್ನೂ ಧರಕ್ಕೆ ಸ್ವಲ್ಪ ಮಾತ್ರವೂ ಲೋಪವು ಜಾರದಂತ ಪರಿಪಾಲಿಸುತ್ತಿರು ವನು ಆತನ ರಾಜ್ಯಭಾರದಲ್ಲಿ ಯಾವಕಡೆಯಲ್ಲಿಯೂ ಧರಕ್ಕೆ ಹಾನಿ ಯುಂಟಾಗಲಾರದು ಅದನ್ನು ಮೀರಿ ನಡೆದವರು, ತಪ್ಪದೆ ಶಿಕ್ಷೆಗೆ ಗುರಿ ಯಾಗುವರು ಆತನಿಂದ ಆಜ್ಞರಾದ ನಾವೂ, ಸರೊತ್ತಮವಾದ ನ ಮ್ಮ ರಾಜಧರವನ್ನ ವಲಂಬಿಸಿ, ಆತನ ಆಜ್ಞೆಯನ್ನೇ ಮುಂದಿಟ್ಟುಕೂಂ ಡು ಅಲ್ಲಲ್ಲಿ ಸುತ್ತುತ್ತ, ಧಮ್ಮವನ್ನು ತಪ್ಪಿನಡೆದವರನ್ನು ಯಥಾವಿಧಿಯಾಗಿ ಶಿಕ್ಷಿಸುತ್ತಿರುವೆವು ಎಲೆ ವಾಲಿ " ನೀನಾದರೂ ಧರದಲ್ಲಿ ಸ್ವಲ್ಪವೂ ದೃಷ್ಟಿಯಿಟ್ಟವನಲ್ಲ ನಿನ್ನ ಕಾರಿಗಳಿಂದಲೇ ಸೀನು ಲೋಕನಿಂದಿತನೆಂಬು ದು ಸ್ಪಷ್ಟವಾಗುವುದು ನಿನಗೆ ಕಾಮವ್ಯಾಪಾರವೇ ಮುಖ್ಯವು ನೀನು ಯಾ ವಾಗಲೂ ರಾಜಯೋಗ್ಯವಾದ ನಡತೆಯಲ್ಲಿ ಇದ್ದವನಲ್ಲ ನಿನಗೆ ಧರಸೂಕ್ಷ

  • ಇಲ್ಲಿ 'ತಸ್ಯಧರ ಕೃತಾದೇಶಾ...” ಎಂದು ಮೂಲವು, ಕನಿಷ್ಠನಾದ ಭರ ತನು ತನ್ನಷ್ಣನಾದ ರಾಮನಿಗೆ ನಿಯೋಗಿಸುವುದು ಹೇಗೆ?” ಎಂದರೆ, ಇಲ್ಲಿ ಧರ ವೆಂ ದರೆ ರಾಜಧರ ವೆಂದು ಗ್ರಹಿಸಬೇಕು ಭರತನು ತಾನಾಗಿ ಆಜ್ಞೆ ಮಾಡದಿದ್ದರೂ, ಅವನ ರಾಜಧರವೇ ರಾಮನಿಗೆ ಆಜ್ಞಾಪಿಸುತ್ತಿರುವದೆಂದು ಭಾವವು ದುಷ್ಯನಿಗ್ರಹಶಿಷ್ಪ ರಿಪಾಲನಗಳೆರಡೂ ಪ್ರಧಾನವಾದ ರಾಜಧರ ವನಿಸುವುದರಿಂದ, ಈ ರಾಜಧರಕ್ಕೆ ಕ ಟ್ಟುಬಿದ್ದ ತಾನು ನಡೆಯುತ್ತಿರುವುದಾಗಿ ರಾಮನ ಅಭಿಪ್ರಾಯವು ಅಥವಾ ಇಲ್ಲಿ' ಸಧರ ಕೃತಾದೇಶಾ” ಎಂಬುದಕ್ಕೆ ರಾಮನು ರಾಜಧರ ವನ್ನನುಸರಿಸಿ ಭರತನಿಗೆ `ತಾನೇ ಆಜ್ಞೆ ಮಾಡಿರುವುದಾಗಿಯೂ ಗ್ರಹಿಸಬಹುದು ಹಿಂದೆ ಅಯೋಧ್ಯಾಕಾಂಡದ ನೂರೇಳನೆಯ ಸರ್ಗದಲ್ಲಿ, ರಾಜ್ಯಭಾರವನ್ನಂಗೀಕರಿಸದೆ ಕಾಡಿಗೆ ಬಂದ ಭರತನನ್ನು ಕುರಿತು ರಾಮನು ತ್ವಂ ರಾಜಾ ಭರತ ಭವ ಸ್ವಯಂ ನರಾಣಾಂ ವನ್ಯಾನಾಮಹಮ ಪಿ ರಾಜರಾಗಾಣಾಂ” ಎಂದು 'ನಿಯಮಿಸಿರುವುದರಿಂದ, ಆ ವಾಕ್ಯವನ್ನನುಸರಿಸಿ ಯೇ ಈಗ ತಾನೂ ನಡೆಸುತ್ತಿರುವುದಾಗಿ ತಿಳಿಯಬೇಕು