ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮.] ಕಿಷಿಂಧಾಕಾಂಡವು. ೧೪೪೫ ವನ್ನಾದರೂ ತಿಳಿಸುವೆನು ಕೇಳು ಹೆತ್ತ ತಂದೆಯನ್ನೂ, ಅಣ್ಣನನ್ನೂ , ವಿ ಹೈ ಹೇಳಿದ ಗುರುವನ್ನೂ, ಈ ಮೂವರನ್ನೂ ಧಮಾರ್ಗನಿರತರಾದವರು ತಂದೆಯಂತೆಯೇ ಭಾವಿಸಬೇಕು ಹಾಗೆಯೇ ಹಿರಿಯರೂಕೂಡ ಥರವನ್ನು ತಪ್ಪದೆ ನಡೆದುಕೊಳ್ಳುವರಾದಪಕ್ಷ -ಲ್ಲಿ, ಹೊಟ್ಟೆಯಲ್ಲಿ ಹುಟ್ಟಿದ ಮಗನ ನ್ಯೂ , ತಮ್ಮನನ್ನೂ, ಗುಣವಂತನಾದ ಶಿಷ್ಯನನ್ನೂ ,ಔರಸಪುತ್ರರಂತೆಯೇ ಭಾವಿಸಬೇಕು ಥರವನ್ನು ಮೀರಿ ನಡೆಯುವವರಿಗೆ ಈ ಬುದ್ದಿಯು ಹುಟ್ಟ ದು ಎಲೈ ವಾನರೇಂದ್ರನೆ ! ಧಮ್ಮಸೂಕ್ಷವೆಂಬುದು ಸುಲಭವಾಗಿ ಇಂದ್ರಿಯಗಳಿಗೆ ಗೋಚರಿಸತಕ್ಕುದಲ್ಲ ಥೀಮಂತರಾದ ಸತ್ಪುರುಷರಿಗೂ ಕೂಡ ಅದನ್ನು ತಿಳಿಯುವುದು ಸಾಧ್ಯವಲ್ಲ ಇನ್ನು ನಿನ್ನಂತಹ ಪ್ರಾ ಕೃತರಿಗೆ ಅದು ಹೇಗೆ ತಿಳಿದೀತು? ಜನರು ನಡೆಸತಕ್ಕ ಥರಾಥರಗ ಳೆಲ್ಲವೂ ಸಮಸ್ತಭೂತಗಳ ಹೃದಯದಲ್ಲಿರುವ * ಅಂತಲ್ಯಾಮಿಯೊಬ್ಬನಿಗೆ ಮಾತ್ರವೇ ತಿಳಿಯುವುದು, ಆ ಪರಮಾತ್ಮನೊಬ್ಬನೇ ಶುಭಾಶುಭಗಳಿಗೆ ಕಾ ರಣಗಳಾದ ಥರಾಥರಗಳ ಸೂಕ್ಷವನ್ನು ತಿಳಿಯಬಲ್ಲನೇ ಹೊರತು ಇತ ರರಿಂದ ತಿಳಿಯಲಸಾಧ್ಯವು ನೀನೋ ಕೇವಲ ಚಪಲಸ್ವಭಾವವಳ್ಳವನು ಹುಟ್ಟುಕುರುಡನು ಬೇರೆ ಕೆಲವು ಹುಟ್ಟುಕುರುಡರೊಡನೆ ಸೇರಿ ಮಂತ್ರಾ ಲೋಚನೆಯನ್ನು ಮಾಡುವಂತೆ, ನೀನು ನಿನ್ನಂತೆಯೇ ಚಪಲಬುದ್ಧಿಯು ತೃ ಇತರವಾನರರೊಡನೆ ಕಲೆತು ಎಷ್ಟಾಲೂಚಿಸಿದರೇನು? ನಿನಗೆ ತಿಳುವ ಳಿಕೆಯುಂಟಾಗದು ಎತ ವಾಲಿ' ಮಗನೂ ತಮ್ಮನೂ, ಶಿಷ್ಯನೂ ಪತ್ರ ಪ್ರಾಯರೆಂಬ ನೀತಿಯನ್ನು ನಾನು ಮೊದಲು ನಿನಗೆ ಹೇಳಿದೆನಲ್ಲವೆ? ಆಮಾ ತಿನಃಅಭಿಪ್ರಾಯವನ್ನೇ ಇನ್ನೂ ಸ್ಪಷ್ಟವಾಗಿ ತಿಳಿಸುವೆನು ಕೇಳು ಆಗ ನಿನ್ನ ದೊಷವು ನಿನಗೆ ಚನ್ನಾಗಿ ತಿಳಿಯಬಹುದು ಅದೊಂದನ್ನೂ ಪರಾಲೋ ಚಿಸದೆ, ಕೇವಲ ರೋಷದಿಂದ ಹೀಗೆ ನನ್ನನ್ನು ನಿಂದಿಸುವುದು ನಿನಗೆ ಎ ಷ್ಟು ಮಾತ್ರವೂ ಉಚಿತವಲ್ಲ ನಿನ್ನನ್ನು ಕೊಂದುದಕ್ಕೆ ಕಾರಣವೇ ಬೇರೆ | ನೀನು ಸನಾತನಧರವನ್ನು ಬಿಟ್ಟು ನಿನ್ನ ತಮ್ಮ ನಾದ ಸುಗ್ರೀವನ

  • ಅಂತಹ ಪರಮಾತ್ಮನು ತಾನೇ ಆಗಿರುವುದರಿಂದ, ತನಗೊಬ್ಬನಿಗೆಹೊರತು ಇತರರಿಗೆ ಆ ಧರಾಧರ ಸೂಕ್ಷಗಳು ತಿಳಿಯಲಾರವೆಂದು ಭಾವವು,