ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧] ಕಿಷಿಂಧಾಕಾಂಡವು. ೧೩೪೬ ಸಂದೇಹವಿಲ್ಲ ದುಃಖವನ್ನು ಬಿಡು' * ಈಮನ್ಮಥವಿಕಾರವನ್ನೂ ನಿಗ್ರಹಿಸಿಡು! ನೀನಾದರೋ ಮಹಾಮಹಿಮೆಯುಳ್ಳವನು ಅಸಾಧಾರಣವಾದ ಬುದ್ಧಿಯು ತೃವನು ಹೀಗಿರುವ ನಿನ್ನ ಸ್ಥಿತಿಯನ್ನೇ ನೀನುಮರೆತುಹೋಗಿರುವೆಯಲ್ಲಾ!” ಎಂದು ನಾನಾವಿಧವಾಗಿ ಸಮಾಧಾನಗಳನ್ನು ಹೇಳಿದನು ರಾಮನು ವಿಶೇಷ ಶೋಕಾಕುಲನಾಗಿದ್ದರೂ ಲಕ್ಷಣನ ಹಿತವಾದಗಳನ್ನು ಕೇಳಿದೊಡನೆಮನ ಸ್ಸಿನಲ್ಲಿದ್ದ +ಶೋಕಮೋಹಗಳನ್ನು ಬಿಟ್ಟು ಧೈಲ್ಯವನ್ನು ತಂದುಕೊಂಡನು. ಅಚಿಂತ್ಯವಿಕ್ರಮನಾದ ರಾಮನು, ಹೀಗೆ ಸ್ಥಿರಮನಸ್ಸುಳ್ಳವನಾಗಿ ಮುಂದೆ ನಡೆದು, ಗಾಳಿಯಿಂದ ತೂಗಾಡುತ್ತಿರುವ ವೃಕ್ಷಗಳುಳ್ಳುದಾಗಿಯೂ, ಅತಿ ರಮಣೀಯವಾಗಿಯೂ ಇರುವ ೯ ಪಂಪಾಸರಸ್ಸನ್ನೂ ದಾಟಿಹೋದನು ಹೀಗೆ ಮಹಾತ್ಮನಾದ ರಾಮನ ಲಕ್ಷಣಸಹಿತನಾಗಿ, ಅಲ್ಲಲ್ಲಿ ಕಾಣುವ ಸಮಸ್ತವನವನ್ನೂ, ಗಿರಿನದಿಗಳನ್ನೂ, ಪರೂತಗುಹೆಗಳನ್ನೂ ಸುತ್ತಿ ಸುತ್ತಿ ನೋಡುತ್ತ, ಸೀತೆಯನ್ನು ಕಾಣದೆ ಮನಸ್ಸಿನಲ್ಲಿ ಕೊರಗುತ್ತ,ದುಃಖಿತನಾಗಿ ಮುಂದೆ ಹೊರಟನು ಮದದಾನೆಯಂತೆ ಗಂಭೀರವಾದ ನಡೆಯುಳ್ಳ ಮ ಹಾತ್ಮನಾದ ಲಕ್ಷಣನಾದರೆ,ಹೀಗೆ ಏಕಾಗ್ರಚಿತ್ತನಾಗಿ ಸೀತೆಯನ್ನು ಹುಡುಕುತ್ತ ಮುಂದೆಮುಂದೆ ನಡೆಯುತ್ತಿರುವ ರಘುವಂಶೋತ್ತಮನಾಡ ಆ ರಾಮನನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತ, ಆಗಾಗ ಅವನಿ ಗೆ ರಾಜನೀತಿಗಳೇ ಮೊದಲಾದ ದರಗಳನ್ನು ತಿಳಿಸಿ ಸಮಾಧಾನಪಡಿಸುತ್ತ,

  • ಇಲ್ಲಿ 'ತ್ಯಜ್ಯತಾಂ ಕಾಮವೃತ್ತತ್ಸಮ್ಎಂದು ಮೂಲವು ಇದರಿಂದ ಲಕ್ಷ ನನು ರಾಮನನ್ನು ಕುರಿತು ನೀನೇಕೆ ಹೀಗೆ ವಾತ್ಸಲ್ಯದಿಂದ ತಪಿಸುವೆ? “ಸಾಧುಕಾ ರೀ ಸಾಧುರ್ಭವತಿ, ಪಾಪಕಾರೀ ಪಾಪೀಭವತಿ” ಎಂಬುದಾಗಿ ನೀನೇ ಸಂಕಲ್ಪಿಸಿರುವೆ ಯಲ್ಲವೆ? ಈ ಶಾಸ್ತ್ರ ಮರ್ಯಾದೆಯನ್ನು ಸ್ಮರಿಸಿ ಸುಮ್ಮನಿರದೆ, ಈ ಯಥೇಚ್ಛಪ್ರವ ರ್ತನವೇಕೆಂದು ಜ್ಞಾಪಿಸಿದುದಾಗಿ ವಿಶೇಷಾರ್ಥವು |

↑ ಇಲ್ಲಿ ಶೋಕಮೋಹಶಬ್ದಗಳಿಂದ ಭಗವಂತನ ದಯಾವಾತ್ಸಲ್ಯಗಳೆಂದು ಗ್ರಾಹ್ಯವು ಅವೆರಡನ್ನೂ ತ್ಯಜಿಸುವುದೆಂದರೆ ಶಾಸ್ತ್ರ ಮರ್ಯಾದೆಯನ್ನನುಸರಿಸಿ ಚೇತ ನರನ್ನು ರಕ್ಷಿಸುವುದಕ್ಕೆ ಸಂಕಲ್ಪಿಸಿದುದಾಗಿ ಭಾವವು ↑ ಇದರಿಂದ ಭಗವಂತನು ವಿರಜೆಯನ್ನೂ ದಾಟಿ ಸಂಸಾರಿಮಂಡಲಕ್ಕ ಬಿಮುಶ ನಾಗಿರುವನೆಂದು ಸೂಚಿತವು"